ಧಾರವಾಡ ಬಳಿ ಭೀಕರ ಅಪಘಾತ: ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರ ದುರ್ಮರಣ

Suvarna News   | Asianet News
Published : Jan 26, 2020, 02:51 PM IST
ಧಾರವಾಡ ಬಳಿ ಭೀಕರ ಅಪಘಾತ: ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರ ದುರ್ಮರಣ

ಸಾರಾಂಶ

ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ| ನಾಲ್ಕು ಮಂದಿ ಸಾವು| ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ(4)ರಲ್ಲಿ ನಡೆದ ಘಟನೆ| ಗಾಯಾಳು ಸೋಮಣ್ಣ ದೇಸಾಯಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧಿ|

ಧಾರವಾಡ(ಜ.26): ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರು ಸಾವನ್ನಪ್ಪಿ, ಮೂವರಿಗೆ ಗಾಯಗಳಾದ ಘಟನೆ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ(4)ರಲ್ಲಿ ಇಂದು(ಭಾನುವಾರ) ನಡೆದಿದೆ. 

ಮೃತ ನಾಲ್ವರಲ್ಲಿ ಉಳಿದ ಮೂವರ ಹೆಸರು ತಿಳಿದು ಬಂದಿಲ್ಲ. ಬಸಪ್ಪ ಪೂಜಾರ, ಸಿದ್ದಪ್ಪ ಇಂಗಳ್ಳಳ್ಳಿ, ಸೋಮಣ್ಣ ದೇಸಾಯಿ ಗಾಯಗೊಂಡವರಾಗಿದ್ದಾರೆ.ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳು ಸೋಮಣ್ಣ ದೇಸಾಯಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಯಾಗಿದ್ದಾರೆ. ಆಸ್ಪತ್ರೆಗೆ ವಿನಯ್ ಕುಲಕರ್ಣಿ ಭೇಟಿ ನೀಡಿ ಸೋಮಣ್ಣ ದೇಸಾಯಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಿವಾನಂದ ಮಠದ ಸ್ವಾಮೀಜಿಗಳು ಇಂದು ಬೆಳಗ್ಗೆಯಷ್ಟೇ ಶಿವಾನಂದ ಮಠದ ಶಾಲೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. ಸ್ವಾಮೀಜಿ ಗಣರಾಜ್ಯೋತ್ಸವ ಮುಗಿಸಿ ಧಾರವಾಡದಲ್ಲಿ ನಡೆಯುತ್ತಿದ್ದ ಭಕ್ತರೊಬ್ಬರ ಮದುವೆಗೆ ಆಗಮಿಸುತ್ತಿದ್ದರು. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

PREV
click me!

Recommended Stories

BREAKING: ದಾವಣಗೆರೆ ಗಡಿ ಭಾಗದಲ್ಲಿ ಭಾರೀ ಸ್ಫೋಟದ ಸದ್ದು; ಭೂಮಿ ಕಂಪಿಸಿದ ಅನುಭವ, ಚಿಕ್ಕಮಲ್ಲನಹೊಳೆ ಗ್ರಾಮಸ್ಥರಲ್ಲಿ ಆತಂಕ
20 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ವೃದ್ಧ ದಂಪತಿಯನ್ನ ಒಂದುಗೂಡಿಸಿದ ಲೋಕ ಅದಾಲತ್!