ಕೊರೋನಾ ಟೈಮ್‌ನಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಂಗಣ್ಣ ಕರಡಿ

By Kannadaprabha News  |  First Published May 30, 2021, 11:07 AM IST

* ಇಂತಹ ವೇಳೆಯಲ್ಲಿ ರಾಜಕೀಯ ಸರಿಯಲ್ಲ
* ಕೊರೋನಾ ನಿಯಂತ್ರಣ ಮಾಡುವುದು ಸರ್ಕಾರ ಮತ್ತು ಜನಪ್ರತಿನಿಧಿ ತುರ್ತು ಕಾರ್ಯ
* ಯಾರೋ ದೆಹಲಿಗೆ ಹೋಗಿ ನಾಯಕತ್ವ ಬದಲಾವಣೆ ಮಾಡುತ್ತಾರೆ ಎನ್ನುವುದು ಹಾಸ್ಯಾಸ್ಪದ


ಕೊಪ್ಪಳ(ಮೇ.30): ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ರುದ್ರನರ್ತನ ನಿಯಂತ್ರಣ ಮಾಡಿ, ಜನರ ಸಂಕಷ್ಟ ನಿವಾರಣೆ ಮಾಡುವ ಈ ಸಮಯದಲ್ಲಿ ಯ ಪ್ರಶ್ನೆಯೇ ಏಳಬಾರದು. ಹೀಗಾಗಿ, ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ನಿಯಂತ್ರಣ ಮಾಡುವುದು ಸರ್ಕಾರ ಮತ್ತು ಜನಪ್ರತಿನಿಧಿ ತುರ್ತು ಕಾರ್ಯವಾಗಿದೆ. ಇಂಥ ವೇಳೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಆಂತರಿಕ ಭಿನ್ನಾಭಿಪ್ರಾಯಗಳು ಇದ್ದರೆ ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕು. ಯಾರೋ ದೆಹಲಿಗೆ ಹೋಗಿ ನಾಯಕತ್ವ ಬದಲಾವಣೆ ಮಾಡುತ್ತಾರೆ ಎನ್ನುವುದು ಹಾಸ್ಯಾಸ್ಪದ. ಸೋತವರನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡಿದ್ದಾರೆ. ಆದರೂ ಇನ್ನಿಲ್ಲದ ಹೇಳಿಕೆ ನೀಡುವುದು ಯಾಕೆ ಎಂದು ಯೋಗೇಶ್ವರ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದರು.

Tap to resize

Latest Videos

ಕೊಪ್ಪಳ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ..!

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸ್ಮರಿಸಬೇಕು. ಅವರ ಬಗ್ಗೆ ಅಭಿಮಾನವಿಟ್ಟುಕೊಳ್ಳಬೇಕಾದವರೆ ಹೀಗೆ ಮಾತನಾಡಿದರೆ ಏನರ್ಥ ಎಂದು ಪ್ರಶ್ನೆ ಮಾಡಿದರು. ಸಮಸ್ಯೆ ಇದ್ದರೆ ತಾವೇ ಖುದ್ದು ಭೇಟಿಯಾಗಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದರು.
 

click me!