ವಿಜಯಪುರ: ವಿಶ್ವದಾಖಲೆ ಬರೆಯಲು ಮುಂದಾದ ವಿಜಯಪುರ ಬಿಎಲ್‌ಡಿಇ ಸಂಸ್ಥೆ..!

Published : Mar 07, 2024, 11:47 AM IST
ವಿಜಯಪುರ: ವಿಶ್ವದಾಖಲೆ ಬರೆಯಲು ಮುಂದಾದ ವಿಜಯಪುರ ಬಿಎಲ್‌ಡಿಇ ಸಂಸ್ಥೆ..!

ಸಾರಾಂಶ

ರವಿವಾರ ಬೆಳಿಗ್ಗೆ 7 ಗಂಟೆಗೆ ರಂದು ಬಿಎಲ್ಡಿಇ ಸಂಸ್ಥೆಯ ಆವರಣದಲ್ಲಿ ಸ್ವಾಸ್ಥ್ಯ ಸಂತೂಲನ ರಂಗೋಲಿ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.‌ ಈ ಕಾರ್ಯಕ್ರಮ ದಾಖಲೆ ಬರೆಯಲಿರುವ ಕಾರಣ ಈಗಾಗಲೇ ರೆಕಾರ್ಡ್ ದಾಖಲಿಸುವ ಸಂಸ್ಥೆಗಳಿಗೆ  ಅಗತ್ಯ ಮಾಹಿತಿಗಳನ್ನ ಪುರೈಸಲಾಗಿದೆ. ವೈದ್ಯಕೀಯ ಶಿಕ್ಷಣದ ವಿಷಯದ ಮೇಲೆ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಕಾರ್ಯಕ್ರಮ ಇದಾಗಿದೆ. 

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಮಾ.07):  ವಿಜಯಪುರದ ಪ್ರತಿಷ್ಟಿತ ಬಿಎಲ್‌ಡಿಇ ಮೆಡಿಕಲ್ ಕಾಲೇಜು ಹೊಸ ರೆಕಾರ್ಡ್ ಬರೆಯೋದಕ್ಕು ಮುಂದಾಗಿದೆ. ರಂಗೋಲಿಯನ್ನ ಬಿಡಿಸುವ ಮೂಲಕ ವಿಶ್ವ ದಾಖಲೆಗೆ ಮುಂದಾಗಿದೆ. ವಿಶ್ವದಲ್ಲಿಯೇ ಅತಿ ದೊಡ್ಡ ಹಾಗೂ ಡಿಪ್ರೆಂಟ್ ಆಗಿ ರಂಗೋಲಿ ಬಿಡಿಸುವ ಮೂಲಕ ದಾಖಲೆ ಬರೆಯೋದಕ್ಕೆ ಮುಂದಾಗಿದೆ. ದಾಖಲೆ ಬರೆಯುವ ರಂಗೋಲಿಗಳನ್ನ ಕಣ್ತುಂಬಿಕೊಳ್ಳಲು ಗುಮ್ಮಟನಗರಿ ಜನ ತುದಿಗಾಲ ಮೇಲೆ ನಿಂತಿದ್ದಾರೆ.

ಮಾ.10ರಂದು ದಾಖಲೆ ಬರೆಯಲು ಸಿದ್ಧತೆ..!

ಬರುವ ದಿನಾಂಕ ರಂದು ರವಿವಾರ ಬೆಳಿಗ್ಗೆ 7 ಗಂಟೆಗೆ ರಂದು ಬಿಎಲ್ಡಿಇ ಸಂಸ್ಥೆಯ ಆವರಣದಲ್ಲಿ ಸ್ವಾಸ್ಥ್ಯ ಸಂತೂಲನ ರಂಗೋಲಿ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.‌ ಈ ಕಾರ್ಯಕ್ರಮ ದಾಖಲೆ ಬರೆಯಲಿರುವ ಕಾರಣ ಈಗಾಗಲೇ ರೆಕಾರ್ಡ್ ದಾಖಲಿಸುವ ಸಂಸ್ಥೆಗಳಿಗೆ  ಅಗತ್ಯ ಮಾಹಿತಿಗಳನ್ನ ಪುರೈಸಲಾಗಿದೆ. ವೈದ್ಯಕೀಯ ಶಿಕ್ಷಣದ ವಿಷಯದ ಮೇಲೆ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಕಾರ್ಯಕ್ರಮ ಇದಾಗಿದೆ.

ಆಸ್ಪತ್ರೆಯಿಂದ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಡಿಶ್ಚಾರ್ಜ್

ವಿಶ್ವದ ಹಲವು ಸಂಸ್ಥೆಗಳು ದಾಖಲಿಸಲಿವೆ ರಂಗೋಲಿ ರೆಕಾರ್ಡ್..!

