1300 ಮಾಸ್ಕ್ ವಿತರಿಸಿದ ಬೀದರ್ ವ್ಯಕ್ತಿ| ಕೊರೋನಾ ವೈರಸ್ ಜಾಗೃತಿ ಹಿನ್ನೆಲೆ ಹೈದ್ರಾಬಾದ್‌ನಲ್ಲಿ ಮಾಸ್ಕ್ ವಿತರಣೆ| ಚಾರ್ಮಿನಾರ್ ಬಳಿ ಸುಮಾರು 1300 ಜನರಿಗೆ ಮಾಸ್ಕ್ ವಿತರಣೆ|
ಬೀದರ್(ಮಾ.10): ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆ ಸಿರ್ಸಿ ಗ್ರಾಮದವರಾದ ಡಾ. ಅಲ್ಲಮ ಪ್ರಭು ಆನಂದವಾಡೆ ಅವರು ಇತ್ತೀಚೆಗೆ ಹೈದರಾಬಾದ್‌ನ ಚಾರ್ಮಿನಾರ್ ಬಳಿ ಸುಮಾರು 1300 ಜನರಿಗೆ ಮಾಸ್ಕ್‌ಗಳನ್ನು ವಿತರಣೆ ಮಾಡಿದ್ದಾರೆ.
ಕೊರೋನಾ ವೈರಸ್ ಜಾಗೃತಿ ಅಭಿಯಾನದ ಹಿನ್ನೆಲೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಮಾಸ್ಕ್ (ಮುಖಗವಸು) ನೀಡಿ ಅರಿವು ಮೂಡಿಸಿದರು. ಜನರಿಗೆ ಕೊರೋನಾ ವೈರಸ್ ಕುರಿತು ಅರಿವು ಮೂಡಿಸಿದ ಡಾ. ಅಲ್ಲಮ ಪ್ರಭು ಆನಂದವಾಡೆ ಅವರು, ಸ್ವಚ್ಛತೆ, ಶಿಸ್ತಿಗೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಜನ ಹೆದರಬಾರದು ಎಂದು ತಿಳಿವಳಿಕೆ ಮೂಡಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಮಾಸ್ಕ್ ಕೇವಲ ಕೊರೋನಾ ವೈರಸ್ ಅನ್ನು ಮಾತ್ರ ತಡೆಗಟ್ಟದೆ ಅದರೊಂದಿಗೆ ಫ್ಲೂ ತರಹದ ಕಾಯಿಲೆಗಳು ಸೇರಿದಂತೆ ಇತರೆ ರೋಗಗಳು ಬರುವುದನ್ನು ತಡೆಯುತ್ತದೆ. ರೋಗಗಳನ್ನು ತಡೆಗಟ್ಟುವ ಮಧ್ಯಸ್ಥಿಕೆಯಾಗಿ ಇದು ಕೆಲಸ ಮಾಡುತ್ತದೆ ಎಂದಿದ್ದಾರೆ.
ಕೊರೊನಾ ವೈರಸ್ (ಕೋವಿಡ್ 19) ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಆಗ್ಗಾಗ್ಗೆ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಬಾಯಿಗೆ ಕರವಸ್ತ್ರವನ್ನು ಮುಚ್ಚಿ ಸೀನುವುದು, ಕೆಮ್ಮುವುದು ಮಾಡಬೇಕು. ಕೆಮ್ಮು ಮತ್ತು ಸೀನುವಾಗ ಟಿಶ್ಯೂ ಪೇಪರ್‌ನಿಂದ ಒರೆಸಬೇಕು. ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ಜನರಿಂದ, ಗುಂಪಿನಿಂದ ದೂರವಿರಬೇಕು. ಶಾಲೆಯಿಂದ ಮಕ್ಕಳನ್ನು ದೂರವಿರಿಸಬೇಕು. ಸಾರ್ವಜನಿಕ ಸಭೆಗಳಿಗೆ ಹಾಜರಾಗಬಾರದು ಎಂದೆಲ್ಲ ಸಲಹೆ ಮಾಡಿದ್ದಾರೆ.
ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್