ಬಾಂಬರ್ ಆದಿತ್ಯರಾವ್‌ನ ಇಂಟ್ರೆಸ್ಟಿಂಗ್ ಕಹಾನಿ ಕೇಳಿದ ಪೊಲೀಸರು

By Suvarna News  |  First Published Jan 25, 2020, 10:14 AM IST

ಮಂಗಳೂರು ಬಾಂಬರ್ ಆದಿತ್ಯ ರಾವ್‌ನ ವಿಚಾರಣೆ ನಡೆಯುತ್ತಿದ್ದು, ಇದೀಗ ಆದಿತ್ಯ ರಾವ್ ಪೊಲೀಸರಿಗೆ ಇಂಟ್ರೆಸ್ಟಿಂಗ್ ಕಥೆಗಳನ್ನು ಹೇಳುತ್ತಿದ್ದಾನೆ. ತನ್ನದೇ ಲೈಫ್‌ನ ಕಥೆಗಳನ್ನು ಪೊಲೀಸರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ.


ಮಂಗಳೂರು(ಜ.25): ಮಂಗಳೂರು ಬಾಂಬರ್ ಆದಿತ್ಯ ರಾವ್‌ನ ವಿಚಾರಣೆ ನಡೆಯುತ್ತಿದ್ದು, ಇದೀಗ ಆದಿತ್ಯ ರಾವ್ ಪೊಲೀಸರಿಗೆ ಇಂಟ್ರೆಸ್ಟಿಂಗ್ ಕಥೆಗಳನ್ನು ಹೇಳುತ್ತಿದ್ದಾನೆ. ತನ್ನದೇ ಲೈಫ್‌ನ ಕಥೆಗಳನ್ನು ಪೊಲೀಸರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ.

ಮಂಗಳೂರು ಏರ್ಪೋರ್ಟ್‌ಗೆ ಬಾಂಬ್ ಇಟ್ಟ ಪ್ರಕರಣದಲ್ಲಿ ಶುಕ್ರವಾರ ಆದಿತ್ಯರಾವ್‌ನನ್ನು ಜೊತೆಗೇ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿತ್ತು. ಈ ಸಂದರ್ಭದಲ್ಲಿಯೂ ಆದಿತ್ಯ ರಾವ್ ಎಲ್ಲವನ್ನೂ ಪೊಲೀಸರಿಗೆ ವಿವರಿಸಿದ್ದ. ಹೇಗೆ ಬಂದ, ಏನು ಮಾಡಿದ, ಎಲ್ಲೆಲ್ಲಿ ಹೋದ ಎಲ್ಲ ವಿಚಾರವನ್ನೂ ತಿಳಿಸಿದ್ದ.

Tap to resize

Latest Videos

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೆ ಆದಿತ್ಯ, ಕೃತ್ಯವೆಸಗಿದ ಸ್ಥಳ ಮಹಜರು

ವಿಚಾರಣೆ ವೇಳೆ ಪೊಲಿಸರು ಆದಿತ್ಯರಾವ್ ಇಂಟರಿಸ್ಟಿಂಗ್ ಕಥೆ ಕೇಳಿದ್ದಾರೆ. ಹಲವು ಇಂಟರೆಸ್ಟಿಂಗ್ ಕಹಾನಿ ಹೇಳಿದ ಆದಿತ್ಯರಾವ್ ತನ್ನ ಜೀವನದ ರೋಚಕ ಕತೆಗಳನ್ನು ನಿರ್ಭಿಡೆಯಿಂದ ಹೇಳಿಕೊಂಡಿದ್ದಾನೆ. ಮಂಗಳೂರು ಉತ್ತರ ಎಸಿಪಿ ಕಚೇರಿಯಲ್ಲಿ ತನಿಖೆ ಮುಂದುವರಿದಿದೆ.

ಇಂದು ಆದಿತ್ಯ ಕೆಲಸ ಮಾಡುತ್ತಿದ್ದ ಮಂಗಳೂರಿನ ಹೊಟೇಲ್‌ನಲ್ಲಿ ಮಹಜರು ನಡೆಯಿದೆ. ಮಂಗಳೂರಿನ ಕುಡ್ಲ ಕ್ವಾಲಿಟಿ ಹೊಟೇಲ್‌ನಲ್ಲಿ ಮಹಜರು ನಡೆಯಲಿದೆ. ಬಳಿಕ ಉಡುಪಿಯ ಕಾರ್ಕಳದ ಕಿಂಗ್ಸ್ ಹೊಟೇಲ್ ಮತ್ತು ಮಣಿಪಾಲ ನಿವಾಸಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್

click me!