ಅಶ್ಲೀಲ ವಿಡಿಯೋ ಮಾಡ್ಕೊಂಡು ಬ್ಲಾಕ್ ಮೇಲ್ : ವಿಡಿಯೋ ಕಾಲ್‌ನಿಂದ ಅವಾಂತರ

Kannadaprabha News   | Asianet News
Published : Nov 30, 2020, 04:01 PM IST
ಅಶ್ಲೀಲ ವಿಡಿಯೋ ಮಾಡ್ಕೊಂಡು ಬ್ಲಾಕ್ ಮೇಲ್ : ವಿಡಿಯೋ ಕಾಲ್‌ನಿಂದ ಅವಾಂತರ

ಸಾರಾಂಶ

ಅಶ್ಲೀಲ ವಿಡಿಯೋ ಇಟ್ಕೊಂಡು ವ್ಯಕ್ತಿಯೋರ್ವನಿಗೆ ಬ್ಲಾಕ್‌ಮೇಲ್ ಮಾಡಿ ಹಣ ವಸೂಲು ಮಾಡಲಾಗಿದೆ.  ವಿಡಿಯೋ ಕಾಲ್‌ನಿಂದ ಈ ಅವಾಂತರ ಸೃಷ್ಟಿಯಾಗಿದೆ.

ಮಂಗಳೂರು (ನ.30): ಫೇಸ್‌ಬುಕ್‌ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸಿ, ಹಣ ಕಳುಹಿಸುವಂತೆ ಬೆದರಿಕೆ ಹಾಕಿ 1.8 ಲ. ರು. ವಂಚಿಸಿದ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ವ್ಯಕ್ತಿಯೋರ್ವರಿಗೆ ನ. 21ರಂದು ರಾತ್ರಿ 11ಕ್ಕೆ ಫೇಸ್‌ಬುಕ್‌ನಲ್ಲಿ ಆಯಂತಿಕಾ ಜೈನ್‌ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಫೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿದ್ದರು. 

ಮದುವೆ ಆಗುವುದಾಗಿ ನಂಬಿಸಿದ : ಖಾಸಗಿ ಫೋಟೊ ಇರಿಸಿಕೊಂಡು ವಂಚಿಸಿದ .

ಅದನ್ನು ಸ್ವೀಕಾರ ಮಾಡಿದ ಕೂಡಲೇ ಮೊಬೈಲ್‌ ನಂಬರ್‌ ಪಡೆದುಕೊಂಡು ವಾಟ್ಸಪ್‌ ಮೂಲಕ 9991937402ನಿಂದ ವೀಡಿಯೋ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಕೂಡಲೇ ದೂರುದಾರ ವ್ಯಕ್ತಿಯ ಮುಖವನ್ನು ರೆಕಾರ್ಡ್‌ ಮಾಡಿಕೊಂಡು ಅದಕ್ಕೆ ಬೇರೆ ಅಶ್ಲೀಲ ವಿಡಿಯವೊಂದನ್ನು ಸೇರಿಸಿ ದೂರುದಾರರ ವಾಟ್ಸಪ್‌ಗೆ ಕಳುಹಿಸಿ ಹಣ ಕಳುಹಿಸುವಂತೆ ಬೇರೆ ಬೇರೆ ಮೊಬೈಲ್‌ ನಂಬರ್‌ಗಳಿಂದ ವಾಟ್ಸಪ್‌ ಮೂಲಕ ಕರೆ ಮಾಡಿ ಒತ್ತಾಯಿಸಿದ್ದಾರೆ. 

ಒಂದು ವೇಳೆ ಹಣ ಕಳುಹಿಸದೆ ಇದ್ದರೆ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ 1, 08, 299 ರು. ಗಳನ್ನು ಜಮೆ ಮಾಡಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

PREV
click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು