ದೆಹಲಿಯಲ್ಲಿ ಚಿಕ್ಕೋಡಿ ಯೋಧ ಅನುಮಾನಾಸ್ಪದ ರೀತಿಯಲ್ಲಿ ಸಾವು

Kannadaprabha News   | Asianet News
Published : Aug 29, 2020, 12:09 PM ISTUpdated : Aug 29, 2020, 12:12 PM IST
ದೆಹಲಿಯಲ್ಲಿ ಚಿಕ್ಕೋಡಿ ಯೋಧ ಅನುಮಾನಾಸ್ಪದ ರೀತಿಯಲ್ಲಿ ಸಾವು

ಸಾರಾಂಶ

ದೆಹಲಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಯೋಧ| ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಯೋಧ| 18 ತಿಂಗಳ ಹಿಂದಷ್ಟೆ ಸೈನ್ಯಕ್ಕೆ ಸೆರ್ಪಡೆಯಾಗಿದ್ದ ಸೈನಿಕ| ಯೋಧನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ| 

ಚಿಕ್ಕೋಡಿ(ಆ.29): ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಯೋಧನೊಬ್ಬ ದೆಹಲಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ.

ಅನೀಲ ಶಿವಾಜಿ ಶಿಂಗಾಯಿ (23) ಮೃತಪಟ್ಟ ಯೋಧ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. 18 ತಿಂಗಳ ಹಿಂದಷ್ಟೆ ಸೈನ್ಯಕ್ಕೆ ಸೆರ್ಪಡೆಯಾಗಿದ್ದನು ಎಂದು ತಿಳಿದು ಬಂದಿದೆ. 

ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯ; ಮಹಾರಾಷ್ಟ್ರ ರಾಜಕಾರಣಿಗಳಿಂದ ಮತ್ತೆ ಕ್ಯಾತೆ

ಮೃತ ಅನೀಲ ಶಿವಾಜಿ ಶಿಂಗಾಯಿ ತರಬೇತಿ ಮುಗಿಸಿ ಮೊದಲ ಬಾರಿಗೆ ಕಳೆದ ಮಾರ್ಚ್‌ನಲ್ಲಿ ಮನೆಗೆ ಬಂದಿದ್ದರು. ಲಾಕ್‌ಡೌನ್‌ನಲ್ಲಿ ಸಿಲುಕಿದ್ದ ಯೋಧ ಒಂದೂವರೆ ತಿಂಗಳ ಹಿಂದೆ ಮತ್ತೆ ಕರ್ತವ್ಯಕ್ಕೆ ತೆರಳಿದ್ದರು. ಶುಕ್ರವಾರ ಮನೆಯವರಿಗೆ ಸೇನಾ ಮೂಲಗಳು ಯೋಧ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿವೆ ಎಂದು ತಿಳಿದು ಬಂದಿದೆ.
 

PREV
click me!

Recommended Stories

ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!
Namma Hola Namma Dari Scheme: ರೈತರಿಗೆ ಶುಭ ಸುದ್ದಿ, ನಿಮ್ಮ ಜಮೀನಿಗೆ ರಸ್ತೆ ಸಂಪರ್ಕ ಈಗ ಸುಲಭ!