ವೇದಿಕೆಯಲ್ಲೇ ಉರುಳಿದ ಲೈಟಿಂಗ್ ಟ್ರಸ್: ಅಪಾಯದಿಂದ ಪಾರಾದ ಸಂಸದ ಈರಣ್ಣಾ ಕಡಾಡಿ

By Girish Goudar  |  First Published May 13, 2022, 11:51 AM IST

*  ರಾಜಾಪುರ ಗ್ರಾಮದ ಚೂನಮ್ಮದೇವಿ ಜಾತ್ರೆ ವೇಳೆ ರಸಮಂಜರಿ ಕಾರ್ಯಕ್ರಮ
*  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ
*  ಇಬ್ಬರಿಗೆ ಸಣ್ಣಪುಟ್ಟ ಗಾಯ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ
 


ಬೆಳಗಾವಿ(ಮೇ.13):  ಬೆಳಗಾವಿ(Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಚೂನಮ್ಮದೇವಿ ಜಾತ್ರೆ ನಡೆಯುತ್ತಿದ್ದು, ಕಳೆದ ರಾತ್ರಿ ಜಾತ್ರೆಯ(Fair) ನಿಮಿತ್ತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆಗೆ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ(Iranna Kadadi) ಸೇರಿ ಹಲವರು ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ಘಾಟನೆ ವೇಳೆಯೇ ನೋಡನೋಡುತ್ತಿದ್ದಂತೆ ರಸಮಂಜರಿ ಕಾರ್ಯಕ್ರಮಕ್ಕಾಗಿ ಅಳವಡಿಸಿದ್ದ ಲೈಟಿಂಗ್ ಟ್ರಸ್(Lighting Truss) ಉರುಳಿಬಿದ್ದಿದೆ.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸೇರಿ 20 ಗಣ್ಯರು ಕುಳಿತಿದ್ದ ವೇದಿಕೆಯ ಮೇಲೆ ಲೈಟಿಂಗ್ ಟ್ರಸ್ ಉರುಳಿಬಿದ್ದಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಈರಣ್ಣಾ ಕಡಾಡಿ ಅವಘಡದಿಂದ ಪಾರಾಗಿದ್ದಾರೆ‌. ಗ್ರಾಮದ ಹೊರವಲಯದ ಜಮೀನಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದರಿಂದ ವೇದಿಕೆಯ ಪಕ್ಕದಲ್ಲಿ ಅಳವಡಿಸಿದ್ದ ಲೈಟಿಂಗ್ ಟ್ರಸ್ ಕಂಬ ಉರುಳಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.

Tap to resize

Latest Videos

ರಮ್ಯಾ ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಲಿ ಎಂದ MLC ಚನ್ನರಾಜ ಹಟ್ಟಿಹೊಳಿ

ದೇವಿಯ ಆಶೀರ್ವಾದದಿಂದ ನಾವೆಲ್ಲಾ ಪಾರಾಗಿದ್ದೇವೆ ಎಂದ ಕಡಾಡಿ

ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ನಿನ್ನೆ(ಗುರುವಾರ) ರಾತ್ರಿ ರಾಜಾಪುರ ಗ್ರಾಮದ ಚೂನಮ್ಮದೇವಿ ಜಾತ್ರೆಯ(Chunammadevi Fair) ಸಂದರ್ಭದಲ್ಲಿ, 'ಲೈಟಿಂಗ್ ಸಿಸ್ಟಮ್‌ಗೆ(Lighting System) ಅಳವಡಿಸಿದ್ದ ಕಂಬ ವೇದಿಕೆ ಮೇಲೆ ಉರುಳಿ ಆಕಸ್ಮಿಕ ಅವಘಡ ಸಂಭವಿಸಿತು. ಇಬ್ಬರು ಮೂವರಿಗೆ ಗಾಯ ಆಗಿದ್ದು ನಾವೆಲ್ಲರೂ ಬಚಾವ್ ಆಗಿದ್ದೇವೆ. ಗ್ರಾಮದ ಜಮೀನಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ಅವಘಡ ಸಂಭವಿಸಿದೆ. ಸ್ವಲ್ಪ ಆಯತಪ್ಪಿದ್ರೂ ವೇದಿಕೆ ಮೇಲಿದ್ದ ಗಣ್ಯರ ಪ್ರಾಣ ಹಾನಿ ಆಗುತ್ತಿತ್ತು. ವಿದ್ಯುತ್ ಅವಘಡ ಕೂಡ ಸಂಭವಿಸುವ ಸಾಧ್ಯತೆ ಇತ್ತು. ಚೂನಮ್ಮದೇವಿಯ ಆಶೀರ್ವಾದದಿಂದ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ' ಎಂದು ತಿಳಿಸಿದ್ದಾರೆ.
 

click me!