ಶಿಗ್ಗಾಂವಿ: ತಾವೇ ಮಂಜೂರು ಮಾಡಿದ್ದ ಮನೆ ಗೃಹ ಪ್ರವೇಶಕ್ಕೆ ಬೊಮ್ಮಾಯಿ

By Kannadaprabha News  |  First Published Nov 9, 2024, 7:41 AM IST

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಮಲ್ಲೇಶಪ್ಪಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ನೀಡಿದ್ದರು. ಶುಕ್ರವಾರ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.

BJP MP Basavaraj Bommai Attend Home Opening the which he had sanction at Shiggaon in Haveri grg

ಹಾವೇರಿ(ಶಿಗ್ಗಾಂವಿ)(ನ.09): ಶಿಗ್ಗಾಂವಿ ಕ್ಷೇತ್ರದ ತಿಮ್ಮಾಪುರ ಗ್ರಾಮದಲ್ಲಿ ಪ್ರವಾಹ ಬಂದಾಗ ಮನೆ ಬಿದ್ದು, ಬಳಿಕ ₹5 ಲಕ್ಷ ಮೊತ್ತದಲ್ಲಿ ಮನೆ ನಿರ್ಮಿಸಿಕೊಂಡಿರುವ ಮಲ್ಲೇಶಪ್ಪ ದುರಪ್ಪನವರ ಅವರ ನೂತನ ಮನೆಗೆ ಸಂಸದ ಬಸವರಾಜ ಬೊಮ್ಮಾಯಿ ಶುಕ್ರವಾರ ಭೇಟಿ ನೀಡಿದರು. 

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಮಲ್ಲೇಶಪ್ಪಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ನೀಡಿದ್ದರು. ಶುಕ್ರವಾರ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.

Tap to resize

Latest Videos

ಜೆಡಿಎಸ್‌ಗೆ ಕೈಕೊಟ್ಟು ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಶಕುನಿ: ಬಸವರಾಜ ಬೊಮ್ಮಾಯಿ

ಒಂದೂ ಮನೆ ಕಟ್ಟಿಲ್ಲ ಎನ್ನುವವರಿಗೆ ನೂತನ ಮನೆ ಸಾಕ್ಷಿ: ಸಂಸದ

ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ತಿಮ್ಮಾಪುರ ಗ್ರಾಮದ ಮಲ್ಲೇಶಪ್ಪ ದುರಪ್ಪನವರ ಅವರ ಮನೆ ಪ್ರವಾಹದಲ್ಲಿ ಬಿದ್ದಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ, ಮನೆ ಕಟ್ಟಿಕೊಳ್ಳಲು ಐದು ಲಕ್ಷ ರು.ಮಂಜೂರು ಮಾಡಿದ್ದೆ. ಅವರ ಸತತ ಪರಿಶ್ರಮದ ಫಲ ಸುಂದರ ಮನೆ ಕಟ್ಟಿಕೊಂಡಿದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಇವತ್ತು ಅವರು ಮನೆಯ ಗೃಹಪ್ರವೇಶ ಕಾರ್ಯಕ್ರಮ ಮಾಡಿದ್ದಾರೆ. ನನಗೂ ಆಹ್ವಾನ ನೀಡಿದ್ದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಈ ರೀತಿ ಸಾವಿರಾರು ಮನೆ ನಿರ್ಮಾಣ ಮಾಡಿದ್ದೇವೆ. ಒಂದೂ ಮನೆ ಕಟ್ಟಿಲ್ಲ ಎಂದು ಆರೋಪ ಮಾಡುವವರು ಹೇಳುತ್ತಿರುವುದು ಸುಳ್ಳು ಎನ್ನುವುದಕ್ಕೆ ಈ ಮನೆ ಸಾಕ್ಷಿ ಎಂದು ಹೇಳಿದರು.

vuukle one pixel image
click me!
vuukle one pixel image vuukle one pixel image