ಪೊಲೀಸ್‌ ವ್ಯಾನ್‌, ಆಂಬ್ಯಲೆನ್ಸ್‌ನಲ್ಲಿ BJP ದುಡ್ಡು ಸಾಗಣೆ: ಸಿದ್ದು

Published : Dec 03, 2019, 11:54 AM ISTUpdated : Dec 03, 2019, 12:01 PM IST
ಪೊಲೀಸ್‌ ವ್ಯಾನ್‌, ಆಂಬ್ಯಲೆನ್ಸ್‌ನಲ್ಲಿ BJP ದುಡ್ಡು ಸಾಗಣೆ: ಸಿದ್ದು

ಸಾರಾಂಶ

ಪೊಲೀಸ್ ವ್ಯಾನ್‌, ಆಂಬ್ಯುಲೆನ್ಸ್ ಮೂಲಕ ಬಿಜೆಪಿಯವರು ದುಡ್ಡು ಸಾಗಿಸ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಮೈಸೂರು(ಡಿ.03): ಪೊಲೀಸ್ ವ್ಯಾನ್‌, ಆಂಬ್ಯುಲೆನ್ಸ್ ಮೂಲಕ ಬಿಜೆಪಿಯವರು ದುಡ್ಡು ಸಾಗಿಸ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯರನ್ನು ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಹೊಗಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಚುನಾವಣೆಯ ಸ್ಟ್ಯಾಟರ್ಜಿಯಿಂದ ಹಾಗೇ ಹೇಳುತ್ತಿದ್ದಾರೆ. ನನ್ನನ್ನು ಸಿಎಂ ಇಳಿಸಿ ಅಂತ ಪತ್ರ ಬರೆದಿದ್ದ. ಹೀಗ್ಯಾಕೆ ಪ್ರೀತಿ ಬಂದಿದೆ ಎಂದು ಪ್ರಶ್ನಿಸಿದ್ದಾರೆ.

ವಾಹನ ತಪಾಸಣೆ ವೇಳೆ ಮೂಲ ದಾಖಲೆ ಕಡ್ಡಾಯ

ನನ್ನನ್ನ ಬೈದರೆ ಜನ ಮತ ಹಾಕೋಲ್ಲ ಅಂತ ಚುನಾವಣಾ ಸ್ಟ್ಯಾಟರ್ಜಿಯಿಂದ ಹಾಗೇ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹುಣಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಪೊಲೀಸ್ ವ್ಯಾನ್‌ಗಳಲ್ಲಿ, ಆಂಬ್ಯುಲೆನ್ಸ್‌ಗಳಲ್ಲಿ ದುಡ್ಡು ಸಾಗಿಸುತ್ತಾರೆ. ಬಿಜೆಪಿಯವ್ರು ಮೊದಲಿನಿಂದಲು ಉಪ ಚುನಾವಣೆ ಮಾಡ್ತಿರೋದು ಹೀಗೆ ಎಂದು ಆರೋಪಿಸಿದ್ದಾರೆ.

ಕೇಳಿದ್ದನ್ನೆಲ್ಲ ಕೊಟ್ಟರೂ ಪಕ್ಷ ಬಿಟ್ಟರು: ಸಿದ್ದರಾಮಯ್ಯ ಕಿಡಿ

ಹಣದಿಂದಲೇ ಬಿಜೆಪಿಯವ್ರು ಚುನಾವಣೆ ಮಾಡೋದಕ್ಕೆ ಹೊರಟಿದ್ದಾರೆ. ಆದರೆ ಜನ ಇದಕ್ಕೆ ಮರಳಾಗೋದಿಲ್ಲ. ಅವರಿಂದ ಹಣ ಪಡೆದರು, ಕಾಂಗ್ರೆಸ್‌ಗೆ ಮತ ಹಾಕ್ತಾರೆ ಎಂದು ಹುಣಸೂರು ಪ್ರಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!