ಈದ್ ಪ್ರಾರ್ಥನೆ, ಗುಂಪು, ಸಂಭ್ರಮಕ್ಕೆ ಅವಕಾಶ ಇಲ್ಲ; ಕಮಲ್ ಕಟ್ಟುನಿಟ್ಟು

Published : May 13, 2021, 10:39 PM IST
ಈದ್ ಪ್ರಾರ್ಥನೆ, ಗುಂಪು, ಸಂಭ್ರಮಕ್ಕೆ ಅವಕಾಶ ಇಲ್ಲ; ಕಮಲ್ ಕಟ್ಟುನಿಟ್ಟು

ಸಾರಾಂಶ

* ರಂಜಾನ್ ಹಬ್ಬ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ * ಎಲ್ಲರೂ ಲಾಕ್ ಡೌನ್ ರೂಲ್ಸ್  ಎಲ್ಲರೂ ಫಾಲೋ ಮಾಡಲೇಬೇಕು * ಹಬ್ಬವೆಂದು ಮನೆಯಿಂದ ಹೊರ ಬರುವಂತಿಲ್ಲ, ಗುಂಪು ಸೇರುವಂತಿಲ್ಲ  * ಈಗಾಗಲೇ ಮುಸ್ಲಿಂ ಸಮುದಾಯಗಳ ಜೊತೆ ಮಾತುಕತೆ ನಡೆಸಿರುವ ಕಮಿಷನರ್ ಕಮಲ್ ಪಂತ್

ಬೆಂಗಳೂರು (ಮೇ 13)  ರಂಜಾನ್ ಆಚರಣೆಗೂ ಮುನ್ನ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮಾಡಿದ್ದು ಅನೇಕ ವಿಚಾರಗಳನ್ನು ಸ್ಪಷ್ಟಮಾಡಿದ್ದಾರೆ.

ರಂಜಾನ್​ ತಿಂಗಳ ಉಪವಾಸದ ಕೊನೆಯ ದಿನದ ಹಬ್ಬ ಈದ್​ ಉಲ್​ ಫಿತರ್​ ಆಚರಣೆಗೆ ಈಗಾಗಲೇ ಸಿದ್ದತೆ ನಡೆಸಿದೆ.  ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗುವುದು ಸಂಪ್ರದಾಯವಾಗಿತ್ತು.

ಆದರೆ ಈ ಬಾರಿ ಕೋವಿಡ್​ ಆತಂಕ ಎದುರಾಗಿದ್ದು, ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ಹಿನ್ನಲೆ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸುವಂತೆ ಕೋರಲಾಗಿದೆ. 

ಈ ಲಸಿಕೆ ಎಲ್ಲದಕ್ಕಿಂತ ಪರಿಣಾಮಕಾರಿ ಎಂದ ಸುಧಾಕರ್

ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿದ್ದು, ಮನೆಯಲ್ಲಿಯೇ ನಮಾಜ್ ಮಾಡಬಹುದು.  ನಿಯಮ ಜಾರಿಯಲ್ಲಿರುವುದರಿಂದ ಯಾರು ಮನೆಯಿಂದ ಹೊರ ಬರುವಂತಿಲ್ಲ. ಗುಂಪು ಸೇರುವಂತಿಲ್ಲ ಎಂದು ಪಂತ್ ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯಗಳ ಜೊತೆ ಮಾತುಕತೆ ನಡೆಸಲಾಗಿದೆ.   ಬೆಂಗಳೂರಿನಲ್ಲಿ ಸೆಕ್ಷನ್​ 144 ಜಾರಿಯಲ್ಲಿದ್ದು,  ಗುಂಪು ಸೇರುವಂತಿಲ್ಲ.  ಅಗತ್ಯ ಮುನ್ನೆಚ್ಚರಿಕೆವಹಿಸಬೇಕು. ಕೊರೋನಾ ನಿಯಮಗಳ ಪಾಲನೆ ಅಗತ್ಯ ಎಂದು ತಿಳಿಸಿದ್ದಾರೆ. 

 

 

PREV
click me!

Recommended Stories

ಭಾರತೀಯ ವಾಯುಪಡೆ ಅಚ್ಚರಿ ಮಾಹಿತಿ ನೀಡಿದ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ
ಜೈಲಲ್ಲಿದ್ದ ಶಾಸಕ ಸತೀಶ್ ಸೈಲ್ ಗಂಭೀರ ಅನಾರೋಗ್ಯ: ವೈದ್ಯಕೀಯ ಜಾಮೀನು ಕೊಟ್ಟ ಹೈಕೋರ್ಟ್!