Koppala: ಅಕ್ರಮ‌ ಮಣ್ಣು ಗಣಿಗಾರಿಕೆಗೆ ತುತ್ತಾಗಿ ಹೋಗಿದ್ದ ಕೆರೆಯಲ್ಲೀಗ ಬೋಟಿಂಗ್

By Suvarna News  |  First Published Jan 5, 2023, 4:31 PM IST

ಕೊಪ್ಪಳದಲ್ಲಿನ ಈ ಕೆರೆ ಅಕ್ರಮ‌ ಮಣ್ಣು ಗಣಿಗಾರಿಕೆಗೆ ತುತ್ತಾಗಿ ಹೋಗಿತ್ತು. ಆದರೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ  ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿದ್ದು, ಇದೀಗ ಆ ಕೆರೆಯಲ್ಲಿ ಜಲಕ್ರೀಡೆಗಳನ್ನು ಆರಂಭಿಸಲಾಗಿದೆ. 


ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಜ.5): ಆ ಕರೆ ಅಕ್ರಮ‌ ಮಣ್ಣು ಗಣಿಗಾರಿಕೆಗೆ ತುತ್ತಾಗಿ ಹೋಗಿತ್ತು. ಆದರೆ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿದ್ದು, ಇದೀಗ ಆ ಕರೆಯಲ್ಲಿ ಜಲಕ್ರೀಡೆಗಳನ್ನು ಆರಂಭಿಸಲಾಗಿದೆ. ಅಷ್ಟಕ್ಕೂ ಯಾವುದು ಆ ಕರೆ? ಆ ಕರೆ ಅಭಿವೃದ್ಧಿ ಪಡಿಸಿದವರು ಯಾರು? ಜಲ ಕ್ರೀಡೆಗಳ ಆರಂಭಕ್ಕೆ ಕಾರಣ ಏನು? ಅನ್ನೋದನ್ನ  ಮುಂದೆ ಓದಿ. ಕೊಪ್ಪಳ ಅಂದ ತಕ್ಷಣವೇ ನಮಗೆ ನೆನಪಾಗುವುದು ಇಲ್ಲಿನ ಉಕ್ಕಿನ‌ ಕಾರ್ಖಾನೆಗಳು.‌  ಕೊಪ್ಪಳ ತಾಲೂಕಿನ ಗಿಣಗೇರಿ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತೀ ಹೆಚ್ಚು ಉಕ್ಕಿನ‌ ಕಾರ್ಖಾನೆಗಳನ್ನು‌ ನಾವು ನೋಡಬಹುದಾಗಿದೆ. ಇದರ ಜೊತೆಗೆ ಗಿಣಗೇರಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆರೆ ಇದೀಗ ಅಭಿವೃದ್ಧಿ ಹೊಂದಿ ಒಂದು ಉತ್ತಮ ಪ್ರವಾಸಿ ತಾಣವಾಗುತ್ತಿದೆ.

Latest Videos

undefined

ಗಿಣಗೇರಿ ಕೆರೆ ಅಭಿವೃದ್ಧಿ ಪಡಿಸಿದ ಗವಿಸಿದ್ದೇಶ್ವರ ಸ್ವಾಮೀಜಿ
ಗಿಣಗೇರಿ ಗ್ರಾಮಕ್ಕೆ ಹೊಂದಿಕೊಂಡು ಇರುವ ಕರೆ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಈ ಕೆರೆ 225 ಎಕರೆ ವಿಸ್ತೀರ್ಣ ಹೊಂದಿದೆ.‌ ಮೊದಲು ಈ ಕರೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದಾಗಿ ಕೆರೆ ಸರಿಯಾಗಿ ಭರ್ತಿಯಾಗುತ್ತಿರಲಿಲ್ಲ. ಆದರೆ ಕಳೆದ ಎರಡು ವರ್ಷದ ಹಿಂದೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರು  ಕರೆಯನ್ನು 3 ಕೋಟಿ ವೆಚ್ಚದಲ್ಲಿ 6 ತಿಂಗಳ ಅವಧಿಯಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. 

