ಅನರ್ಹ ಶಾಸಕರಿಗೆ ಟಿಕೆಟ್‌ ನೀಡುವುದು ಸಂಸದೀಯ ಮಂಡಳಿಗೆ ಬಿಟ್ಟ ವಿಚಾರ

By Web Desk  |  First Published Sep 22, 2019, 10:25 AM IST

ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದು ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟ ವಿಚಾರ ಎಂದ ಸಚಿವ ಸಿ.ಟಿ. ರವಿ| ಎಲ್ಲ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುತ್ತೇವೆ. ಅದರಲ್ಲಿ ಸಂಶಯವೇ ಇಲ್ಲ | ಈಗಾಗಲೇ ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಿ ಮುಕ್ತಾಯಗೊಳ್ಳುತ್ತಿದೆ| ಸಂಘಟನಾತ್ಮಕ ಚಟುವಟಿಕೆಗಳು ನಡೆಯುತ್ತಿವೆ| 


ಚಿಕ್ಕಮಗಳೂರು: (ಸೆ.22) ಅನರ್ಹ ಶಾಸಕರು ಬಿಜೆಪಿಗೆ ಅಧಿಕೃತವಾಗಿ ಸೇರಿಲ್ಲ. ಈ ಹಿನ್ನೆಲೆಯಲ್ಲಿ ಟಿಕೆಟ್‌ ನೀಡುವುದು ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟ ವಿಚಾರ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಮುಂದುವರಿಯಬೇಕಾದರೆ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 6 ಸ್ಥಾನಗಳನ್ನು ಗೆಲ್ಲಲೇಬೇಕಾಗಿದೆ ಆದರೆ, ಚುನಾವಣೆ ನಡೆಯಲಿರುವ ಎಲ್ಲ 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ. ಅದರಲ್ಲಿ ಸಂಶಯವೇ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

Tap to resize

Latest Videos


17 ಮಂದಿ ಶಾಸಕರಲ್ಲಿ ಅವರು ಪಕ್ಷ ಸೇರಲು ಈಗಲೇ ಮುಂದೆ ಬಂದಲ್ಲಿ ಅವರನ್ನು ಪಕ್ಷ ಸ್ವಾಗತಿಸುತ್ತದೆಯೋ ಅಥವಾ ಅನರ್ಹತೆ ಪ್ರಕರಣ ಇತ್ಯರ್ಥ ಆಗುವವರೆಗೂ ಕಾಯಲಾಗುತ್ತದೆಯೋ ಎಂದು ಕೇಳಿದಾಗ, ಇದು ಒಂದು ರೀತಿ ಊಹಾತ್ಮಕವಾದ ಪ್ರಶ್ನೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದಲ್ಲಿ ಈಗಾಗಲೇ ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳಲ್ಲಿ 15ಕ್ಕೆ ಅ.21ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ಎಲ್ಲ 15 ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆದ್ದುಕೊಳ್ಳುತ್ತದೆ. ಈಗಾಗಲೇ ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಿ ಮುಕ್ತಾಯಗೊಳ್ಳುತ್ತಿದೆ. ಸಂಘಟನಾತ್ಮಕ ಚಟುವಟಿಕೆಗಳು ನಡೆಯುತ್ತ ಬಂದಿದೆ ಎಂದು ತಿಳಿಸಿದರು.

ಪಕ್ಷದ ಎರಡು ರೀತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಒಂದು ರಾಜಕೀಯ ಚಟುವಟಿಕೆಗಳು ನಡೆಯುತ್ತ ಹೋಗುತ್ತಿರುತ್ತವೆ. ಇನ್ನೊಂದು ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಸಾಗುತ್ತಿರುತ್ತವೆ. ಆ ಹಿನ್ನೆಲೆಯಲ್ಲಿ ಚುನಾವಣೆ ಬಂದಾಕ್ಷಣ ಬೇರೆ ಕೆಲಸ ಬಿಟ್ಟು ಅದಕ್ಕೆ ಸಿದ್ಧರಾಗಬೇಕಾಗಿಲ್ಲ. ಸಿದ್ಧತೆ ಇರುತ್ತದೆ, ಚುನಾವಣೆ ಎದುರಿಸುವುದೊಂದೆ ಕೆಲಸ ಎಂದು ವಿವರಿಸಿದರು.

ಇನ್ನು ಈ 17 ಮಂದಿ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅನರ್ಹತೆಗೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಬಾಕಿ ಇದೆ. ಅಲ್ಲಿ ಆಗುವ ನಿರ್ಧಾರದ ಮೇಲೆ ಮುಂದಿನದು ನಿರ್ಧಾರವಾಗುತ್ತದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಇರುವ ಕೊನೆಯ ದಿನದ ಒಳಗೆ ಬಹುತೇಕ ತೀರ್ಪು ಹೊರಬೀಳುತ್ತದೆ. ಹಿಂದಿನ ಸಭಾಧ್ಯಕ್ಷರು ಈ 17 ಮಂದಿಗೆ ಸ್ಪರ್ಧೆ ಮಾಡಲು ಅರ್ಹರಾಗಿರದಂತೆ ತೀರ್ಪು ನೀಡಿದ್ದಾರೆ. ತಮಿಳುನಾಡು ಪ್ರಕರಣದಲ್ಲಿ ಆ ರೀತಿ ತೀರ್ಪಿದ್ದರೂ ಆ ಶಾಸಕರು ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಯಿತು. ಹಾಗಾಗಿ ಅಷ್ಟರೊಳಗೆ ನ್ಯಾಯಾಲಯ ತೀರ್ಪು ಕೊಡುವ ಸಂಭವವಿದೆ ಎಂದು ತಿಳಿಸಿದರು.
 

click me!