ಬಿಜೆಪಿಯು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಅಭೂತಪೂರ್ವಕ ಜಯ ಸಾಧಿಸಿರುವ ಬಗ್ಗೆ ಭಾಜಪ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ತುಮಕೂರು : ಬಿಜೆಪಿಯು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಅಭೂತಪೂರ್ವಕ ಜಯ ಸಾಧಿಸಿರುವ ಬಗ್ಗೆ ಭಾಜಪ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಭಾನುವಾರ ನಗರದ ವಿವೇಕಾನಂದ ರಸ್ತೆಯ ಅಂಗಡಿ ಮಾಲೀಕರು ಹಾಗೂ ವರ್ತಕರ ಸಂಘ, ಜಿಲ್ಲಾ ಬಿಜೆಪಿ ವ್ಯಾಪಾರಿ ಮತ್ತು ವಾಣಿಜ್ಯ ಪ್ರಕೋಷ್ಠ, ತುಮಕೂರು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಭಾಜಪದ ಮುಖಂಡರು ಮತ್ತು ನಾಗರಿಕರು ಬಿಜೆಪಿಯ ಗಣನೀಯ ಸಾಧನೆಗೆ ತೀವ್ರ ಸಂತೋಷ ವ್ಯಕ್ತಪಡಿಸಿ ಘೋಷಣೆ ಕೂಗಿ ಸಂಭ್ರಮಿಸಿದರು.
undefined
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್, ಪ್ರಧಾನಿ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು, ಜನಪರ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಜನ ಮನ್ನಣೆ ನೀಡಿದ್ದಾರೆ, ಮಧ್ಯಪ್ರದೇಶ, ರಾಜಸ್ಥಾನ ಛತ್ತೀಸ್‌ಗಢದಲ್ಲಿ ಹೆಚ್ಚಿನ ಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮೂರು ರಾಜ್ಯಗಳ ಮತದಾರರಿಗೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ವ್ಯಾಪಾರಿ ಮತ್ತು ವಾಣಿಜ್ಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಬಿ.ಎಸ್. ಫಣೀಂದ್ರ ಮಾತನಾಡಿ, ಮೂರು ರಾಜ್ಯಗಳಲ್ಲಿ ಭಾರಿ ಗೆಲುವು ಸಾಧಿಸಿದ ಬಿಜೆಪಿಗೆ ಅಭಿನಂದಿಸಿ, ಬಿಜೆಪಿ ಗೆಲುವಿನಲ್ಲಿ ಮತದಾರರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಭಾಜಪ ಮುಖಂಡ ಎಸ್. ರಾಮಚಂದ್ರರಾವ್ ಮಾತನಾಡಿ, ಮೂರು ರಾಜ್ಯಗಳಲ್ಲಿ ಚುನಾಯಿತ ೩೩೫ ಕ್ಕೂ ಹೆಚ್ಚು ಬಿಜೆಪಿ ಶಾಸಕರು ಆಯ್ಕೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಈ ಗೆಲುವಿಗೆ ಅಹೋರಾತ್ರಿ ಶ್ರಮಿಸಿದ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಂಸದರಿಗೆ, ಜನಪ್ರತಿನಿಧಿಗಳಿಗೆ ಹಾಗೂ ದೇವದುರ್ಲಬ ಅಸಂಖ್ಯಾತ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದರು.
ಸಂಭ್ರಮಾಚರಣೆಯಲ್ಲಿ ಭಾಜಪ ಮುಖಂಡರಾದ ಕೆ.ಪಿ. ಮಹೇಶ್, ಟಿ.ಆರ್. ಸದಾಶಿವಯ್ಯ, ತುಮಕೂರು ಜಿಲ್ಲಾ ವಕ್ಪ್ ಬೋರ್ಡಿನ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ಬಿಜೆಪಿ ವ್ಯಾಪಾರಿ ಮತ್ತು ವಾಣಿಜ್ಯ ಪ್ರಕೋಷ್ಠದ ಜಿಲ್ಲಾ ಪದಾಧಿಕಾರಿ ಟಿ.ಎಸ್. ರವಿಕಿರಣ್, ಬಿ.ಸಿ. ಗಣೇಶ್, ಎಂ.ಜೆ. ಉಮೇಶ್, ಅತ್ತಿ ರೇಣುಕಾನಂದ್, ವಿವೇಕ್, ಗಣೇಶ್, ಸತೀಶ್, ಹರೀಶ್ ಬಾಬು ಹಾಗೂ ತುಮಕೂರು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಇಮ್ರಾನ್ ಅಹಮದ್, ರಫೀಕ್ ಅಹಮದ್, ಝುಬೇರ್ ಪಾಷಾ, ಸಲೀಂ ಅಹಮದ್ ಮತ್ತು ತುಮಕೂರು ವಿವೇಕಾನಂದ ರಸ್ತೆ ಅಂಗಡಿ ಮಾಲೀಕರು ಹಾಗೂ ವರ್ತಕರ ಸಂಘದ ಪದಾಧಿಕಾರಿ ರಾಜೀವ್ ಕೆ., ನವೀನ್, ತುಕಾರಾಂ, ಸಂತೋಷ್, ಜಿತೇಂದ್ರ, ರಮೇಶ್, ಮಧುಕರ್, ಪ್ರಶಾಂತ್, ಲಕ್ಷ್ಮಣ್, ಮಂಜುನಾಥ್, ದೇವೇಂದ್ರ ಸಿಂಗ್, ಪ್ರಕಾಶ್, ಮಹೇಶ್ ಸೇರಿ ಅನೇಕ ಕಾರ್ಯಕರ್ತರು, ನಾಗರಿಕರು ಇದ್ದರು.
ಬಿಜೆಪಿಯು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಅಭೂತಪೂರ್ವಕ ಜಯ ಸಾಧಿಸಿರುವ ಬಗ್ಗೆ ಭಾಜಪ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.