* ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಜಿ.ಪರಮೇಶ್ವರ್ ಭೇಟಿ
* ಬಿ.ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ, ನಡಸಿ ಜೈಲು ಸೇರಿರುವವರಿಗೆ ಕ್ಷೇಮ ವಿಚಾರಿಸಿದ ಪರಂ
* ಸರ್ಕಾರದ ನೀತಿ ಖಂಡನೀಯ
ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು(ಜೂ.08): ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಜೈಲು ಸೇರಿರುವ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರು ಭೇಟಿಯಾಗಿದ್ದಾರೆ.
ಇಂದು(ಬುಧವಾರ) ಜಿಲ್ಲಾ ಕಾರಾಗೃಹದ ಭೇಟಿ ಬಳಿಕ ಮಾತನಾಡಿದ ಜಿ.ಪರಮೇಶ್ವರ್ ಅವರು, ಪ್ರತಿಭಟನೆ ಮಾಡಿದ್ದ ಎನ್‌ಎಸ್‌ಯುಐ ಕಾರ್ಯಕರ್ತರ ಬಂಧನ ಖಂಡನೀಯ. ಅಂಬೇಡ್ಕರ್, ಬಸವಣ್ಣ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ವಿಚಾರ ತಿರುಚಿದ್ದಾರೆ. ಹಾಗಾಗಿ ಎನ್‌ಎಸ್‌ಯುಐ ಕಾರ್ಯಕರ್ತರಯ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ನಮ್ಮ ಹಕ್ಕುಹಾಗಾಗಿ ಪ್ರತಿಭಟನೆ ಮಾಡಿದ್ದಾರೆ. ಮನೆಯೊಳಗೆ ನುಗ್ಗಿ ಬೆಂಕಿ ಹಚ್ಚಿದ್ರು ಎಂದು ಸುಳ್ಳು ದೂರು ದಾಖಲಿಸಿದ್ದಾರೆ ಅಂತ ಹೇಳಿದ್ದಾರೆ.
TUMAKURU: ಸಚಿವ ಬಿ.ಸಿ ನಾಗೇಶ್ ಮನೆ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಜೈಲು ಪಾಲು
ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ, ಜಾಮೀನಿನ ಮೇಲೆ ಬಂಧಿತರನ್ನು ಹೊರತರುವ ಪ್ರಯತ್ನ ಮಾಡುತ್ತೇವೆ. ಆದರೆ ಸರ್ಕಾರದ ನೀತಿ ಖಂಡನೀಯ, ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುವ ಕೆಲಸ ಸರ್ಕಾರ ಮಾಡಬಾರದು. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಅಲ್ಲಾ ಎನ್ನುತ್ತಾರೆ. ಬಸವಣ್ಣ ಬಗ್ಗೆ ಬೇರೆ ರೀತಿ ಬರೆದರೆ ಪ್ರತಿರೋಧ ಬಂದೇ ಬರುತ್ತದೆ. ಹಾಗಾಗಿ ಜೈಲಿನಲ್ಲೇ ನೋಡೋಕೆ ಬಂದಿದ್ದೇನೆ, ಧೈರ್ಯ ಹೇಳಿ ಬಂದಿದ್ದೇನೆ, ಇಂದು ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಿದೆ ಅಂತ ತಿಳಿಸಿದ್ದಾರೆ.
ಬಿಜೆಪಿ ಕ್ಷಮೆ ಕೇಳಬೇಕು
ಪ್ರವಾದಿ ವಿರುದ್ಧ ಹೇಳಿಕೆಗೆ ಭಾರತ ಕ್ಷಮೆ ಕೇಳಬೇಕು ಎಂದು ಇರಾನ್ ಇರಾಕ್ ರಾಷ್ಟ್ರಗಳ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಬಿಜೆಪಿ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದೆ. ಯಾರಾದರೂ ನಾಯಕರು ಹೇಳಿಕೆ ಕೊಟ್ಟರೆ ಬಿಜೆಪಿ ಅದನ್ನು ಸಮರ್ಥಿಸಿಕೊಳ್ಳಬೇಕು ಅಥವಾ ಇಲ್ಲ ಆ ಹೇಳಿಕೆ ನಮ್ಮದಲ್ಲ ಎಂದು ಹೇಳಬೇಕು. ಬೇರೆ ದೇಶಗಳಿಂದ ಪ್ರತಿಕ್ರಿಯೆ ಬರುವ ಮೊದಲು ಬಿಜೆಪಿ ಅದಕ್ಕೆ ಸ್ಪಷ್ಟನೆ ಕೊಡಬೇಕಿತ್ತು, ಆದರೆ ಎಲ್ಲಾ ದೇಶಗಳ ಪ್ರತಿಕ್ರಿಯೆ ಬಂದ ಬಳಿಕ ಈಗ ಆ ಹೇಳಿಕೆಯಿಂದ ನಾವು ದೂರ ಇದ್ದೇವೆ ಎನ್ನುತ್ತಾರೆ. ಇವತ್ತು ಭಾರತ ಹರಾಜು ಹಾಕುವ ಸ್ಥಿತಿಗೆ ಬಂದಿದೆ. ಹೋರದೇಶದಿಂದ ಥ್ರೆಟೆನಿಂಗ್ ಬರುತ್ತಿದೆ. ಅಲ್‌ಖೈದಾದವರು ನಾವು ಬೊಂಬೆಯಲ್ಲಿ ಮತ್ತೆ ನಮ್ಮ ಚಟುವಟಿಕೆ ಶುರು ಮಾಡುತ್ತೇವೆ ಎಂಬ ಹಂತಕ್ಕೆ ತಲುಪಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರವಾದ ಕಾರಣ, ಬಿಜೆಪಿ ಸರ್ಕಾರದ ನಮ್ಮ ದೇಶವನ್ನು ಪ್ರತಿನಿಧಿಸುತ್ತಿದೆ, ಹಾಗಾಗಿ ಬಿಜೆಪಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.