ಬೆಂಗಳೂರಿನಲ್ಲಿ ವ್ಯಾಪಾರ ನಷ್ಟ ಅನುಭವಿಸಿದ ವ್ಯಕ್ತಿಯೊಬ್ಬ ಪ್ರತಿಸ್ಪರ್ಧಿಗಳನ್ನು ಸಿಲುಕಿಸಲು ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ರಿಪಬ್ಲಿಕ್ ದಿನದಂದು ಬಾಂಬ್ ಸ್ಫೋಟದ ಸುಳ್ಳು ಮಾಹಿತಿ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜ.14): ಬ್ಯುಸಿನೆಸ್ ಲಾಸ್ ಆಗಿದ್ದಕ್ಕೆ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದ ಆಸಾಮಿ ಈಗ ಅಂದರ್ ಆಗಿದ್ದಾನೆ. ಈತ ಮಾಡಿದ್ದ ಕರೆ ಹೇಗಿತ್ತು ಅಂದರೆ, ಪೊಲೀಸರು ಇದೊಂದು ಸುಳ್ಳು ಬೆದರಿಕೆ ಕರೆ ಎಂದು ಅಂದುಕೊಳಳುವ ಹಾಗೆಯೇ ಇರಲಿಲ್ಲ. ಕೊನೆಗೆ ಈ ಬಗ್ಗೆ ತನಿಖೆ ಮಾಡಿದಾಗ ಗೊತ್ತಾಗಿದ್ದೇನೆಂದರೆ, ತನ್ನ ಪ್ರತಿಸ್ಪರ್ಧಿ ವ್ಯಾಪಾರಿಗಳನ್ನು ಸುಳ್ಳು ಕೇಸ್‌ನಲ್ಲಿ ಸಿಕ್ಕಿಹಾಕಿಸುವ ಉದ್ದೇಶದಿಂದ ಆತ ಈ ಕರೆ ಮಾಡಿದ್ದ. ತನ್ನ ಬ್ಯುಸಿನೆಸ್ ಲಾಸ್ ಆಗಿದ್ದಕ್ಕೆ ಇವರೆಲ್ಲರೂ ಕಾರಣ ಎಂದು ಅವರನ್ನು ಸಿಕ್ಕಿಹಾಕಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.
ಜನವರಿ 9 ರ ಸಂಜೆ ಬೆಂಗಳೂರು ಕಮಿಷನರ್ ಕಚೇರಿ ಕಂಟ್ರೋಲ್ ರೂಮ್‌ಗೆ ಮನ್ಸೂರ್ ಎನ್ನುವ ವ್ಯಕ್ತಿ ಕರೆ ಮಾಡಿದ್ದ. ರಿಪಬ್ಲಿಕ್ ಡೇ ದಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ರೀತಿ ಬೆಂಗಳೂರು ನಗರದಾದ್ಯಂತ ಬ್ಲಾಸ್ಟ್ ಮಾಡಲು ಸಿದ್ದತೆ ನಡೆಯುತ್ತಿದೆ. ನಾಡ ಬಾಂಬ್ ಬಳಸಿ ನಗರದಾದ್ಯಂತ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದಾರೆಂದು ಕರೆ ಮಾಡಿದ್ದ. ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದ ವ್ಯಕ್ತಿ ತನ್ನ ಹೆಸರು ರಿಯಾಜ್ ಎಂದು ಹೇಳಿಕೊಂಡಿದ್ದ.
