ತಪ್ಪಿಸಿಕೊಂಡ ದಿನ 2 ಗಂಟೆ ಮಾತ್ರ ನಿದ್ರಿಸಿದ ಆದಿತ್ಯ ರಾವ್

By Kannadaprabha NewsFirst Published Jan 26, 2020, 3:15 PM IST
Highlights

ಬಾಂಬರ್ ಆದಿತ್ಯ ಹೋಟೆಲ್‌ನಿಂದ ತಪ್ಪಿಸಕೊಳ್ಳುವ ದಿನ ಕೇವಲ 2 ಗಂಟೆಯಷ್ಟೇ ನಿದ್ರಿಸಿದ್ದ. ಗೋಡೆಯ ಸುತ್ತಲೂ ಎರಡು ಬಾರಿ ಸುತ್ತುಹಾಕಿ ಸಿಸಿ ಕ್ಯಾಮೆರಾದಿಂದ ಸೆರೆಯಾಗದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಬಳಿಕ ಮುಂಜಾನೆ 4.20ಕ್ಕೆ ಹಿಂಬದಿ ಗೇಟ್‌ನಿಂದ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಮಂಗಳೂರು(ಜ.26): ಬಾಂಬರ್ ಆದಿತ್ಯ ಪರಾರಿಯಾಗುವ ಮುನ್ನ ತಡರಾತ್ರಿ ಕೇವಲ ಎರಡೇ ಗಂಟೆ ಕಾಲ ನಿದ್ರಿಸಿದ್ದಾನೆ. ಭಾನುವಾರ ರಾತ್ರಿ 12 ಗಂಟೆಗೆ ಕಾರ್ಕಳದಲ್ಲಿ ಆತ ಕೆಲಸ ಮಾಡುತ್ತಿದ್ದ ಕಿಂಗ್ಸ್‌ಕೋರ್ಟ್ ರೆಸ್ಟೋರೆಂಟ್ ಬಂದ್ ಮಾಡಿದ ಬಳಿಕ ದಾಸ್ತಾನು ಕೊಠಡಿಗೆ ತೆರಳಿದ್ದಾನೆ.

ಅಲ್ಲಿ ಎರಡೇ ಗಂಟೆ ಕಾಲ ನಿದ್ರಿಸಿ, ಹೋಟೆಲ್ ಹಿಂಭಾಗದಲ್ಲಿ ಸುತ್ತಾಡಿದ್ದಾನೆ. ಗೋಡೆಯ ಸುತ್ತಲೂ ಎರಡು ಬಾರಿ ಸುತ್ತುಹಾಕಿ ಸಿಸಿ ಕ್ಯಾಮೆರಾದಿಂದ ಸೆರೆಯಾಗದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಬಳಿಕ ಮುಂಜಾನೆ 4.20ಕ್ಕೆ ಹಿಂಬದಿ ಗೇಟ್‌ನಿಂದ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

'ಬಿಜೆಪಿಗೆ ವಲಸೆ ಹೋದ 17 ಜನಕ್ಕೆ ಸಚಿವ ಸ್ಥಾನ ಪಕ್ಕಾ'..!

ಜ.18ರ ಶನಿವಾರ ಕಾರ್ಕಳದಲ್ಲಿನ ಹೋಟೆಲ್‌ಗಳ ಹೆಸರು ಹಾಗೂ ಮೊಬೈಲ್ ಫೋನ್ ನಂಬರ್ ವಿಳಾಸ ಪಡೆದಿದ್ದ. ಜಸ್ಟ್ ಡಯಲ್ ಮೂಲಕ ಆತ ಮೂರು ಹೋಟೆಲ್‌ಗಳ ನಂಬರ್ ಪಡೆದಿದ್ದಾನೆ. ಮೊದಲು ಆತ ಕಾರ್ಕಳದ ರಾಕ್‌ಸೈಡ್ ಹೋಟೆಲ್ ಮಾಲೀಕರಿಗೆ ಕರೆ ಮಾಡಿ ಕೆಲಸ ಕೇಳಿದ್ದಾನೆ. ಅಲ್ಲಿ ಕೆಲಸ ಸಿಗದ ಕಾರಣ ಕೊನೆಗೆ, ರಾತ್ರಿ 7.20ಕ್ಕೆ ಕಿಂಗ್ಸ್ ಕೋರ್ಟ್ ರೆಸ್ಟೋರೆಂಟ್‌ಗೆ ಆಗಮಿಸಿ ಕೆಲಸ ಕೇಳಿದ್ದಾನೆ.

ಸರ್ಕಾರ ಉಳಿಸೋಕೆ ಸಚಿವ ಸ್ಥಾನ ತ್ಯಾಗಕ್ಕೆ ಮುಂದಾದ್ರಾ ಮಾಧುಸ್ವಾಮಿ..?

ಹೊಟೇಲ್ ಮ್ಯಾನೇಜರ್ ಪದ್ಮನಾಭ ಅವರು, ಹೋಟೆಲ್ ಕೆಲಸದ ಅನುಭವದ ಬಗ್ಗೆ ವಿಚಾರಿಸಿದಾಗ ಆದಿತ್ಯ ಅನುಭವ ಇರುವುದಾಗಿ ಹೇಳಿದ್ದಾನೆ. ನಂತರ ಆತನಿಂದ ಆಧಾರ್ ಕಾರ್ಡ್ ಪಡೆದು ಕೆಲಸ ನೀಡಿದ್ದರು. ಶನಿವಾರ ರಾತ್ರಿಯೇ ಆತ ವೇಯ್ಟರ್ ಆಗಿ ಕೆಲಸ ಆರಂಭಿಸಿದ ಆದಿತ್ಯ ಭಾನುವಾರ ಇಡೀ ದಿನ ಕೆಲಸ ಮಾಡಿದ್ದಾನೆ. ರಾತ್ರಿ ಬರೀ ನೆಲದಲ್ಲಿ ಪತ್ರಿಕೆಯನ್ನು ಹಾಸಿಕೊಂಡು ಮಲಗಿದ್ದ. ಆತ ತಂಗಿದ್ದ ದಾಸ್ತಾನು ಕೊಠಡಿಯಲ್ಲಿ ಹತ್ತಾರು ಸಿಬ್ಬಂದಿಯಿದ್ದರೂ ಯಾರೊಂದಿಗೂ ಒಂದಕ್ಷರ ಮಾತಾಡಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

click me!