'ಯಡಿಯೂರಪ್ಪ ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರಿಗೆ ವರ'

By Kannadaprabha NewsFirst Published May 20, 2021, 1:10 PM IST
Highlights

* ಕೋವಿಡ್‌ ಸೆಂಟರ್‌ನಲ್ಲಿನ ಸೋಂಕಿತರಿಗೆ ಬೆಡ್‌ಶೀಟ್‌ ವಿತರಣೆ
* ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡುವ ಅಗತ್ಯ
* , ಬಿಜೆಪಿ ಯುವ ಮುಖಂಡರು ಸೋಂಕಿತರ ಮನವಿಗೆ ಸ್ಪಂದಿಸಿರುವ ಕಾರ್ಯ ಶ್ಲಾಘನೀಯ
 

ಬ್ಯಾಡಗಿ(ಮೇ.20): ಪಟ್ಟಣದಲ್ಲಿನ ಎರಡು ಕೋವಿಡ್‌ ಸೆಂಟರ್‌ನಲ್ಲಿನ ಸೋಂಕಿತರಿಗೆ ಬಿಜೆಪಿ ಯುವ ಮುಖಂಡರು ಬೆಡ್‌ಶೀಟ್‌ ಹಾಗೂ ಸೊಳ್ಳೆ ಪರದೆಗಳನ್ನು ವಿತರಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬೆಟ್ಟದ ಮಲ್ಲೇಶ್ವರ ನಗರದ ಹತ್ತಿರದಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎರಡು ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆದು ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಚಿತ್ಸೆ ನೀಡಲಾಗುತ್ತಿದೆ. ಸದರಿ ಕೊವಿಡ್‌ ಸೆಂಟರ್‌ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುವ ಕುರಿತಂತೆ ಸೋಂಕಿತರಿಂದ ಮಾಹಿತಿ ಲಭ್ಯವಾದ ಹಿನ್ನೆಲೆ ಮೋಟೆಬೆನ್ನೂರು ಬಿಜೆಪಿ ಯುವ ಮುಖಂಡ ವಿಜಯಭರತ್‌ ಬಳ್ಳಾರಿ ಹಾಗೂ ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಶಿವಯೋಗಿ ಶಿರೂರ, ವೈಯಕ್ತಿಕವಾಗಿ ಬೆಡ್‌ಶೀಟ್‌ ಹಾಗೂ ಗುಣಮಟ್ಟದ ಸೊಳ್ಳೆಪರದೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನ ವೈದ್ಯ ಡಾ. ಪುಟ್ಟರಾಜ ಅವರಿಗೆ ಹಸ್ತಾಂತರಿಸಿದರು.

"

ಬಡವರಿಗಾಗಿ ಪ್ಯಾಕೆಜ್‌:

ಬಳಿಕ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕೋವಿಡ್‌ ಹಿನ್ನೆಲೆ ಆರ್ಥಿಕ ಬಿಕ್ಕಟ್ಟಿನ ನಡುವೆ ಬಡವರು ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿದ್ದು, ಇದರಿಂದ ಸರ್ಕಾರ ಬಡವರ ಪರವಾಗಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

ಬ್ಯಾಡಗಿ: ಕಳಪೆ ಆಹಾರ ಪೂರೈಕೆ ಖಂಡಿಸಿ ಸೋಂಕಿತರ ಪ್ರತಿಭಟನೆ

ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡುವ ಅಗತ್ಯವಿದ್ದು, ಬಿಜೆಪಿ ಯುವ ಮುಖಂಡರು ಸೋಂಕಿತರ ಮನವಿಗೆ ಸ್ಪಂದಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಸುರೇಶ ಆಸಾದಿ, ಸುರೇಶ ಯತ್ನಳ್ಳಿ, ಅರುಣ ಪಾಟೀಲ, ಎಸ್‌.ಎನ್‌. ಬಟ್ಟಲಕಟ್ಟಿ, ಸುರೇಶ ಛಲವಾದಿ, ಎಂ.ಎಲ್‌. ಕಿರಣಕುಮಾರ, ಮಣ್ಣಪ ಹೊಸಗೌಡ್ರ, ಸಂಜೀವ ಮಡಿವಾಳರ, ಶಿವಯೋಗಿ ಗಡಾದ, ಜಿ.ಎಸ್‌. ಹೊನ್ನತ್ತಿಮಠ, ಆರೋಗ್ಯ ಇಲಾಖೆ ಎಂ.ಎನ್‌. ಕಂಬಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.    

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!