ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿರುವ ಹಿನ್ನಲೆ ತಾಲೂಕಿನ ರೈತರು ಪರಿಣಾಮಕಾರಿಯಾಗಿ ಬರ ನಿರ್ವಹಿಸಲು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಡೆಗಟ್ಟಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಪಟೂರು: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿರುವ ಹಿನ್ನಲೆ ತಾಲೂಕಿನ ರೈತರು ಪರಿಣಾಮಕಾರಿಯಾಗಿ ಬರ ನಿರ್ವಹಿಸಲು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಡೆಗಟ್ಟಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಂಗಾಮಿನಲ್ಲಿ ರಾಗಿ ಬೆಳೆಯ ಬೆಳವಣಿಗೆ ಮಳೆಯ ಕೊರತೆ ಕಾರಣ ಕುಂಠಿತವಾಗಿದ್ದು, ಈಗಿರುವ ರಾಗಿ ಬೆಳೆಯು ಕಟಾವು ಹಂತದಲ್ಲಿದ್ದು, ಕಂಬೈನ್ಡ್ ಹಾರ್ವೆಸ್ಟರ್ ಉಪಯೋಗಿಸಿ ಕಟಾವು ಮಾಡಿದಲ್ಲಿ ಮೇವು ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ.
undefined
ಆದ್ದರಿಂದ ರಾಗಿ ಬೆಳೆ ಕಟಾವು ಮಾಡಲು ಕಂಬೈನ್ಡ್ ಹಾರ್ವೆಸ್ಟರ್ ಬಳಸುವ ಬದಲು ಸಾಂಪ್ರದಾಯಿಕವಾಗಿ ಕುಡುಗೋಲಿನಿಂದ ಮೇವು ಕಟಾವನ್ನು ಕೈಗೊಂಡು ಜಾನುವಾರುಗಳಿಗೆ ಮೇವನ್ನು ಶೇಖರಿಸಲು ರೈತರಲ್ಲಿ ಕೃಷಿ ಅಧಿಕಾರಿ ಮನವಿ ಮಾಡಿದ್ದಾರೆ.
ಯಾರು ಜಮೀನು ಮಾರಬೇಡಿ
ಕನಕಪುರ (ಡಿ.03): ನಾವೆಲ್ಲಾ ಬೆಂಗಳೂರು ಜಿಲ್ಲೆಗೆ ಸೇರಿದವರಾಗಿದ್ದು ನಿಮ್ಮ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ಭೂಮಿಗಳನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕನಕಪುರ, ಸಾತನೂರು, ಕೋಡಿಹಳ್ಳಿ, ದೊಡ್ಡಆಲಹಳ್ಳಿ ಸೇರಿದಂತೆ ತಾಲೂಕಿನಲ್ಲಿ ಈ ಮೊದಲು ಭೂಮಿಯ ಬೆಲೆ ಎಷ್ಟಿತ್ತು ಈಗ ಎಷ್ಟಿದೆ ಎಂದು ನೀವೆ ಅಂದಾಜು ಮಾಡಿ, ನಾನು ಏನೇನು ಮಾಡಲು ಸಾಧ್ಯ ಆ ಕೆಲಸವನ್ನು ಮಾಡಿದ್ದೇನೆ. ನಾವು ಬೆಂಗಳೂರಿಗೆ ಸೇರಿದವರು ಎಂದ ತಕ್ಷಣ ನಮ್ಮ ವಿರೋಧಿಗಳು ಏನೇನೋ ಮಾಡಿದರು, ವಿರೋಧ ಮಾಡುವ ಜನರು ಮಾಡಲಿ, ನಾವು ಬೆಂಗಳೂರು ಜಿಲ್ಲೆಯವರು. ಸೂಕ್ತ ಕಾಲ ಬರಲಿದ್ದು, ನಾನು ನಿಮ್ಮ ಗೌರವ ಉಳಿಸುವಂತಹ ಕೆಲಸವನ್ನು ಮಾಡಿಯೇ ಮಾಡುತ್ತೇನೆ ಎಂದು ಒತ್ತಿ ಹೇಳಿದರು.
ಕೆಲಸ ಮತ್ತು ವಿದ್ಯಾಭ್ಯಾಸದ ನಿಮಿತ್ತ ಬಹಳಷ್ಟು ಮಂದಿ ನಿತ್ಯ ಬೆಂಗಳೂರಿಗೆ ಓಡಾಡುತಿದ್ದೇವೆ. ಹಾರೋಹಳ್ಳಿವರೆಗೂ ಬರುತ್ತಿರುವ ಬಿಎಂಟಿಸಿ ಬಸ್ ಅನ್ನು ಕನಕಪುರದವರೆಗೂ ವಿಸ್ತರಿಸುವಂತೆ, ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಇಲ್ಲದೆ ಪರದಾಡುತ್ತಿದ್ದು, ನಮ್ಮ ವಿಧ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಕನಿಷ್ಠ 20 ಬಸ್ ಗಳ ಸಂಚಾರ ವ್ಯವಸ್ಥೆ ಮಾಡಿ ಎಂದು ಸರ್ಕಾರಿ ಪದವಿ ಪೂರ್ವ, ಪದವಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಆಸ್ತಿಗಳ ಡಿಜೀಟಲೀಕರಣ ಯೋಜನೆ ಕನಕಪುರಕ್ಕೆ ವಿಸ್ತರಣೆ: ಡಿ.ಕೆ.ಶಿವಕುಮಾರ್
ಊಟವಿಲ್ಲದೆ ಪರದಾಡಿದ ಜನತೆ: ಕನಕಪುರದಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಹವಾಲುಗಳನ್ನು ಸಲ್ಲಿಸಲು ಆಗಮಿಸಿದ್ದ ಜನತೆಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನ ಮಾಡಿದ್ದರೂ, ನಿರೀಕ್ಷೆಗೂ ಮೀರಿದ ಜನತೆ ಸಭೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಊಟದ ಅಭಾವ ಉಂಟಾಯಿತು. ಇದರಿಂದ ರೋಷಗೊಂಡ ರೈತರು, ಮಹಿಳೆಯರು ಕೈಯಲ್ಲಿ ತಟ್ಟೆ ಹಿಡಿದು ಕಾರ್ಯಕ್ರಮದ ಆಯೋಜಕರಿಗೆ ಹಿಡಿ ಶಾಪವನ್ನು ಹಾಕಿದ್ದು ಕಂಡುಬಂದಿತ್ತು.