ಹೊಸಪೇಟೆ (ಅ.04): ಹಾನಗಲ್ ಕ್ಷೇತ್ರ ಬಿಜೆಪಿಗೆ (BJP) ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರದಲ್ಲಿ ಪಕ್ಷ ಗೆಲ್ಲೋದು ಬಹುತೇಕ ಖಚಿತವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ಹೇಳಿದರು.
ವಿಜಯನಗರ (Vijayanagara) ಉತ್ಸವದ ಹಿನ್ನೆಲೆಯಲ್ಲಿ ಎತ್ತಿನ ಬಂಡಿ ಉತ್ಸವಕ್ಕೆ ಭಾನುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
undefined
ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಸಿ.ಎಂ. ಉದಾಸಿಯವರ (CM Udasi) ಅಭಿವೃದ್ಧಿ ಕಾರ್ಯ ಬಿಜೆಪಿ ಗೆಲ್ಲಲು ಸಹಕಾರಿಯಾಗಲಿದೆ. ಟಿಕೆಟ್‌ಗಾಗಿ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇರೋದು ಸಹಜ. ಆದರೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ. ವರಿಷ್ಠರು ಯಾರನ್ನು ಅಭ್ಯರ್ಥಿ ಮಾಡ್ತಾರೋ ಅವರನ್ನು ಗೆಲ್ಲಿಸುತ್ತೇವೆ. ಕೆಲವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಪುತ್ರ ವಿಜಯೇಂದ್ರ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ, ಅವರ ಹೆಸರು ತೇಲಿಬರುತ್ತಿರಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೃಷಿ ವಿವಿಯಲ್ಲಿ ಶೇ. 50 ಹುದ್ದೆ ಭರ್ತಿಗೆ ಕ್ರಮ: ಸಚಿವ ಬಿ.ಸಿ.ಪಾಟೀಲ್
ಸೂಕ್ತ ಅಭ್ಯರ್ಥಿ
ಹಾನಗಲ್ಲ (Hanagal) ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಕೃಷಿ ಇಲಾಖೆ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಕಳುಹಿಸಲಾಗುವುದು. ಗೆಲ್ಲುವ ಅಭ್ಯರ್ಥಿ ಯಾರಿದ್ದಾರೋ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಲಿದೆ ಎಂದ ಅವರು, ಉದಾಸಿ ಅವರ ಕುಟುಂಬಕ್ಕೆ ಟಿಕೆಟ್ ಕೊಡುವ ಕುರಿತು ಪ್ರತಿಕ್ರಿಯೆ ನೀಡಲಿಲ್ಲ.
ಲಕ್ಷ್ಮಿ ಹೆಬ್ಬಾಳ್ಕರ (Lakshmi Hebbalkar) ಬಗ್ಗೆ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಓರ್ವ ಮಹಿಳೆ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಆದರೆ, ಸಂಜಯ ಪಾಟೀಲ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಸ್ಪಷ್ಟವಿಲ್ಲ. ಯಾರು ಯಾರ ಬಗ್ಗೆ ಹೇಳಿದ್ದಾರೆಯೋ ಅವರೇ ಉತ್ತರ ಕೊಡಲಿ. ಯಾರೇ ಆದರೂ ಮಹಿಳೆಯರ ಬಗ್ಗೆ ಗೌರವ ಇಟ್ಟು ಮಾತನಾಡಬೇಕು ಎಂದರು.
ಮತಾಂತರ ತಡೆ ಕಾಯಿದೆ ಜಾರಿ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತಾಗಿ ನಮ್ಮಲ್ಲಿ ಕಾಯ್ದೆಗಳಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಕೆಲಸವಾಗಬೇಕಿದೆ. ಆಗ ಮಾತ್ರ ಪರಿಣಾಮಕಾರಿ ಕಾಯ್ದೆಗಳು ಜಾರಿಗೆ ಬರುತ್ತವೆ. ಅದೇ ರೀತಿ ಗೋಹತ್ಯೆ ತಡೆ ಕಾಯ್ದೆಯು ಇವತ್ತು- ನಿನ್ನೆ ಬಂದಿದ್ದಲ್ಲ.
1956ರಲ್ಲಿಯೇ ಬಂದಿದೆ. ಎಲ್ಲಿ ಅಕ್ರಮವಾಗಿ ಗೋವು ಸಾಗಾಣಿಕೆ ನಡೆಯುತ್ತದೆಯೋ ಮಾಹಿತಿ ಆಧರಿಸಿ ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹುಡುಕಿಕೊಂಡು ಹೋಗಿ ಗೋಹತ್ಯೆ ತಡೆಯಲು ಹೇಗೆ ಸಾಧ್ಯ. ಜಾನುವಾರು ಹತ್ಯೆ ಮಾಡುವುದು ಕಂಡುಬಂದರೆ ನಿಶ್ಚಿತವಾಗಿ ತಡೆಯಲಾಗುತ್ತದೆ ಎಂದರು.