ಲಂಚ ಪಡೆದ ಹಣದಲ್ಲಿ ಬಿಟ್‌ ಕಾಯಿನ್‌ ಖರೀದಿಸಿದ್ದ ಬಿಎಂಟಿಸಿ ಅಧಿಕಾರಿಗಳು!

By Kannadaprabha News  |  First Published Oct 8, 2023, 5:23 AM IST

ಬಿಎಂಟಿಸಿ ಡಿಪೋದಲ್ಲಿ ಸಿಬ್ಬಂದಿಗೆ ರಜೆ ನೀಡುವುದು, ಕರ್ತವ್ಯ ನಿಯೋಜನೆಗೆ ಲಂಚ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು, ಪ್ರಕರಣದಲ್ಲಿ ಭಾಗಿ ಆಗಿರುವವರು ಲಂಚದ ಹಣವನ್ನು ಬಿಟ್‌ ಕಾಯಿನ್‌ ಖರೀದಿಗೆ ಹೂಡಿಕೆ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.


ಬೆಂಗಳೂರು (ಅ.08): ಬಿಎಂಟಿಸಿ ಡಿಪೋದಲ್ಲಿ ಸಿಬ್ಬಂದಿಗೆ ರಜೆ ನೀಡುವುದು, ಕರ್ತವ್ಯ ನಿಯೋಜನೆಗೆ ಲಂಚ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು, ಪ್ರಕರಣದಲ್ಲಿ ಭಾಗಿ ಆಗಿರುವವರು ಲಂಚದ ಹಣವನ್ನು ಬಿಟ್‌ ಕಾಯಿನ್‌ ಖರೀದಿಗೆ ಹೂಡಿಕೆ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಬಿಎಂಟಿಸಿಯ ಬನಶಂಕರಿ ಡಿಪೋದಲ್ಲಿ ಸಿಬ್ಬಂದಿಗೆ ರಜೆ ನೀಡುವುದು, ಕರ್ತವ್ಯ ನಿಯೋಜನೆಗೆ ಆಡಳಿತ ವಿಭಾಗದ ಅಧಿಕಾರಿಗಳಿಗೆ ಲಂಚ ನೀಡಬೇಕಿದೆ ಎಂಬ ಕುರಿತಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರಿಗೆ ಡಿಪೋದ ಕೆಲ ಸಿಬ್ಬಂದಿ ವಿಡಿಯೋ ಸಹಿತ ದೂರು ನೀಡಿದ್ದರು. ಅದನ್ನಾಧರಿಸಿ ಸತ್ಯವತಿ ಅವರು ಪ್ರಕರಣವನ್ನು ಆಂತರಿಕ ತನಿಖೆಗೆ ಒಳಪಡಿಸಿದ್ದರು. ಜತೆಗೆ ಡಿಪೋದ ಆಡಳಿತ ವಿಭಾಗ ಮತ್ತು ಭದ್ರತಾ ಸಿಬ್ಬಂದಿ ಸೇರಿ 10 ಮಂದಿಯನ್ನು ಅಮಾನತನ್ನೂ ಮಾಡಿದ್ದರು.

Tap to resize

Latest Videos

ಕರ್ನಾಟಕದಲ್ಲಿ ಹಸಿರು ಬರ, 4860 ಕೋಟಿ ಪರಿಹಾರಕ್ಕೆ ಮನವಿ: ಸಿಎಂ ಸಿದ್ದರಾಮಯ್ಯ

ಅದರ ತನಿಖೆ ನಡೆಸಿದ್ದ ಬಿಎಂಟಿಸಿ ಭದ್ರತೆ ಮತ್ತು ಜಾಗೃತ ವಿಭಾಗ, ಸಿಬ್ಬಂದಿಯಿಂದ ಪಡೆಯುತ್ತಿದ್ದ ಲಂಚದ ಹಣವನ್ನು ಆಡಳಿತ ವಿಭಾಗದ ಅಧಿಕಾರಿಗಳು ಬಿಟ್‌ ಕಾಯಿನ್‌ ಖರೀದಿಗೆ ಬಳಕೆ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದರು. ಸುಮಾರು ₹20 ಲಕ್ಷದವರೆಗೆ ಬಿಟ್‌ ಕಾಯಿನ್‌ ಖರೀದಿಗೆ ಹೂಡಿಕೆ ಮಾಡಿದ್ದಾರೆ. ಅದೂ ಕೂಡ ಕಚೇರಿಯ ಅವಧಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬಿಟ್‌ ಕಾಯಿನ್‌ ಖರೀದಿ ಮಾಡುತ್ತಿದ್ದರು ಎಂಬ ಬಗ್ಗೆ ತನಿಖಾಧಿಕಾರಿಗಳು ಬಿಎಂಟಿಸಿ ಎಂಡಿಗೆ ವರದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!