‘ಹುಣಸೂರು ಬಿಜೆಪಿ ತೆಕ್ಕೆಗೆ’ : ಗೆಲ್ಲೋ ಅಂತರದ ಲೆಕ್ಕವೂ ಪಕ್ಕಾ!

Published : Dec 02, 2019, 12:56 PM IST
‘ಹುಣಸೂರು ಬಿಜೆಪಿ ತೆಕ್ಕೆಗೆ’ : ಗೆಲ್ಲೋ ಅಂತರದ ಲೆಕ್ಕವೂ ಪಕ್ಕಾ!

ಸಾರಾಂಶ

ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಗೆಲ್ತಾರೆ. ಮತಗಳ ಅಂತರವು ಇಷ್ಟೇ ಇರಲಿದೆ ಎಂದು ಬಿಜೆಪಿ ನಾಯಕರು ಭವಿಷ್ಯ ನುಡಿದಿದ್ದಾರೆ.  ಉಪ ಚುನಾವಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದ ಸಂದರ್ಭದಲ್ಲಿ ನಾಯಕರ ಭರವಸೆಗಳು ಹೆಚ್ಚುತ್ತಿವೆ.

ಹುಣಸೂರು [ಡಿ.02]: ಹುಣಸೂರು ಜಿಲ್ಲೆ ಮಾಡಬೇಕು ಎನ್ನುವ ನನ್ನ ಕನಸಿಗೆ ಕನರು ಮಣೆ ಹಾಕುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹೇಳಿದರು. 

ಹಣಸೂರಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಇಲ್ಲಿ ದೇವರಾಜ ಅರಸು ಅವರ ಹೆಸರು ಶಾಶ್ವತವಗಿ ಇರುವಂತಹ ಕೆಲಸಗಳನ್ನು ಮಾಡಲಾಗುತ್ತದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂತಪ್ಪ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದರು. 

ಇನ್ನು ವಿವಿಧೆಡೆ ಪ್ರಚಾರ ನಡೆಸುತ್ತಿರುವ ವಿಶ್ವನಾಥ್ ಉಪ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. 

ಉಪ ಸಮರದ ಬಗ್ಗೆ ವಿಸ್ಮಯದ ಭವಿಷ್ಯ: ಇವರು ಹೇಳಿದ್ದು ಸುಳ್ಳಾಗಿದ್ದೇ ಇಲ್ಲ!...

ಇನ್ನು ಇದೇ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಪ್ರಸ್ತಾಪಿಸಿದ್ದು, ಈಗ ಮೈತ್ರಿ ಮಾಡಿಕೊಳ್ಳುವವರು ನಾಲ್ಕು ತಿಂಗಳ ಹಿಂದೆ ಯಾಕೆ ಬೇರೆ ಆದರು ಎಂದು ಪ್ರಶ್ನೆ ಮಾಡಿದರು. 

ಎರಡು ಪಕ್ಷಗಳ ಮುಖಂಡರು ಈಗಾಗಲೇ ಅಧೀರರಾಗಿದ್ದಾರೆ. ಒಬ್ಬರಾಗಿ ಬಿಜೆಪಿ ಎದುರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮೈತ್ರಿಯ ಮಾತುಗಳನ್ನು ಆಡುತ್ತಾರೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಹುಣಸೂರಿನಲ್ಲಿ ದೇವರಾಜ ಅರಸು ನಂತರ ಯಾರಿಗೂ ಮಂತ್ರಿ ಭಾಗ್ಯ ಸಿಕ್ಕಿಲ್ಲ. ಸಚಿವರಿಗಾಗಿ ಹುಣಸೂರು ಜನ ವಿಶ್ವನಾಥ್ ಕೈ ಹಿಡಿಯುತ್ತಾರೆ. ನಾನೂ ಕೂಡ ಹುಣಸೂರು ನಗರದ ನನ್ನ ಬೆಂಬಲಿಗರಿಗೆ ಹೇಳಿದ್ದೇನೆ. 

ಹುಣಸೂರಿನಲ್ಲಿಯೇ‌ 10 ಸಾವಿರ ಮತಗಳ ಅಂತರದಲ್ಲಿ‌ ವಿಶ್ವನಾಥ್ ಗೆಲ್ಲಿಸುತ್ತೇವೆ ಎಂದರು.

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC