ನಿರಾಶ್ರಿತರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ; ಬಸವರಾಜ ನಾಯ್ಕ್

By Kannadaprabha NewsFirst Published Aug 26, 2022, 12:05 PM IST
Highlights
  • ನಿರಾಶ್ರಿತರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ
  • ತುರ್ಚಘಟ್ಟದ ಬಳಿ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಭೂಮಿಪೂಜೆ
  • ಭಿಕ್ಷಾಟನೆ ನಿರ್ಮೂಲನೆಗೆ ರಾಜ್ಯವ್ಯಾಪಿ ಕೇಂದ್ರ: ಬಸವರಾಜ ನಾಯ್ಕ

ದಾವಣಗೆರೆ (ಆ.26) : ತುರ್ಚಘಟ್ಟಸಮೀಪದ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಸುಮಾರು 6 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಇಲ್ಲಿ ಆಶ್ರಯದ ಜೊತೆಗೆ ಕೃಷಿ, ಹೈನು, ತೋಟಗಾರಿಕೆ, ಬ್ಯಾಗ್‌ ಹೆಣೆಯುವುದೂ ಸೇರಿದಂತೆ ಸ್ವಯಂ ಉದ್ಯೋಗ ತರಬೇತಿ ನೀಡಿ ಹೊಸ ಬದುಕು ಕಟ್ಟಿಕೊಡುವ ಕೆಲಸವಾಗುತ್ತಿದೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಶ್ಲಾಘಿಸಿದರು.

ಮಕ್ಕಳನ್ನು ಬಳಸಿಕೊಂಡು ಬಿಕ್ಷಾಟನೆ ಮಾಡುವ ದಂಧೆಗೆ ಬೀಳಲಿದೆ ಬ್ರೇಕ್

ತಾಲೂಕಿನ ತುರ್ಚಘಟ್ಟಗ್ರಾಮದ ನಿರಾಶ್ರಿತರ ಪರಿಹಾರ ಕೇಂದ್ರ(Refugee Relief Centre)ದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆ(Department of Social Welfare)ಯಿಂದ ಸುಮಾರು 581.55 ಲಕ್ಷ ರು. ವೆಚ್ಚದ ಆಡಳಿತ ಕಚೇರಿ, ಅಧೀಕ್ಷಕರ ವಸತಿ ಗೃಹ, ನಿರಾಶ್ರಿತರ ತರಬೇತಿ ಘಟಕ, ಪ್ರಾಥಮಿಕ ಆರೋಗ್ಯ ಘಟಕ, ಹಸು-ಎಮ್ಮೆ-ಕುರಿ ಶೆಡ್‌, ಹೆಚ್ಚುವರಿ ಪುರುಷರ ಡಾರ್ಮಿಟರಿ, ಹಳೆ ಕಟ್ಟಡ ದುರಸ್ತಿ, ನವೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಇನ್ನು ಒಂದು ವರ್ಷದಲ್ಲೇ ಈ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಬೇಕು ಎಂದರು.

ನಿರಾಶ್ರಿತರಿಗೆ ಆಶ್ರಯ ನೀಡಿ, ಸ್ವಯಂ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಅಂತಹವರ ಜೀವ ರಕ್ಷಣೆ, ಸ್ವಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸಬೇಕು. ದಾವಣಗೆರೆ ಅಷ್ಟೇ ಅಲ್ಲ, ಬೇರೆ ಜಿಲ್ಲೆಗಳಲ್ಲಿ ಇರುವ ಭಿಕ್ಷುಕರನ್ನೂ ಇಲ್ಲಿ ಕರೆ ತರಬಹುದು. ಸುಮಾರು 200 ಜನ ಪುರುಷ-ಮಹಿಳಾ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಕೆಲಸ ಇಲ್ಲಿ ಶೀಘ್ರವೇ ಆಗಲಿದೆ ಎಂದು ಹೇಳಿದರು.

ನಿರಾಶ್ರಿತರ ಕೇಂದ್ರಗಳಿಗೆ ಕಾಯಕಲ್ಪ: ಬೆಗ್ಗರ್‌ ಸೆಸ್‌ ಅಂತಾ ಪ್ರತಿ ಜಿಲ್ಲೆಯಲ್ಲೂ ಸಂಗ್ರಹವಾಗುವ ಹಣದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಸರ್ಕಾರ ನಡೆಸುತ್ತದೆ. ಸುಮಾರು 89 ಕೋಟಿ ರು. ಬೆಗ್ಗರ್‌ ಸೆಸ್‌ ಇದೆಯೆಂದು ಮಂಡಳಿ ಹೇಳುತ್ತಿದೆ. ರಾಜ್ಯದ ನಿರಾಶ್ರಿತರ ಕೇಂದ್ರಗಳಿಗೆ ಕಾಯಕಲ್ಪ ನೀಡುವ ಕೆಲಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಂಡಳಿ ಅಧ್ಯಕ್ಷ ಎಂ.ಬಸವರಾಜ ನಾಯ್ಕ ಮಾಡುತ್ತಿರುವುದು ಪ್ರೇರಣಾದಾಯಕವಾಗಿದೆ. ಮಹಿಳೆಯರು, ಮಕ್ಕಳನ್ನು ಬಳಸಿಕೊಂಡು ಯಾರಾದರೂ ಭಿಕ್ಷೆ ಬೇಡುತ್ತಿದ್ದರೆ ತಕ್ಷಣ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದರೆ, ಅಂತಹವರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