ಇದು ಬಿಎಲ್‌ಡಿಇ ಸಂಸ್ಥೆಯ ಮೂಲಕ ನಡೆಯುತ್ತಿರುವ ಈ ವಿನೂತನ ರಂಗೋಲಿ ಕಾರ್ಯಕ್ರಮವನ್ನ ವಿಶ್ವದ ಹಲವು ರೆಕಾರ್ಡ್ ದಾಖಲಿಸುವ ಸಂಸ್ಥೆಗಳು ವೀಕ್ಷಣೆ ಮಾಡಲಿವೆ. ಜೊತೆಗೆ ರಂಗೋಲಿ ಕಾರ್ಯಕ್ರಮವನ್ನ ವೀಕ್ಷಿಸಿ ತಮ್ಮ ರೆಕಾರ್ಡ್‌ ಬುಕ್‌ಗಳಲ್ಲಿ ದಾಖಲಿಸಲಿವೆ.  ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗಳು ಈ ವಿನೂತನ ರೆಕಾರ್ಡ್‌ಗಳನ್ನ ದಾಖಲಿಸಿಕೊಳ್ಳಲಿವೆ.

ಈ ರಂಗೋಲಿ ದಾಖಲೆ ನಡೆಯೋದು ಹೇಗೆ..!?

ಈ ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಜನ ವೈದ್ಯಕೀಯ ವಿದ್ಯಾರ್ಥಿಗಳು 50000 ಚದುರ ಅಡಿ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಠ್ಯಕ್ಕೆ ಪೂರಕವಾದ 250 ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಲಿದ್ದಾರೆ. 40 ಜನ ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು ಇದರ ಉಸ್ತುವಾರಿ ವಹಿಸಲಿದ್ದಾರೆ.

ಒಟ್ಟು 100 ಕ್ವಿಂಟಾಲ್‌ಗೂ ಅಧಿಕ ರಂಗೋಲಿ ಬಳಕೆ..!

ಇನ್ನೂ ಈ ರಂಗೋಲಿ ದಾಖಲೆಗೆ ಬರೊಬ್ಬರಿ 10 ಟನ್ (100 ಕ್ವಿಂಟಾಲ್) ರಂಗೋಲಿ ಬಳಕೆಯಾಗಲಿದೆ. ತರಹೇವಾರಿ ಬಣ್ಣದ ರಂಗೋಲಿಗಳು ಬಳಕೆಯಾಗಲಿವೆ. 15×15 ಅಡಿಗಳಲ್ಲಿ ಒಂದೊಂದು ಚಿತ್ರಗಳನ್ನ ರಂಗೋಲಿಯನ್ನ ಬಿಡಲಿಸಲಿದ್ದಾರೆ..

ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಮುಂದಾಗಿದೆ: ಸಚಿವ ಎಂ.ಬಿ.ಪಾಟೀಲ್

ಡ್ರೋನ್ ಮೂಲಕ ರೆಕಾರ್ಡ್ ಲೈವ್ ವೀಕ್ಷಣೆ..!

ಇನ್ನೂ ರಂಗೋಲಿ ದಾಖಲೆಯನ್ನ ರೆಕಾರ್ಡ್‌ನಲ್ಲಿ ದಾಖಲಿಸಲು ಸಂಸ್ಥೆಗಳ ಅಧಿಕಾರಿಗಳು ಲೈವಾಗಿ ರಂಗೋಲಿ ಬಿಡಿಸುವ ದೃಶ್ಯಗಳನ್ನ ವೀಕ್ಷಣೆ ಮಾಡಲಿದ್ದಾರೆ. ಅದ್ರಲ್ಲು ಡ್ರೋಣ್ ವಿಡಿಯೋಗಳನ್ನ ವೀಕ್ಷಣೆ ಮಾಡಿ ರೆಕಾರ್ಡ್ ದಾಖಲು ಮಾಡಿಕೊಳ್ಳಲಿವೆ. ವೈದ್ಯಕೀಯ ಶಿಕ್ಷಣದ ಬೋಧನೆ. ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ವಿದ್ಯಾರ್ಥಿಗಳಿಗೆ ಚಿತ್ರಬಿಡಿಸುವ ಕೌಶಲ್ಯಾಭಿವೃದ್ಧಿ ಪಡಿಸುವುದು ಮತ್ತು ಆರೋಗ್ಯದ ಬಗ್ಗೆ ರಂಗೋಲಿಯ ಕಲೆಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮ ಪ್ರಮುಖ ಉದ್ದೇಶವಾಗಿದೆ.

ವೈದ್ಯಕೀಯ ವಲಯದಲ್ಲಿ ಹೊಸ‌ ದಾಖಲೆ..!

ಈ ಕಾರ್ಯಕ್ರಮದ ಮೂಲಕ ಬೃಹತ್ ಪ್ರಮಾಣದಲ್ಲಿ ರಂಗೋಲಿ ಬಿಡಿಸುವ ಮೂಲಕ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಾಗುತ್ತಿದೆ. ಅಲ್ಲದೇ, ಇದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಯತ್ತ ಮಹತ್ವದ ಹೆಜ್ಜೆ ಎನ್ನಲಾಗಿದೆ. ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರು, ಡೀಮ್ಸ್ ವಿವಿ ಕುಲಾಧಿಪತಿಗಳೂ ಆಗಿರುವ ಎಂ. ಬಿ.ಪಾಟೀಲ 9.30ಕ್ಕೆ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿವಿಯ ಎಲ್ಲ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.

PREV
Read more Articles on
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