Bengaluru: ಬಿಎಂಟಿಸಿ ಉಚಿತ ಪಾಸ್ ಸೇವೆ ದಿಢೀರ್ ರದ್ದು!

Published : Jun 02, 2022, 08:57 PM IST
Bengaluru: ಬಿಎಂಟಿಸಿ ಉಚಿತ ಪಾಸ್ ಸೇವೆ ದಿಢೀರ್ ರದ್ದು!

ಸಾರಾಂಶ

ಹಗಲು ರಾತ್ರಿ ಎನ್ನದೆ ಕಷ್ಟ ಪಡೋ ಕಟ್ಟಡ ಕಾರ್ಮಿಕರ ಗೋಳು ಕೇಳೋರ್ಯಾರು? ಮಳೆ ಚಳಿ ಗಾಳಿ ಎನ್ನದೆ ಕೆಲಸ ಮಾಡುವ ಕೂಲಿ ಕಾರ್ಮಿಕರು ದಿನದ ಸಂಬಳ ನಂಬಿ ಜೀವನ ನಡೆಸ್ತಾರೆ. ಹೀಗಾಗಿ ಬಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ಉಚಿತ ಬಸ್ ಪಾಸ್ ನೀಡಿತ್ತು. 

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜೂ.02): ಹಗಲು ರಾತ್ರಿ ಎನ್ನದೆ ಕಷ್ಟ ಪಡೋ ಕಟ್ಟಡ ಕಾರ್ಮಿಕರ ಗೋಳು ಕೇಳೋರ್ಯಾರು? ಮಳೆ ಚಳಿ ಗಾಳಿ ಎನ್ನದೆ ಕೆಲಸ ಮಾಡುವ ಕೂಲಿ ಕಾರ್ಮಿಕರು ದಿನದ ಸಂಬಳ ನಂಬಿ ಜೀವನ ನಡೆಸ್ತಾರೆ. ಹೀಗಾಗಿ ಬಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ಉಚಿತ ಬಸ್ ಪಾಸ್ ನೀಡಿತ್ತು. ಆದರೆ ಇದೀಗ ನಷ್ಟದ ನೆಪವೊಡ್ಡಿ ಕಟ್ಟಡ ಕಾರ್ಮಿಕರ ಸೌಲಭ್ಯವನ್ನೇ ಬಿಎಂಟಿಸಿ ಕಸಿದುಕೊಂಡಿದೆ. ಹೌದು! ಗಗನಚುಂಬಿ ಕಟ್ಟಡಗಳು, ಸಾವಿರಾರು ದೊಡ್ಡ ದೊಡ್ಡ ಕಟ್ಟಡಗಳು ಬೆಂಗಳೂರಿನಲ್ಲಿ ತಲೆ ಎತ್ತಿವೆ. 

ಇದಕ್ಕೆ ಕಾರಣ ಈ ಕಾರ್ಮಿಕರೇ. ಆದರೆ ಇವರ ಕಷ್ಟ ಕೇಳೊರು ಇಲ್ಲದಂತಾಗಿದೆ. ವಾರಕ್ಕೊಮ್ಮೆ ಸಂಬಳ ಕೊಡ್ತಾರೆ, ಕೊಡುವ ಹಣವೆಲ್ಲ ಮಾರನೇ ದಿನವೇ ಜೇಬಲ್ಲಿ ಖಾಲಿ ಖಾಲಿ. ತಿಂಗಳಪೂರ್ತಿ ಬಸ್‌ನಲ್ಲಿ ಓಡಾಡಲು ತೊಂದರೆಯಾಗ್ತಿತ್ತು. ಅದಕ್ಕೆ ಕಟ್ಟಡ ಕಾರ್ಮಿಕ ಇಲಾಖೆ ಬಿಎಂಟಿಸಿ ಸೇರಿ ಕಾರ್ಮಿಕರಿಗೆ ಒಂದು ವರ್ಷಕ್ಕೆ ಫ್ರೀ ಬಸ್ ನೀಡಲು ನೀಡಿತ್ತು. ಆದರೆ ಇದೀಗ ಈ ಫ್ರೀ ಪಾಸ್ ಸೌಲಭ್ಯವನ್ನು ಬಿಎಂಟಿಸಿ ಕಸಿದುಕೊಂಡಿದೆ. ಕಾರಣ ಕಾರ್ಮಿಕ ಇಲಾಖೆ ಇದುವರೆಗೂ ಬಾಕಿ ಹಣ ಪಾವತಿಸಿಲ್ಲ.

