Union Budget: ಕೇಂದ್ರದಿಂದ ದೂರಗಾಮಿ ಬಜೆಟ್: ತೇಜಸ್ವಿ ಸೂರ್ಯ

Kannadaprabha News   | Asianet News
Published : Feb 20, 2022, 05:47 AM ISTUpdated : Feb 20, 2022, 05:49 AM IST
Union Budget: ಕೇಂದ್ರದಿಂದ ದೂರಗಾಮಿ ಬಜೆಟ್: ತೇಜಸ್ವಿ ಸೂರ್ಯ

ಸಾರಾಂಶ

*  ಕೃಷಿ, ವಿಜ್ಞಾನ, ನಗರೀಕರಣ, ರೈಲ್ವೆ ಆಧುನೀಕರಣಕ್ಕೆ ಅನುದಾನ *  ನರೇಂದ್ರ ಮೋದಿಯವರ ಆಗಮನದ ಬಳಿಕ ದೇಶದಲ್ಲಿ ಸ್ಟಾರ್ಟ್‌ಪ್‌ ಹೆಚ್ಚಳ *  ಮೂಲಭೂತ ಸೌಕರ್ಯಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ಕೋಟಿ ರು. ಸಾಲ  

ಬೆಂಗಳೂರು(ಫೆ.20):  ಈ ಬಾರಿ ಕೇಂದ್ರ ಸರ್ಕಾರ(Central Government) ಮಂಡಿಸಿರುವ ಬಜೆಟ್‌ ಯಶಸ್ವಿ ಹಾಗೂ ದೂರಗಾಮಿ ಬಜೆಟ್ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ(Tejasvi Surya) ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಯಿಂದ ವಿಜ್ಞಾನ, ನಗರೀಕರಣದಿಂದ ರೈಲ್ವೆ ಆಧುನೀಕರಣದವರೆಗೆ ಅನುದಾನ ಕೊಡಲಾಗಿದೆ. ಸಣ್ಣ ವ್ಯಾಪಾರಿಗಳಿಗೂ ಪ್ರೋತ್ಸಾಹ, ಯುವಕರಿಗೂ ಉದ್ಯೋಗಾವಕಾಶ, ಎಂಎಸ್ಎಂಇಗೆ ಉತ್ತೇಜನ ನೀಡುವುದರೊಂದಿಗೆ ಸರ್ವಸ್ಪರ್ಶಿ ಹಾಗೂ ಸರ್ವವ್ಯಾಪಿ ಬಜೆಟ್(Budget) ಇದಾಗಿದೆ ಎಂದರು.

ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಶೇ.50ರಿಂದ ಶೇ.70ರಷ್ಟು ಕಡಿಮೆ ದರದಲ್ಲಿ ಔಷಧಿ(Medicine) ಲಭ್ಯವಿದೆ. ದೇಶದಲ್ಲಿ 8,600 ಜನೌಷಧಿ ಕೇಂದ್ರಗಳಿವೆ. ಈ ಪೈಕಿ ಕಳೆದೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ(Bengaluru) 40 ಹೊಸ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಈಗ 69 ಕೇಂದ್ರಗಳಿದ್ದು, ಶೀಘ್ರವೇ ಅದು 75ಕ್ಕೇರಲಿದೆ. ಇನ್ನು ಕಳೆದೊಂದು ವರ್ಷದಲ್ಲಿ ಭವಿಷ್ಯ ನಿಧಿ ಸಂಸ್ಥೆಗೆ 14 ಲಕ್ಷ ಹೊಸ ಚಂದಾದಾರರು ಸೇರಿದ್ದಾರೆ. ಈ ಪೈಕಿ 18ರಿಂದ 25 ವರ್ಷ ವಯೋಮಾನದವರು ಶೇ.50ರಷ್ಟಿದ್ದಾರೆ. ಕರ್ನಾಟಕದಲ್ಲಿ(Karnataka) 1.60 ಲಕ್ಷ ಚಂದಾದಾರರು ಭವಿಷ್ಯ ನಿಧಿ ಸಂಸ್ಥೆಗೆ ಸೇರಿದ್ದಾರೆ ಎಂದು ಹೇಳಿದರು.

Controversial Speech:'ತೇಜಸ್ವಿ ಸೂರ್ಯಗೆ ಈ 5 ಪದಗಳನ್ನು ಬಿಟ್ರೆ ಬೇರೇನೂ ಗೊತ್ತಿಲ್ಲ'