10 ಕಡೆ ಭೇಟಿ ನೀಡಿ: ಕೇಂದ್ರ ಪರಿಹಾರ ಸಮಿತಿ ಸದಸ್ಯ, ಅಧ್ಯಕ್ಷ ಎಂ.ಬಸವರಾಜ ನಾಯ್ಕ ಮಾತನಾಡಿ, ನಿರಾಶ್ರಿತರ ಕೇಂದ್ರದಲ್ಲಿ ಮಹಿಳೆಯರಿಗೆ 100 ಬೆಡ್‌, 100 ಗಂಡು ಮಕ್ಕಳಿಗೆ, ಕಚೇರಿ ಕಟ್ಟಡಕ್ಕೆ 6 ಕೋಟಿ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ 10 ಕಡೆ ಭೇಟಿ ನೀಡಿ, ನಿರಾಶ್ರಿತರ ಸಮಸ್ಯೆ ಸರಿಪಡಿಸಲು ಚಿಂತನೆ ನಡೆಸಿದ್ದೇವೆ. ಮಂಡಳಿ ಕಾರ್ಯದರ್ಶಿ ಅರ್ಚನಾ ಸಂಸ್ಥೆಯಲ್ಲಿ ಸಾಕಷ್ಟುಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕೇಂದ್ರಕ್ಕೂ ಡೈನಿಂಗ್‌ ಟೇಬಲ್‌ ನೀಡಲಿದ್ದು, 2500 ಜನರಿಗೆ 600 ಟೇಬಲ್‌ ಸಿದ್ಧಪಡಿಸಲು ಆದೇಶ ನೀಡಿದ್ದೇವೆ ಎಂದು ಹೇಳಿದರು.

ಕೋವಿಡ್ ಬಳಿಕ ಬೆಂಗಳೂರಲ್ಲಿ ಹೆಚ್ಚಾಗಿದೆ ಭಿಕ್ಷುಕರ ಸಂಖ್ಯೆ!

ಬೆಳವನೂರು ಗ್ರಾಪಂ ಅಧ್ಯಕ್ಷ ಎಸ್‌.ಟಿ.ಹನುಮಂತಪ್ಪ, ಮಂಡಳಿ ಕಾರ್ಯದರ್ಶಿ ಅರ್ಚನಾ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್‌, ದಿಶಾ ಸಮಿತಿ ಸದಸ್ಯ ಸಂಗಣ್ಣ, ಜಿಪಂ ಮಾಜಿ ಸದಸ್ಯ ನಟರಾಜ, ಶಿವಮೂರ್ತಿ, ಪರಮೇಶ ನಾಯ್ಕ, ಸಾಧನಾ ವೃದ್ಧಾಶ್ರಮದ ಅಧ್ಯಕ್ಷೆ ಪುಷ್ಪಲತಾ ಇತರರು ಇದ್ದರು.

ಬ್ರಿಟಿಷರ ಕಾಲದ ಡಿಸಿ, ಎಸಿ ಕಚೇರಿ, ರೈಲ್ವೆ ನಿಲ್ದಾಣ ಇಂದಿಗೂ ಸುಭದ್ರವಾಗಿದೆ. ಆದರೆ, ಈಗಿನ ಕಟ್ಟಡಗಳ ಕಟ್ಟಿ5 ವರ್ಷಕ್ಕೆ ಹಾಳಾಗುತ್ತಿವೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಅಧಿಕಾರಿಗಳೂ, ಸ್ಥಳೀಯ ಮುಖಂಡರೂ ಇದರ ಬಗ್ಗೆ ನಿಗಾ ಇಡಬೇಕು. ಸರ್ಕಾರದ ಅನುದಾನ ಸದ್ಭಳಕೆಯಾಗಿ, ಶಾಶ್ವತ ಕಾಮಗಾರಿ ಆಗಬೇಕು.

ಡಾ.ಜಿ.ಎಂ.ಸಿದ್ದೇಶ್ವರ, ಸಂಸದ

ಶಿವಮೊಗ್ಗ, ದಾವಣಗೆರೆ ಸೇರಿದಂತೆ ಅನೇಕ ಕಡೆ ನಿರಾಶ್ರಿತರ ಪರಿಹಾರ ಕೇಂದ್ರದ ಕಾಮಗಾರಿ ಶುರುವಾಗಿವೆ. ಸ್ವಯಂ ಉದ್ಯೋಗ ತರಬೇತಿಯನ್ನೂ ಆಶ್ರಿತರಿಗೆ ನೀಡುತ್ತಿದ್ದು, ಸೆಸ್‌ ಹಣ ಮಾತ್ರ ಬರುತ್ತಿದೆ. ಊಟಕ್ಕೆ ಹೆಚ್ಚು ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಿದ್ದೇವೆ. ಮಾಂಸಹಾರಿಗಳಿಗೆ ಸದ್ಯ ಮೊಟ್ಟೆಮಾತ್ರ ನೀಡುತ್ತಿದ್ದು, 60 ವರ್ಷ ಮೇಲ್ಪಟ್ಟವರಿಗೆ ಜೀರ್ಣ ಸಮಸ್ಯೆ ಆಗಬಹುದೆಂಬ ವೈದ್ಯರ ಸಲಹೆ ಮೇರೆಗೆ ಮಾಂಸಹಾರ ನೀಡುತ್ತಿಲ್ಲವಷ್ಟೇ.

ಎಂ.ಬಸವರಾಜ ನಾಯ್ಕ, ಅಧ್ಯಕ್ಷರು, ಸದಸ್ಯರು, ಕೇಂದ್ರ ಪರಿಹಾರ ಸಮಿತಿ ಸದಸ್ಯ

click me!