ಮಹಿಳಾ ದೌರ್ಜನ್ಯ ಎಸಗಿದ್ದ ಶಾಸಕ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಮಹಾಲಿಂಗಪುರ (ನ.30): ನ. 9ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮತ್ತು ಅವರ ಬೆಂಬಲಿಗರು ಮಹಿಳೆಯರನ್ನು ಚುನಾವಣೆಗೆ ಮತ ಹಾಕಲು ಬಿಡದೆ, ಅವರನ್ನು ಅಡ್ಡಹಾಕಿ ಎಳೆದಾಡಿರುವುದು ಕಾನೂನು ಬಾಹಿರ ಚಟುವಟಿಕೆ. ಇದರಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಶಾಸಕ ಸಿದ್ದು ಸವದಿ ಅವರಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ಕೂಡಲೆ ಅವರು ರಾಜೀನಾಮೆ ನೀಡಿ, ಕ್ಷಮೆ ಯಾಚಿಸಲೇಬೇಕು ಎಂದು ಡಿ.ಎಸ್.ಎಸ್ ಭೀಮವಾದ ಸಂಘಟನೆ ರಾಜ್ಯ ಸಂಚಾಲಕ ಯಮನಪ್ಪ ಗುಣದಾಳ ಆಗ್ರಹಿಸಿದರು.
ಪಟ್ಟಣದಲ್ಲಿ ಭಾನುವಾರ ಸ್ಥಳೀಯ ಡಿ.ಎಸ್.ಎಸ್ ಸಂಘ, ಟಿಪ್ಪು ಸುಲ್ತಾನ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಗುಂಡಾವರ್ತನೆ ಮೆರೆದಿದ್ದನ್ನು ನಮ್ಮ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಚುನಾವಣೆ ದಿನ ಮೂರು ಮಹಿಳಾ ಸದಸ್ಯರು ತಮ್ಮ ಮೂಲಭೂತ ಸಂವಿಧಾನಿಕವಾದ ಮತವನ್ನು ಚಲಾಯಿಸಲು ಸಿದ್ದು ಸವದಿ ಹಾಗೂ ಸಂಗಡಿಗರು ತಡೆದಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನದ ವಿಷಯ. ಈ ಘಟನೆಯನ್ನು ತಡೆಯಲು ಮತ್ತು ಸೂಕ್ತ ಬಂದೋಬಸ್‌್ತ ಮಾಡಿಕೊಳ್ಳಲು ವಿಫಲವಾದ ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕಾನೂನು ಕ್ರಮ ತಕ್ಷಣ ಜರುಗಿಸಬೇಕು. ಇಷ್ಟೆಲ್ಲಾ ಅಹಿತಕರ ಘಟನೆ ನಡೆದರೂ ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ಚುನಾವಣಾಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
undefined
ಚಾಲೇಂಜ್ ಹಾಕಿದ ಸಾಹುಕಾರ್ : ನನ್ನ ರಾಜೀನಾಮೆ ಖಚಿತ ಎಂದ ರಮೇಶ್ ಜಾರಕಿಹೊಳಿ ...
ಪರಿಶಿಷ್ಟಜಾತಿಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಮನ್ನಿಗೇರಿ, ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾಂಗ ಮಾತನಾಡಿದರು. ಇದಕ್ಕೂ ಮುನ್ನ ವಿವಿಧ ಸಂಘಟನೆಗಳ ಸದಸ್ಯರು ಸೇರಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ, ಡಬಲ್ ರಸ್ತೆ, ನಡುಚೌಕಿ, ಜವಳಿ ಬಜಾರ, ಗಾಂಧಿ ವೃತ್ತ, ರಾಣಿ ಚನ್ನಮ್ಮ ವೃತ್ತದ ಮೂಲಕ ಪುರಸಭೆ ಆವರಣದಲ್ಲಿ ಸ್ವಲ್ಪ ಸಮಯ ಪ್ರತಿಭಟನೆ, ನಾಮಫಲಕ, ಫೋಟೋ ಪ್ರದರ್ಶನ ಮಾಡಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಪುರಸಭೆ ಸದಸ್ಯ ಜಾವೇದ ಬಾಗವಾನ, ಅರ್ಜುನ ದೊಡಮನಿ, ಜಗದೀಶ ಒಂಟಗೋಡಿ, ಅರುಣ ಮೇತ್ರಿ, ರಘುವೀರ ಆನೇಪ್ಪನವರ, ಸಂಗಪ್ಪ ಮಾದರ, ಬಲವಂತಗೌಡ ಪಾಟೀಲ, ಅರವಿಂದ ಮಾಲಬಸರಿ, ಈಶ್ವರ ಚಮಕೇರಿ, ನಬಿ ಯಕ್ಷಂಬಿ, ಸುನೀಲಗೌಡ ಪಾಟೀಲ, ನಾನಾ ಜೋಷಿ, ಬಾಷಾಸಾಬ ಕೌಜಲಗಿ, ಅರ್ಜುನ ನಾಯಕ, ನಾರಾಯಣ ನಿಕ್ಕಂ, ದಾನೇಶ ಮೇತ್ರಿ, ಸಿದ್ದು ಬೆನ್ನೂರ, ಉಳ್ಳಾಗಡ್ಡಿ, ಆನಂದ ಮುಖ್ಯನ್ನವರ, ರಾಜು ಗೌಡಪ್ಪಗೋಳ, ಮಹಾಲಿಂಗ ಬುದ್ನಿ, ಪುಂಡಲೀಕ ಮಿಲ್ಟಿ್ರ. ದುರ್ಗಪ್ಪ ಕಿರಿಕಿರಿ, ಸಂದೀಪ ದೊಡಮನಿ, ಪರಸು ಮೇತ್ರಿ, ಚನ್ನಪ್ಪ ಮೇತ್ರಿ, ಭೀಮಸಿ ಮಾವಿನಹಿಂಡಿ, ಲಕ್ಕಪ್ಪ ಬಜಂತ್ರಿ, ಹಾಸಿಂಪೀರ ಮಕಾಂದಾರ, ಬಾಷಾಸಾಬ ಬಿಸ್ತಿ, ಗಿರಿಜಾ ದೊಡಮನಿ, ರೂಪಾ ದೊಡಮನಿ, ಶಾಂತವ್ವ ಲಮಾಣಿ, ಸರೋಜಾ ಚೌವ್ಹಾಣ, ರುಕ್ಮವ್ವ ಚನ್ನಾಳ, ಸುಮಿತ್ರಾ ಆನೇಪ್ಪಗೋಳ, ಜ್ಯೋತಿ ದೊಡಮನಿ, ಯಲ್ಲವ್ವ ಸಂಗಾನಟ್ಟಿಅನೇಕರಿದ್ದರು.