ಈ ಕೃತ್ಯದಲ್ಲಿ ಭಾಗಿಯಾಗಲಿರುವ ಆರು ಮಂದಿಯ ಹೆಸರು ಹಾಗೂ ಪೋನ್ ನಂಬರ್ ಕಂಟ್ರೋಲ್ ರೂಂ ಗೆ ನೀಡಿದ್ದ. ಈ ಆರು ಮಂದಿ ರಿಪಬ್ಲಿಕ್ ಡೆ ದಿನ ನಾಡ ಬಾಂಬ್ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದ. ಕೆ.ಆರ್. ಮಾರ್ಕೆಟ್‌ನ ಇಸ್ಮಾಯಿಲ್, ಬೊಮ್ಮನಹಳ್ಳಿ ಅಲ್ತಾಫ್, ಜೆಸಿನಗರದ ನಾಹೀದ್, ಹೆಚ್.ಬಿ.ಆರ್ ಲೇಔಟ್ ನ ಅಮ್ಜದ್, ನೀಲಸಂದ್ರದ ಹುಮಾಯೂನ್, ಹಾಗೂ ತಬ್ರೇಜ್ ಹೆಸರು ಹಾಗೂ ಮೊಬೈಲ್ ನಂಬರ್ ನೀಡಿದ್ದ. ಖಚಿತ ಮಾಹಿತಿ ಇರಬಹುದೆಂದು ಬೆಂಗಳೂರು ಪೊಲೀಸರು ಕೂಡ ಫುಲ್ ಅಲರ್ಟ್ ಆಗಿದ್ದರು.
ಅಸಲಿಗೆ ಆರೋಪಿಯನ್ನ ಪತ್ತೆ ಮಾಡಿದಾಗ ಹೊರಬಂದ ವಿಚಾರವೇ ಬೇರೆಯಾಗಿದೆ. ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದ ವ್ಯಕ್ತಿ ಹೆಸರು ರಿಯಾಜ್ ಅಲ್ಲ ಆತನ ಹೆಸರು ಮನ್ಸೂರ್ ಅನ್ನೋದು ಗೊತ್ತಾಗಿತ್ತು. ಲ್ಲದೇ ಕರೆ ಮಾಡಿದ ವೇಳೆ ಆತ ತಿಳಿಸಿದ್ದ ಮೊಬೈಲ್ ನಂಬರ್ ಹಾಗೂ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ಮಾಡಿದ್ದರು.
Bengaluru: 6 ವರ್ಷದ ಬಾಲಕಿಯ ರೇಪ್ & ಮರ್ಡರ್, ದಾರುಣ ಘಟನೆಗೆ ಸಾಕ್ಷಿಯಾದ ರಾಜಧಾನಿ!
ಬಾಂಬ್ ಬೆದರಿಕೆ ಕರೆ ಮಾಡಿದ್ದೇಕೆ: ಬೆದರಿಕೆ ಕರೆ ಮಾಡಿದ್ದ ಮನ್ಸೂರ್ ಕೆ.ಅರ್.ಮಾರ್ಕೆಟ್ ಬಳಿ ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ. ಆತನ ಪ್ರಾವಿಜನ್ ಸ್ಟೋರ್ ಗೆ ವ್ಯಾಪಾರ ಕಡಿಮೆಯಾಗಿ ಅಂಗಡಿಯನ್ನು ಮುಚ್ಚಿದ್ದ. ಹೊಸದಾಗಿ ಸ್ಕ್ರಾಪ್ ಬ್ಯುಸಿನೆಸ್ ಮಾಡಲು ಪ್ಲಾನ್ ಮಾಡಿದ್ದ. ಆದರೆ, ಇದೂ ಕೂಡ ಕೈಕೊಟ್ಟಿತ್ತು.
Hassan: ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ್ಬಿಟ್ಲು, ಪೆಟ್ರೋಲ್ ತರ್ತೀನಿ ಅಂತಾ ಹೋದವನು ಫೋಟೋ ಆಗ್ಬಿಟ್ಟ
ಹೀಗಾಗಿ ಕೆ.ಆರ್.ಮಾರ್ಕೆಟ್ ನಲ್ಲಿ ಪ್ರಾವಿಜನ್ ಸ್ಟೋರ್ ನಡೆಸ್ತಿದ್ದ ಇಸ್ಮಾಯಿಲ್, ಸ್ಕ್ರಾಪ್ ಬಿಜಿನೆಸ್ ನಡೆಸ್ತಿರೋ ಅಲ್ತಾಫ್ ಸೇರಿ ಕೆಲವರ ಹೆಸರು ಮೊಬೈಲ್ ನಂಬರ್‌ಅನ್ನು ಬಾಂಬ್ ಬೆದರಿಕೆ ಕರೆ ವೇಳೆ ಹೇಳಿದ್ದ. ಪ್ರಕರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದದ್ದು, ಆರೋಪಿಯನ್ನು ಬಂಧಿಸಲಾಗಿದೆ.