ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಉದ್ದೇಶದಿಂದ ಗ್ರಾ.ಪಂ.ಸದಸ್ಯನೋರ್ವ, ಮಂತ್ರವಾದಿಯ ನೆರವಿನೊಂದಿಗೆ ಬ್ಯಾಂಕ್ ಆವರಣದಲ್ಲಿ ವಾಮಾಚಾರ ಮಾಡಿಸಿದ ಘಟನೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ನಡೆದಿದೆ.
ಮಂಗಳೂರು(ಮಾ.12): ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಉದ್ದೇಶದಿಂದ ಗ್ರಾ.ಪಂ.ಸದಸ್ಯನೋರ್ವ, ಮಂತ್ರವಾದಿಯ ನೆರವಿನೊಂದಿಗೆ ಬ್ಯಾಂಕ್ ಆವರಣದಲ್ಲಿ ವಾಮಾಚಾರ ಮಾಡಿಸಿದ ಘಟನೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ನಡೆದಿದೆ.
ಬಂಟ್ವಾಳ ಗ್ರಾ.ಪಂ.ಸದಸ್ಯ ಆದಂ ಕುಂಞಿ ಮತ್ತು ಮಂತ್ರವಾದಿ ಉಮೇಶ್ ಶೆಟ್ಟಿಎಂಬವರೇ ಈ ಕೃತ್ಯವೆಸಗಿದವರಾಗಿದ್ದು, ಕೃತ್ಯ ಬಹಿರಂಗಗೊಳ್ಳುತ್ತಿದ್ದಂತೆಯೇ ಕ್ಷಮೆ ಯಾಚಿಸಿದ್ದಾರೆ.
undefined
ಪ್ರಕರಣದ ವಿವರ:
ಮಾ.7ರಂದು ಸಹಕಾರಿ ಸಂಘದ ಕಚೇರಿ ಆವರಣದಲ್ಲಿ ಗಾಜಿನ ಬಾಟಲಿಯೊಂದು ಪತ್ತೆಯಾಗಿತ್ತು. ಮೇಲ್ನೋಟಕ್ಕೆ ವಾಮಾಚಾರ ಮಾಡಿಸಿದಂತೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ , ಅಲ್ಲಿನ ಆಡಳಿತ ಮಂಡಳಿ ಸಿ.ಸಿ. ಕ್ಯಾಮೆರಾವನ್ನು ಪರಿಶೀಲಿಸಿತ್ತು.
ಫೆ.19 ರಂದು ರಾತ್ರಿ 9.47ಕ್ಕೆ ಸಹಕಾರಿ ಸಂಘದ ಆವರಣ ಗೋಡೆಯ ಬಳಿ ಆದಂ ಕುಂಞಿ ಹಾಗೂ ಉಮೇಶ್ ಶೆಟ್ಟಿಗಾಜಿನ ಬಾಟಲಿಯಲ್ಲಿ ತಂದು ಇರಿಸಿರುವುದು ಸ್ಪಷ್ಟವಾಗಿತ್ತು. ಅದರಂತೆ ಅವರಲ್ಲಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದ ಅವರು, ಮಂಗಳವಾರ ನಡೆದ ಸಂಘದ ವಿಶೇಷ ಸಭೆಗೆ ಆಗಮಿಸಿ ಕ್ಷಮೆಯಾಚಿಸಿದ್ದಾರೆ.
ಕಂದನ ಮೇಲೆ ಬಿದ್ದ ಮರದ ರೆಂಬೆ: ಬಿಬಿಎಂಪಿ ನಿರ್ಲಕ್ಷ್ಯ, ಬಾಲಕಿ ಸ್ಥಿತಿ ಗಂಭೀರ!
ಈ ಬಗ್ಗೆ ಲಿಖಿತವಾಗಿ ಕ್ಷಮಾಪಣಾ ಪತ್ರ ನೀಡಿರುವ ಆದಂ ಕುಂಞಿ ಹಾಗೂ ಉಮೇಶ್ ಶೆಟ್ಟಿ, ಸಹಕಾರಿ ಬ್ಯಾಂಕ್‌ನಲ್ಲಿ ಗೆಲವು ಸಾಧಿಸುವ ಉದ್ದೇಶದಿಂದ ಸಹಕಾರಿ ಸಂಘದ ಕಚೇರಿಯ ಆವರಣದಲ್ಲಿ ವಾಮಚಾರ ಮಾಡಿದ್ದೇವೆ. ತಪ್ಪಾಯಿತು, ಮುಂದೆ ಇಂತಹ ಯಾವುದೇ ರೀತಿಯ ತಪ್ಪು ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಫೆ.23 ರಂದು ಈ ಸಹಕಾರಿ ಸಂಘದ ಚುನಾವಣೆಯಲ್ಲಿ ಇವರ ವಿರೋಧಪಕ್ಷವಾಗಿರುವ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ ಎನ್ನುವುದು ಗಮನಾರ್ಹ.