ಹಿಂದುಳಿದ ಗಂಗಾಮತ ಸಮಾಜ ಎಸ್ಟಿಗೆ ಸೇರಿಸಿ: ವಿಧಾನಪರಿಷತ್‌ ಸದಸ್ಯ ರವಿಕುಮಾರ್

Published : Jan 16, 2023, 09:41 PM ISTUpdated : Jan 16, 2023, 09:43 PM IST
ಹಿಂದುಳಿದ ಗಂಗಾಮತ ಸಮಾಜ ಎಸ್ಟಿಗೆ ಸೇರಿಸಿ: ವಿಧಾನಪರಿಷತ್‌ ಸದಸ್ಯ ರವಿಕುಮಾರ್

ಸಾರಾಂಶ

ನಮ್ಮ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ನಮ್ಮ ಸಮಾಜವನ್ನು ಎಸ್‌ಟಿ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು ಹಾಗೂ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂದು ವಿಪ ಸದಸ್ಯ ಎನ್‌.ರವಿಕುಮಾರ್ ಹೇಳಿದರು. 

ಗುತ್ತಲ (ಜ.16): ನಮ್ಮ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ನಮ್ಮ ಸಮಾಜವನ್ನು ಎಸ್‌ಟಿ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು ಹಾಗೂ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂದು ವಿಪ ಸದಸ್ಯ ಎನ್‌. ರವಿಕುಮಾರ್ ಹೇಳಿದರು. ನರಸೀಪುರದಲ್ಲಿರುವ ಅಂಬಿಗರ ಚೌಡಯ್ಯನವರ ಪೀಠದಲ್ಲಿ ಭಾನುವಾರ ಜರುಗಿದ ಅಂಬಿಗರ ಚೌಡಯ್ಯನವರ 903ನೇ ಜಯಂತ್ಯುತ್ಸವ, 5ನೇ ಶರಣ ಸಂಸ್ಕೃತಿ ಉತ್ಸವ, ಲಿಂ. ಶ್ರೀ ಶಾಂತಮುನಿಗಳ 7ನೇ ಸ್ಮರಣೋತ್ಸವ, ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯ 7ನೇ ಪೀಠಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿನ ಮದ್ಯವ್ಯಸನಿಗಳು ಅದರಿಂದ ಮುಕ್ತರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು. ಅಂಬಿಗರ ಚೌಡಯ್ಯ ಪೀಠದ ಪೀಠಾಧಿಪತಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಅಂಬಿಗ ಸಮಾಜ ಶಾಂತ ಸ್ವಭಾವದ ಸಮಾಜವಾಗಿದ್ದು, ನಂಬಿಕಸ್ಥರ ಸಮಾಜವಾಗಿದೆ. ಇತರ ಸಮಾಜಗಳಂತೆ ಹೋರಾಟ, ಪ್ರತಿಭಟನೆ, ಮುತ್ತಿಗೆಗೆ ಮುಂದಾಗುವುದಿಲ್ಲ. ಮುಖ್ಯಮಂತ್ರಿ ಮೇಲೆ ಭರವಸೆ ಹೊಂದಿದ್ದೇವೆ. ನಮ್ಮ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಹಿನ್ನೆಲೆಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ಈಗಾಗಲೇ ಆಗಿದೆ. 

ರಾಮಕೃಷ್ಣ ಹೆಗಡೆ ಮಾರ್ಗದಲ್ಲಿ ಸ್ಪೀಕರ್‌ ಕಾಗೇರಿ: ಪ್ರಹ್ಲಾದ್‌ ಜೋಶಿ

ಆದಷ್ಟು ಬೇಗ ಸಮಾಜವನ್ನು ಎಸ್ಟಿಗೆ ಸೇರಿಸುವ ನಿಟ್ಟಿನಲ್ಲಿ ನಮ್ಮ ಜಿಲ್ಲೆಯವರೆ ಆದ ಮುಖ್ಯಮಂತ್ರಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ರಾಜಕೀಯದಲ್ಲಿ ಅಂಬಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಹಾಗೂ ಅಂಬಿಗರ ಚೌಡಯ್ಯನವರ ಪೀಠದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ಶಿರಹಟ್ಟಿ ಫಕೀರೇಶ್ವರ ಮಠದ ಫಕೀರದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಗಂಗಾಮತ ಸಮಾಜ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಚೌಡಯ್ಯನವರ ಪೀಠದೊಂದಿಗೆ ಹಲವು ವರ್ಷಗಳ ಸುದೀರ್ಘ ಸಂಬಂಧವನ್ನು ನಾವು ಹೊಂದಿದ್ದು, ಮುಂದೆಯೂ ಜತೆಗೆ ಇರುತ್ತೇವೆ. 

18 ಪುರಾಣಗಳನ್ನು ಬರೆದಿರುವ ವ್ಯಾಸರು ಈ ಸಮಾಜದವರು. ಯಾವುದೇ ದೊಡ್ಡ ಸಮಾಜಕ್ಕಿಂತ ಗಂಗಾಮತ ಸಮಾಜ ಸಣ್ಣದಲ್ಲ. ಅನೇಕ ಮಹನೀಯರನ್ನು ನೀಡಿದ ಸಮಾಜವಾಗಿದೆ. ಸಮಾಜದ ಪ್ರತಿಯೊಬ್ಬರೂ ಅಂಬಿಗರ ಚೌಡಯ್ಯನವರ ವಚನಗಳ ಮಹತ್ವವನ್ನು ತಿಳಿಯಬೇಕು ಎಂದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೋಣಿಯಲ್ಲಿ ನಿಂತ ಹರಿಗೋಲು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆನಂತರ ವ್ಯಾಸ ಮಹರ್ಷಿ, ಗಂಗಾ ಮಾತೆ, ಲಿಂ. ಶಾಂತಮುನಿ ಸ್ವಾಮೀಜಿ ಹಾಗೂ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ಶಾಸಕ ಶ್ರೀನಿವಾಸ ಮಾನೆ, ಸಿಂದಗಿ ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿ, ಬಸವ ಬೆಳವಿ ಚರಂತೇಶ್ವರ ಮಠದ ಶರಣಬಸವ ದೇವರು ಮಾತನಾಡಿದರು.

ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿಗೆ ಶಾಸಕನಾಗಿ ದುಡಿದಿದ್ದೇನೆ: ಟಿ.ಡಿ.ರಾಜೇಗೌಡ

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಬಿ.ಸಿ. ಪಾಟೀಲ್‌, ಶಾಸಕರಾದ ನೆಹರೂ ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಲಾಲಾಜಿ ಮೆಂಡನ್‌, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಬಿ.ಪಿ. ಹರೀಶ, ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಕಾಂಗ್ರೆಸ್‌ ಮುಖಂಡ ಪ್ರಕಾಶ ಕೋಳಿವಾಡ, ಚರ್ಮ ನಿಗಮದ ಉಪಾಧ್ಯಕ್ಷ ಡಿ.ಎಸ್‌. ಮಾಳಗಿ, ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಜಿಪಂ ಮಾಜಿ ಸದಸ್ಯ ಸಿದ್ಧರಾಜ ಕಲಕೋಟಿ ಸೇರಿದಂತೆ ಅನೇಕರಿದ್ದರು.

PREV
Read more Articles on
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?