ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಅರಳಿದ ಮಲ್ಲಿಗೆ ಇದ್ರೆ ತಂದ್ಕೊಡಿ ಎಂದು ತಾವು ಉಳಿದುಕೊಂಡಿದ್ದ ಹೋಟೆಲ್ ಸಿಬ್ಬಂದಿಗೆ ಕೇಳಿಕೊಂಡಿದ್ದಾರೆ. ತುಳುನಾಡಿನವರೇ ಆದ ಶಿಲ್ಪಾ ಶೆಟ್ಟಿ ತಮ್ಮ ನೆಚ್ಚಿನ ಪೆಲಕಾಯಿದ ಗಟ್ಟಿ ಹಾಗೂ ಕೋರಿ ರೊಟ್ಟಿಯನ್ನೂ ನೆನಪಿಸಿಕೊಂಡಿದ್ದಾರೆ.
ಮಂಗಳೂರು(ಸೆ.27): ಖ್ಯಾತ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಗುರುವಾರ ಮೂಲ್ಕಿಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣರು ದೇವರ ಶೇಷವಸ್ತ್ರ ಹಾಗೂ ಪ್ರಸಾದ ನೀಡಿ ಹರಸಿದರು.
ಈ ಸಂದರ್ಭ ಮುಂದಿನ ಜನವರಿಯಲ್ಲಿ ದೇವಳದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು. 12 ವರ್ಷಗಳ ಹಿಂದೆ ದೇವಳದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಮುಂಬೈ ಸಮಿತಿಯವರು ನೀಡಿದ್ದ ಚಿನ್ನದ ಕೊಡಪಾನದಲ್ಲಿ ಶಿಲ್ಪಾ ಶೆಟ್ಟಿಯವರ ಹೆಸರಿದ್ದು ಅದನ್ನು ಅವರಿಗೆ ತೋರಿಸಲಾಯಿತು.
undefined
'ಇಂಡಿಯಾ ಹಿಂದೂ ರಾಷ್ಟ್ರ' ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
ಇದನ್ನು ನೋಡಿ ಶಿಲ್ಪಾ ಅವರು ಸಂತೋಷಪಟ್ಟು ಸಾಧ್ಯವಾದರೆ ಬ್ರಹ್ಮಕಲಶೋತ್ಸವಕ್ಕೂ ಬರುವುದಾಗಿ ತಿಳಿಸಿದರು. ಈ ಸಂದರ್ಭ ದೇವಳದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಲಕ್ಷ್ಮೇನಾರಾಯಣ ಆಸ್ರಣ್ಣ, ಸದಾನಂದ ಆಸ್ರಣ್ಣ, ಡಾ. ಸಿಂಧು, ನಿರೂಪಕ ನಿತೇಶ್ ಶೆಟ್ಟಿಎಕ್ಕಾರು ಮತ್ತಿತರು ಉಪಸ್ಥಿತರಿದ್ದರು.
'ಸಲಾಂ ಬಾಬಣ್ಣ': ಮಂಗಳೂರಿನ ಸೌಹಾರ್ದತೆಯ ಸ್ಟೋರಿ ವೈರಲ್
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗುರುವಾರ ಮಂಗಳೂರಿಗೆ ಆಗಮಿಸಿದ್ದ ಖ್ಯಾತ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕಾರ್ಯಕ್ರಮದಲ್ಲಿ ತುಳುವಿನಲ್ಲೇ ಹೆಚ್ಚಾಗಿ ಮಾತನಾಡಿದ ಶಿಲ್ಪಾಶೆಟ್ಟಿ, ತುಳುನಾಡಿನ ಸಾಂಪ್ರದಾಯಿಕ ಆಹಾರ ‘ಪೆಲಕಾಯಿ ಗಟ್ಟಿ’ ಮತ್ತು ‘ಕೋರಿ ರೊಟ್ಟಿ’ಯನ್ನು ನೆನಪಿಸಿಕೊಂಡರು. ಅಲ್ಲದೇ ತಾವು ಉಳಿದುಕೊಂಡಿದ್ದ ತಾಜ್ ಹೊಟೇಲ್‌ನವರಿಗೆ ಅರಳಿದ ಮಲ್ಲಿಗೆ ಇದ್ದರೆ ತಂದುಕೊಡುವಂತೆ ಕೇಳಿದರು ಎಂದು ತಿಳಿದುಬಂದಿದೆ.
ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!