ಬಸ್ ಪ್ರಯಾಣಿಕರಿಗೊಂದು ಸಂತಸದ ಸುದ್ದಿ!

By Kannadaprabha NewsFirst Published Feb 23, 2020, 8:16 AM IST
Highlights

ಬಿಎಂಟಿಸಿಯಿಂದ 2 ಮಾರ್ಗಗಳಲ್ಲಿ ವಾಯು ವಜ್ರ ಬಸ್‌ ಸೇವೆ ವಿಸ್ತರಣೆ|ಸಾರ್ವಜನಿಕರು ಈ ಸೇವೆ ಬಳಸಿಕೊಳ್ಳುವಂತೆ ಮನವಿ|

ಬೆಂಗಳೂರು(ಫೆ.23): ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕನಕಪುರ ರಸ್ತೆ ಜಂಕ್ಷನ್‌ (ಮಾರ್ಗ ಸಂಖ್ಯೆ ಕೆಐಎಎಸ್‌ 13) ಹಾಗೂ ರಾಯಲ್‌ ಮೀನಾಕ್ಷಿ ಮಾಲ್‌ ವರೆಗೆ (ಮಾರ್ಗ ಸಂಖ್ಯೆ ಕೆಐಎಎಸ್‌ 14) ಕಾರ್ಯಾಚರಣೆ ಮಾಡುತ್ತಿದ್ದ ವಾಯು ವಜ್ರ ಬಸ್‌ಗಳ ಸೇವೆಯನ್ನು ಕ್ರಮವಾಗಿ ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ ಹಾಗೂ ಡಿಎಲ್‌ಎಫ್‌ ಅಪಾರ್ಟ್‌ಮೆಂಟ್‌ ವರೆಗೆ ವಿಸ್ತರಿಸಿದೆ.

ಕೆಐಎಎಸ್‌ 13 ಮಾರ್ಗದ ಬಸ್‌ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ, ತಲಘ್ಟಟಪುರ, ರಘುವನಹಳ್ಳಿ ಕ್ರಾಸ್‌, ಕೋಣನಕುಂಟೆ ಕ್ರಾಸ್‌, ಬನಶಂಕರಿ ಬಸ್‌ ನಿಲ್ದಾಣ, ಮಿನರ್ವ ಸರ್ಕಲ್‌, ಮೈಸೂರು ಬ್ಯಾಂಕ್‌ ವೃತ್ತ, ಮೇಖ್ರಿ ವೃತ್ತ, ಹೆಬ್ಬಾಳ, ಕೋಗಿಲು ಕ್ರಾಸ್‌, ಹುಣಸಮಾರನಹಳ್ಳಿ ಮಾರ್ಗದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ತಲುಪಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಂತೆಯೆ ಕೆಐಎಎಸ್‌ 14 ಮಾರ್ಗದ ಬಸ್‌ ಹುಳಿಮಾವು, ಐಐಎಂ, ಬಿಳೇಕಹಳ್ಳಿ, ಗುರಪ್ಪನಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್‌ ಗಾರ್ಡನ್‌, ಬೆಂಗಳೂರು ಕ್ಲಬ್‌, ಮೇಖ್ರಿ ವೃತ್ತ, ಹೆಬ್ಬಾಳ, ಎಸ್ಟೀಂ ಮಾಲ್‌, ಹುಣಸಮಾರನಹಳ್ಳಿ ಮಾರ್ಗದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಸಾರ್ವಜನಿಕರು ಈ ಸೇವೆಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

click me!