ಕರ್ನಾಟಕದಲ್ಲಿ ಮೂಲಭೂತ ಸೌಕರ್ಯಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ಕೋಟಿ ರು. ಸಾಲ(Loan) ಪಡೆಯಬಹುದು. ಇದು ದೇಶದ ಆರ್ಥಿಕತೆ ವೇಗವಾಗಿ ಮುಂದುವರಿಯಲು ಪೂರಕವಾಗಿದೆ. ಹಣದುಬ್ಬರ ಹತೋಟಿಯಲ್ಲಿದೆ. ಯುವಕರಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ. 25 ವರ್ಷಗಳ ದೂರದೃಷ್ಟಿ ಹೊಂದಿದ ಕೇಂದ್ರ ಬಜೆಟ್ಇದಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ನರೇಂದ್ರ ಮೋದಿಯವರ(Narendra Modi) ಆಗಮನದ ಬಳಿಕ ದೇಶದಲ್ಲಿ ಸ್ಟಾರ್ಟ್‌ಪ್‌ ಹೆಚ್ಚಾಗಿದ್ದು, ದೇಶದಲ್ಲಿ 61 ಸಾವಿರ ಸ್ಟಾರ್ಟ್ಅಪ್‌ಗಳು ಆರಂಭವಾಗಿವೆ. ಬೆಂಗಳೂರಿನಲ್ಲಿ 24 ಸಾವಿರ ಸ್ಟಾರ್ಟ್‌ಪ್‌ಗಳಿದ್ದು, ಸ್ಟಾರ್ಟ್‌ ಕ್ಯಾಪಿಟಲ್‌  ಆಗಿದೆ. 85 ಕಂಪೆನಿಗಳು ಯುನಿಕಾರ್ನ್‌ಗಳಾಗಿವೆ. ಇವು ಮಲ್ಟಿನ್ಯಾಷನಲ್‌ ಕಂಪೆನಿ ಆಗಿ ಬೆಳೆಯುವ ನಿರೀಕ್ಷೆ ಇದೆ. ಇದು ಭಾರತದ ಬೆಳೆಯುತ್ತಿರುವ ಆರ್ಥಿಕತೆಯ ಸಂಕೇತ ಎಂದು ವಿಶ್ಲೇಷಿಸಿದರು.

ದೇಶದ ಆರ್ಥಿಕತೆಯ ದೃಷ್ಟಿಯಿಂದ ನೋಡಿದರೆ ಬೆಂಗಳೂರು ಸೇರಿದಂತೆ ಕರ್ನಾಟಕ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಹೆಚ್ಚಿನ ಪ್ರಗತಿ ಕಾಣಿಸುತ್ತಿದೆ. ದೇಶದ ಹಿಂದಿನ ಆಡಳಿತಾವಧಿಯಲ್ಲಿ ಹಣದುಬ್ಬರ ತೀವ್ರವಾಗಿತ್ತು. ಇಂದು ಡಿಜಿಟಲ್‌ ಪೇಮೆಂಟ್‌ ನೆಟ್‌ವರ್ಕ್‌ ವ್ಯಾಪಕವಾಗಿ ಬಳಕೆಯಾಗುತ್ತಿದೆ. ವಿಮಾನ, ರೈಲ್ವೆ ಸಂಪರ್ಕವೂ ಹೆಚ್ಚಾಗಿದೆ. ಇದು ಅಭಿವೃದ್ಧಿಯ ಸಂಕೇತ. ಬೆಂಗಳೂರಿನ ಮೆಟ್ರೊ(Bengaluru Metro) ಯೋಜನೆ ವಿಸ್ತರಣೆ ಕೆಲಸ ವೇಗವಾಗಿ ನಡೆದಿದೆ. ಸಬ್ಅರ್ಬನ್‌ ಯೋಜನೆಯೂ ತ್ವರಿತವಾಗಿ ಮಂಜೂರಾಗಿದೆ. ಗೇಲ್ವತಿಯಿಂದ ಮನೆಮನೆಗೆ ಗ್ಯಾಸ್‌ ಸಂಪರ್ಕ ಕೊಡಲಾಗುತ್ತಿದೆ ಎಂದು ವಿವರಿಸಿದರು.

Ghar Wapsi:ವಿವಾದದ ಕಿಚ್ಚಿ ಹೆಚ್ಚಾಗುತ್ತಿದ್ದಂತೆಯೇ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

ತೇಜಸ್ವಿ ಸೂರ್ಯ ಬುರುಡೇಲಿ ಮೆದುಳೇ ಇಲ್ಲವೆಂದ ನಟಿ ರಮ್ಯಾ

ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಸ್ಯಾಂಡಲ್‌ವುಡ್ ಕ್ವೀನ್, ಮೋಹಕ ತಾರೆಯಾಗಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ನಟಿ ರಮ್ಯಾ (Ramya) ಅವರು ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಸಖತ್ ಆಕ್ಟೀವ್ ಆಗಿದ್ದು, ತಮ್ಮ ದಿನಚರಿ ವಿಷಯಗಳ ಬಗ್ಗೆ ಮಾಹಿತಿಯನ್ನು ಅಭಿಮಾನಿಗಳ ಜತೆ  ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ  'ಆ ದಿನಗಳು' ಖ್ಯಾತಿಯ ನಟ ಚೇತನ್ ಕುಮಾರ್ (Chetan Kumar)​​ ಅವರ ಹೊಸ ಸಿನಿಮಾ '100 ಕ್ರೋರ್ಸ್' (100 Crores Movie) ಚಿತ್ರದ  ಟೀಸರ್ ಲಾಂಚ್ ಮಾಡಿದ್ದರು. ಇದೀಗ ರಮ್ಯಾ ಅವರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಬುರುಡೇಲಿ ಮೆದುಳೇ ಇಲ್ಲವೆಂದು ಹೇಳಿದ್ದಾರೆ.

ಹೌದು! ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ, ಮುಸ್ಲಿಮರನ್ನು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ  ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಗೆ ನಟಿ ರಮ್ಯಾ ತಮ್ಮದೇ ಶೈಲಿಯಲ್ಲಿ ಇನ್‌ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ, ತೇಜಸ್ವಿ ಸೂರ್ಯ ಅವರು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಭಾಷಣ ಮಾಡುತ್ತಿರುವ ವಿಡಿಯೋದ ಝಲಕ್‌ನ್ನು ಹಂಚಿಕೊಂಡು ಅವರ ತಲೆಯಲ್ಲಿ ಮೆದುಳೇ ಇಲ್ಲವೆಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Sociaal Media) ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. 
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