ರಸ್ತೆಯಲ್ಲಿ ಹೋಗುವಾಗ ಹರತೆ ಹೊಡೆಯುತ್ತಿದ್ದ ರೈತರನ್ನು ಕಂಡು ತಾವೂ ಅವರ ಜೊತೆ ಹರತೆ ಹೊಡೆದು ರಾಜಕಾರಣಕ್ಕೂ ಸೈ, ಉಳುಮೆಗೂ ಸೈ ಎನ್ನುವ ಕಾಯಕವನ್ನು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.27): ರಸ್ತೆಯಲ್ಲಿ ಹೋಗುವಾಗ ಹರತೆ ಹೊಡೆಯುತ್ತಿದ್ದ ರೈತರನ್ನು ಕಂಡು ತಾವೂ ಅವರ ಜೊತೆ ಹರತೆ ಹೊಡೆದು ರಾಜಕಾರಣಕ್ಕೂ ಸೈ, ಉಳುಮೆಗೂ ಸೈ ಎನ್ನುವ ಕಾಯಕವನ್ನು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಡಿದ್ದಾರೆ. ಶಾಸಕ ಸಿ.ಟಿ ರವಿ ರೈತರೊಂದಿಗೆ ಗದ್ದೆಯಲ್ಲಿ ಉಳುವೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
undefined
ಸಿ.ಟಿ ರವಿ ರಾಜಕಾರಣಕ್ಕೂ ಸೈ, ಉಳುಮೆಗೂ ಸೈ: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೇ ತಿಂಗಳು ಜುಲೈ 26ರಂದು ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಗ್ರಾಮಾಂತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಕ್ಷೇತ್ರದ ವಿವಿಧ ಅಭಿವೃಧ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ದೇವನೂರು ಕೆರೆಗೆ ನೀರು ಹರಿಯುವ ಕಾಲುವೆ ವೀಕ್ಷಣೆ ಮುಗಿಸಿ ಹಿಂದಿರುಗುವ ಮಾರ್ಗ ಮಧ್ಯದಲ್ಲಿ ನೀರುಗುಂಡಿ ಬಳಿ ಮೆಕ್ಕೆಜೋಳಕ್ಕೆ ಎಡೆಕುಂಟೆ ಹರತೆ ಹೊಡೆಯುತ್ತಿದ್ದ ರೈತರನ್ನು ಕಂಡು ತಾವೂ ಅವರ ಜೊತೆ ಉಳುಮೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಅಪ್ಪನಾಣೆ ಸಿಎಂ ಆಗುವುದಿಲ್ಲ : ಸಿ.ಟಿ. ರವಿ
ಶಾಸಕರು ಕಾರು ನಿಲ್ಲಿಸಿದ್ದನ್ನು ಕಂಡ ಕಾರ್ಯಕರ್ತರು ರೈತರನ್ನು ಮಾತನಾಡಿಸಲು ನಿಂತಿರಬಹುದು ಎಂದುಕೊಂಡಿದ್ದರು. ಆದರೆ ಹೊಲಕ್ಕೆ ಬಂದ ಶಾಸಕರು ರೈತನ ಕೈಯಿಂದ ಕುಂಟೆ ಕೇಳಿ ಪಡೆದು ನಾನೂ ಹರತೆ ಹೊಡೆಯುವುದಾಗಿ ತಿಳಿಸಿದರು. ಶಾಸಕ ಸಿ.ಟಿ ರವಿ ರೈತರೊಂದಿಗೆ ಗದ್ದೆಯಲ್ಲಿ ಉಳುವೆ ಮಾಡುವ ಮೂಲಕ ತಮ್ಮ ಹೇಳ ದಿನಗಳನ್ನು ರೈತರೊಂದಿಗೆ ಮೆಲುಕು ಹಾಕುವ ಪ್ರಯತ್ನವನ್ನು ಮಾಡಿದರು. 15 ನಿಮಿಷಗಳ ಕಾಲ ಮೆಕ್ಕಜೋಳದ ಹೊಲದಲ್ಲಿ ಉಳುವೆ ಮಾಡಿ ರಾಜಕಾರಣಕ್ಕೂ ಸೈ, ಉಳುಮೆಗೂ ಸೈ ಎನ್ನಿಸಿಕೊಂಡರು.
ಚಿಕ್ಕಮಗಳೂರಿನಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯ್ ದಿವಸ್ ಅರ್ಥಪೂರ್ಣ ಆಚರಣೆ
ಸಿ.ಟಿ ರವಿ ಹೊಲದಲ್ಲಿ ಉಳುವೆ ಮಾಡುವ ವಿಡಿಯೋ ಸಾಮಾಜಿಕ ಜಾಲದಲ್ಲಿ ಸಖತ್ ವೈರಲ್ ಆಗಿದೆ. ಮಣ್ಣಿನ ಮಕ್ಕಳು ಯಾವ ಕೆಲಸವನ್ನಾದರೂ ಮಾಡುತ್ತಾರೆನ್ನುವುದನ್ನು ಶಾಸಕ ಸಿ.ಟಿ ರವಿ ರೈತರಿಗೆ ತಿಳಿಸಿದರು. ಈ ವೇಳೆ ಕಾರ್ಯಕರ್ತರೂ ಸಹ ಶಾಸಕರ ಜೊತೆ ಹೆಜ್ಜೆ ಹಾಕಿದರು. ಮಣ್ಣಿನ ಮಕ್ಕಳಾದ ನಾವುಗಳು ಯಾವ ಕೆಲಸವಾದರೂ ಸರಿ ಅದನ್ನ ಮಾಡಲು ಸಿದ್ಧವಿರಬೇಕು ಎಂಬುದನ್ನು ಜೊತೆಗಿದ್ದ ಕಾರ್ಯಕರ್ತರಿಗೆ ತಿಳಿಸಿದರು. ಅಲ್ಲದೆ ಇತ್ತೀಚೆಗೆ ಚಿಕ್ಕಮಗಳೂರಿನ ಫಾರಂ ಹೌಸ್‌ನಲ್ಲಿ ಸಿ.ಟಿ ರವಿ ಟ್ರಾಕ್ಟರ್‌ನಲ್ಲಿ ಹೊಲವನ್ನು ಉಳುಮೆ ಮಾಡಿದ್ದರು.