ಶಾಸಕ ರಾಜೂಗೌಡ ಡ್ಯಾನ್ಸ್‌ಗೆ ಅಶೋಕ್ ಫಿದಾ, ವೇದಿಕೆಗೆ ಹೋಗಿ ಸ್ಟೆಪ್ ಹಾಕಿದ ಸಚಿವ

Published : Mar 19, 2022, 09:44 PM ISTUpdated : Mar 19, 2022, 10:25 PM IST
ಶಾಸಕ ರಾಜೂಗೌಡ ಡ್ಯಾನ್ಸ್‌ಗೆ ಅಶೋಕ್ ಫಿದಾ, ವೇದಿಕೆಗೆ ಹೋಗಿ ಸ್ಟೆಪ್ ಹಾಕಿದ ಸಚಿವ

ಸಾರಾಂಶ

* ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶಾಸಕ ರಾಜೂಗೌಡ ಸಖತ್ ಡ್ಯಾನ್ಸ್ * ಶಾಸಕ ರಾಜೂಗೌಡ ಡ್ಯಾನ್ಸ್‌ಗೆ ಸಚಿವ ಆರ್.ಅಶೋಕ್ ಫಿದಾ * ಬಂಜಾರ ಹಾಡಿಗೆ ಸ್ಟೆಪ್ ಹಾಕಿದ ಸಚಿವ ಅಶೋಕ್ ಮತ್ತು ರಾಜೂಗೌಡ

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್,  ಯಾದಗಿರಿ


ಯಾದಗಿರಿ, (ಮಾ.19): ಕಂದಾಯ ಸಚಿವ ಆರ್.ಅಶೋಕ್ ಅವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಗ್ರಾಮ ವಾಸ್ತವ್ಯಕ್ಕು ಮುನ್ನ ಸಂಜೆಯ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವ ಆರ್.ಅಶೋಕ್ ಮತ್ತು ಶಾಸಕ ರಾಜೂಗೌಡ ವೀಕ್ಷಿಸುತ್ತಿದ್ದರು. ನಂತರ ಇಂದು (ಶನಿವಾರ) ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ರಾಜೂಗೌಡ ಡ್ಯಾನ್ಸ್ ಮಾಡಿದರು. 

ಬಂಜಾರ ಸಮುದಾಯದ ಪ್ರಮುಖ ಹಾಡಿಗೆ ಶಾಸಕ ರಾಜೂಗೌಡ ಡ್ಯಾನ್ಸ್ ಮಾಡಿ ಎಲ್ಲರನ್ನು ರಂಜಿಸಿದರು. ತಲೆಯ ಮೇಲೆ ಪೇಟ ಧರಿಸಿ, ಟೊಂಕಕ್ಕೆ ಶಾಲು ಕಟ್ಟಿಕೊಂಡು ಸಖತ್ ಸ್ಟೇಪ್ ಹಾಕಿ ಎಲ್ಲರ ಗಮನ ಸೆಳೆದರು. ಬಂಜಾರ ಸಮುದಾಯದ ಮಕ್ಕಳು ಡ್ಯಾನ್ಸ್ ಮಾಡುತ್ತಿದ್ದಾಗ , ನೋಡಿ ಕುಳಿತಿದ್ದಾಗ ಎದ್ದು ಹೋಗಿ ಮಕ್ಕಳೊಂದಿಗೆ ಮಕ್ಕಳಂತೆ ಡ್ಯಾನ್ಸ್ ಮಾಡಿದರು.

ರಾಜುಗೌಡ ಡ್ಯಾನ್ಸ್ ಗೆ ಸಚಿವ ಅಶೋಕ್ ಫಿದಾ

ಯೆಸ್‌..... ಶಾಸಕ ರಾಜೂಗೌಡ ಮಾಡಿದ ಬಂಜಾರ ಸಮುದಾಯದ ಅದ್ಭುತ ಡ್ಯಾನ್ಸ್ ಗೆ ಕಂದಾಯ ಸಚಿವ ಆರ್.ಅಶೋಕ್ ಫೀದಾ ಆದ್ರು, ಶಾಸಕ ರಾಜೂಗೌಡ ಅವರ ಸ್ಟೇಪ್ ಗೆ ಎದ್ದು ನಿಂತು ಚೆಪ್ಪಾಳೆ ತಟ್ಟಿದರು. ಅಲ್ಲದೇ ವೇದಿಕೆ ಮುಂದೆಯೇ ನಿಂತ ಕೈಕಾಲು ಶೇಕ್ ಮಾಡುತ್ತಾ ಎಂಜಾಯ್ ಮಾಡಿದ್ರು. ಇನ್ನು ಇದನ್ನು ನೋಡಿ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರು ಕಣ್ತಿಂಬಿಕೊಂಡು ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿದರು.

ಕಂದಾಯ ಸಚಿವ ಅಶೋಕ್ ಡ್ಯಾನ್ಸ್

ಶಾಸಕ ರಾಜೂಗೌಡ ಬಂಜಾರ ಸಮುದಾಯ ಹಾಡಿಗೆ ಫೀದಾ ಆಗಿದ್ದ ಸಚಿವ ಆರ್.ಅಶೋಕ್ ಅವರಿಗೆ ತಡೆದುಕೊಳ್ಳಲು ಆಗಿಲ್ಲ ಅನ್ನಿಸುತ್ತೆ. ರಾಜುಗೌಡ ನೃತ್ಯ ಮಾಡುವುದನ್ನು ನೋಡಿ  ಅಶೋಕ್ ಎದ್ದು ವೇದಿಕೆ ಮೇಲೆ ಹೋಗಿ ಬಂಜಾರ ಸಮಯದಾಯದ ಮಕ್ಕಳೊಂದಿಗೆ ಸ್ಟೇಪ್ ಹಾಕಿದರು.

ಗಂಡು ಕಲೆ ಡೊಳ್ಳು ಬಾರಿಸಿದ ಶಾಸಕ ರಾಜೂಗೌಡ
ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶಾಸಕ ರಾಜೂಗೌಡ ಶೈನಿಂಗ್ ಸ್ಟಾರ್ ಆಗಿದ್ರು, ಡೊಳ್ಳು ಬಾರಿಸುವ ಮೂಲಕ ಸಂತಸ ಪಟ್ಟರು.

PREV
Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