Tummoc App: ಬಿಎಂಟಿಸಿ ಡೈಲಿ, ವೀಕ್ಲಿ, ಮಂಥ್ಲಿ ಪಾಸ್ ಇನ್ಮುಂದೆ ಡಿಜಿಟಲೈಸ್ಡ್: ಡೌನ್‌ಲೋಡ್ ಮಾಡೋದು ಹೇಗೆ?

ಬೆಂಗಳೂರಿನಲ್ಲಿರುವ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ಎರಡು ವರ್ಷದಿಂದ ಉಚಿತ ಫ್ರೀ ಪಾಸ್ ನೀಡುತ್ತಿತ್ತು. ತಿಂಗಳಿಗೆ ಸುಮಾರು 25 ರಿಂದ 30  ಸಾವಿರ ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ರು. ನಿಗಮಕ್ಕೆ ಆಗೋ ಹೊರೆಯನ್ನು ಕಾರ್ಮಿಕ ಇಲಾಖೆ ತಿಂಗಳಿಗೆ 8 ಕೋಟಿ ಮೊತ್ತ ಕೂಡ ಪಾವತಿ ಮಾಡುತ್ತಿತ್ತು. ಆದರೆ ಕಳೆದ ಆರು ತಿಂಗಳಿಂದ ಬಿಎಂಟಿಸಿಗೆ ಕಾರ್ಮಿಕ ಇಲಾಖೆ ಸುಮಾರು 39 ಕೋಟಿ ಹಣವನ್ನ ಪಾವತಿ ಮಾಡಿರಲಿಲ್ಲ. ಹೀಗಾಗಿ ಆರ್ಥಿಕವಾಗಿ ಸಂಕಷ್ಟವನ್ನ ಕಂಡ ಬಿಎಂಟಿಸಿ ದಿಢೀರ್ ಅಂತ ಫ್ರೀ ಪಾಸ್ ಸೌಲಭ್ಯವನ್ನ ನಿಲ್ಲಿಸಿದೆ.

ಬಿಎಂಟಿಸಿಯಿಂದ ಪ್ರವಾಸಿಗರಿಗೆ ಬಂಪರ್ ಆಫರ್, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ಗೆ ಒನ್ ಡೇ ಟ್ರಿಪ್

ಕಾರ್ಮಿಕರು ಪಾಸ್ ಹೇಗೆ ಪಡೆಯುತ್ತಿದ್ರು?: ಕಾರ್ಮಿಕ ಇಲಾಖೆಯಲ್ಲಿ ರಿಜಿಸ್ಟರ್ ಆಗಿರುವ ಕಾರ್ಮಿಕರಿಗೆ ಈ ಫ್ರೀ ಬಿಎಂಟಿಸಿ ಬಸ್ ದೊರೆಯುತ್ತಿತ್ತು. ಈ ಪಾಸ್‌ನ ಹೆಸರು ಸಹಾಯಹಸ್ತ. ಆದರೆ ಬುಧವಾರದಿಂದ  ಬಸ್ ನಿಲ್ದಾಣ ಹಾಗೂ ಬಿಎಂಟಿಸಿ, ಟಿಟಿಎಂಸಿಗಳಲ್ಲಿ ಎಲ್ಲೂ ಪಾಸ್ ಸಿಗ್ತಿಲ್ಲ. ಈ ಪಾಸ್ ಕೈಯಲ್ಲಿದ್ರೆ ಬೆಂಗಳೂರಿನ ಯಾವುದೇ ಜಾಗಕ್ಕಾದ್ರು ಬಿಎಂಟಿಸಿ ಬಸ್‌ನಲ್ಲಿ ಸಂಚಾರ ಮಾಡಬಹುದು ಆಗಿತ್ತು. ಯಾವ ಟೈಮ್ ಗಾದ್ರು ಬಸ್‌ನಲ್ಲಿ ಸಂಚಾರ ಮಾಡಬಹುದು. ಒಂದು ವರ್ಷದವರೆಗೆ ಈ ಅವಧಿ ಇರುತ್ತೆ. ದಿನದ 24 ಗಂಟೆ ಸಂಚಾರ ಮಾಡ್ಬೋದು. ಸದ್ಯ ಈಗ ಬಸ್ ಪಾಸ್ ಇಲ್ಲದೆ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

PREV
Read more Articles on
click me!

Recommended Stories

25 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ: ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ
ಬೆಂಗಳೂರಿಗೆ ವಿದಾಯ ಹೇಳಿದ ಆರ್‌ಸಿಬಿ, ತವರಿನ ಪಂದ್ಯಗಳಿಗೆ ಛತ್ತೀಸ್‌ಗಢದ ರಾಯ್ಪುರ ಆತಿಥ್ಯ ಖಚಿತಪಡಿಸಿದ ಫ್ರಾಂಚೈಸಿ!