ಜಾತ್ರೆ ಹಿನ್ನಲೆಯಲ್ಲಿ ಕೆರೆಯಲ್ಲಿ ಬೋಟಿಂಗ್
ಇನ್ನು  ಜನೇವರಿ 8 ರಂದು ಗವಿಸಿದ್ದೇಶ್ವರ ಜಾತ್ರೆ ಇದೆ. ಈ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಜಾತ್ರೆಗೆ ಬರುವ ಜನರಿಗಾಗಿ ಜಲಕ್ರೀಡೆಗಳು ಇರಲೆಂದು ಗವಿಸಿದ್ದೇಶ್ವರ ಸ್ವಾಮೀಕಿ ಕೆರೆಯಲ್ಲಿ ಜಲಕ್ರೀಡೆಗಳನ್ನು ಆಯೋಜಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಕರೆಯಲ್ಲಿ ಜಲಕ್ರೀಡೆಗಳಿಗೆ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಗವಿಸಿದ್ದೇಶ್ವರ ಸ್ವಾಮೀಜಿ ಕೆರೆಯನ್ನು ಸಂರಕ್ಷಣೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ನೆಚ್ಚಿನ ಫೋಟೋಗ್ರಾಫರ್ ನೀರಲ್ಲಿ ಮುಳುಗಿ ಸಾವು

ಬೋಟಿಂಗ್ ಜೊತೆಗೆ ಆಅಇಕೆ ವಸ್ತುಗಳು
ಇನ್ನು  ಗವಿಸಿದ್ದೇಶ್ವರ ಸ್ವಾಮೀಜಿಗಳು ಸಾರ್ವಜನಿಕರ ಸಹಕಾರದಿಂದ ಕೆರೆ ಅಭಿವೃದ್ಧಿ ಮಾಡಿದ ಬಳಿಕ ಒಂದೇ ವರ್ಷದಲ್ಲಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಇದರಿಂದಾಗಿ ಈ ಕೆರೆಯನ್ನು ಒಂದು ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವ ಉದ್ದೇಶದಿಂದ ಗವಿಸಿದ್ದೇಶ್ವರ ಸ್ವಾಮೀಜಿ ಖಾಸಗಿ ಕಂಪನಿಗಳ ಸಹಕಾರದೊಂದಿಗೆ 10 ಲಕ್ಷ ವೆಚ್ಚದಲ್ಲಿ ಚಿಕ್ಕ ಮಕ್ಕಳ ಆಟಿಕೆ ವಸ್ತುಗಳನ್ನು ಸಹ ಅಳವಡಿಸಲಾಗಿದೆ. ಜೊತೆಗೆ ಮೋಟರ್ ಬೋಟ್, ರ್ಯಾಫ್ಟಿಂಗ್ ಸೇರಿದಂತೆ ವಿವುಧ ಬಗೆಯ ಬೋಟ್ ಗಳನ್ನು ಕೆರೆಯಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ.‌ಇನ್ನು ಜನರು ತಂಡೋಪ ತಂಡವಾಗಿ ಬಂದು ಬೋಟಿಂಗ್ ರೈಡ್ ಮಾಡಿ ಖುಷಿ ಪಡುತ್ತಿದ್ದಾರೆ.

Chitradurga: ಮಲ್ಲಾಪುರ ಕೆರೆಗೆ ಚಿತ್ರದುರ್ಗದ ಯುಜಿಡಿ ನೀರು ಸೇರ್ಪಡೆ: ಸುತ್ತಲಿನ ಗ್ರಾಮಗಳಲ್ಲಿ ರೋಗ ಉಲ್ಬಣ

ಇನ್ನು ಜನೇವರಿ 8 ರಂದು ಗವಿಸಿದ್ದೇಶ್ವರ ಜಾತ್ರೆ ಹಿನ್ನಲೆಯಲ್ಲಿ ಸದ್ಯ ಬೋಟಿಂಗ್ ಆರಂಭಿಸಲಾಗಿದ್ದು,ಜಾತ್ರೆ‌ಮುಗಿಯುವವರೆಗೂ ಬೋಟಿಂಗ್ ಇರಲಿದೆ.‌ಬಳಿಕ ಪ್ರವಾಸಿಗರ ದಟ್ಟಣೆ ನೋಡಿಕೊಂಡು ಬೋಟಿಂಗ್ ಮುಂದುವರೆಸಲು ತೀರ್ಮಾನಿಸಲಾಗಿದೆ. ಒಟ್ಟಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಗೆ ತುತ್ತಾಗಿದ್ದ ಕೆರೆ ಇದೀಗ ಗವಿಸಿದ್ದೇಶ್ವರ ಸ್ವಾಮೀಜಿಗಳ ಸಂಕಲ್ಪದಿಂದ‌‌ ಅಭಿವೃದ್ಧಿ ಹೊಂದಿ ಪ್ರವಾಸಿ ತಾಣವಾಗುತ್ತಿರುವುದು ನಿಜಕ್ಕೂ ಅದ್ಭುತವೇ ಸರಿ.

click me!