* ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬಹುದಿನಗಳ ಕನಸು ಕೊನೆಗೂ ನನಸು
* ವಿವಾದಿತ ಕ್ಲಾಕ್ ಟವರ್ಗೆ ಬಣ್ಣ; ತ್ರಿವರ್ಣ ಧ್ವಜ ಹಾರಿಸಿದ ಜಿಲ್ಲಾಡಳಿತ
* ಕೋಲಾರದ ಕ್ಲಾಕ್ ಟವರ್ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಹೋರಾಟದ ಎಚ್ಚರಿಕೆ ನೀಡಿದ್ದ ಮುನಿಸ್ವಾಮಿ
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಕೋಲಾರ.
ಕೋಲಾರ, (ಮಾ.19): ಅದು ಸಮಯ ತಿಳಿಸುವ ಭವ್ಯ ಕಟ್ಟಡವಾದರೂ ಆ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಮಯ ಬಂದಿರಲಿಲ್ಲ, ಅದರೆ ಸಂಸದ ಮುನಿಸ್ವಾಮಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಎರಡೇ ದಿನದಲ್ಲಿ ಅದೊಂದು ಸ್ಥಳದಲ್ಲಿ ತ್ರಿವರ್ಣ ಧ್ವಜ ವೀರಾಜಮಾನವಾಗಿ ಹಾರಾಡುವಂತೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ..
ಭರದಿಂದ ಸಾಗಿರುವ ಕ್ಲಾಕ್ ಟವರ್ಗೆ ಬಣ್ಣ ಬಳಿಯುವ ಕೆಲಸ, ಮತ್ತೊಂದೆಡೆ ಕ್ಲಾಕ್ ಟವರ್ ಮೇಲೆ ಹಾರಾಡುತ್ತಿರುವ ದೇಶದ ಹೆಮ್ಮೆಯ ತ್ರಿವರ್ಣ ಧ್ವಜ, ಮತ್ತೊಂದೆಡೆ ಕ್ಲಾಕ್ ಟವರ್ ಏರಿಯಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಇನ್ನೊಂದೆಡೆ ಜನರನ್ನು ನಿಯಂತ್ರಿಸುತ್ತಿರುವ ಪೊಲೀಸರು ಇಂಥದೊಂದು ದೃಷ್ಯಗಳು ಕಂಡು ಬಂದಿದ್ದು ಕೋಲಾರ ನಗರದ ಕ್ಲಾಕ್ ಟವರ್ ಪ್ರದೇಶಗಳಲ್ಲಿ.
Kolar: ಕೆಜಿಎಫ್‌ನ ಬೆಮೆಲ್ ಕಾರ್ಖಾನೆ ಬಂದ್ ಆಗುತ್ತಾ? ಸಚಿವ ನಿರಾಣಿ ಹೇಳಿದ್ದಿಷ್ಟು
ಹೌದು ಕಳೆದ ಎರಡು ದಿನಗಳಿಂದ ಕೋಲಾರದ ಕ್ಲಾಕ್ ಟವರ್ ಏರಿಯಾ ಆತಂಕದ ಕೇಂದ್ರವಾಗಿ ಬೂದಿ ಮುಚ್ಚಿದ ಕೆಂಡದಂತಿತ್ತು, ಇದಕ್ಕೆ ಕಾರಣ ಕೋಲಾರ ಸಂಸದ ಮುನಿಸ್ವಾಮಿ ಏಕಾಏಕಿ ಕೋಲಾರದ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ ಹೇಳಿಕೆ ನೀಡಿದರು, ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮುನಿಸ್ವಾಮಿ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಯಿತು.
ಪರಿಣಾಮ ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು ಮನವೊಲಿಸಿ ಮುನಿಸ್ವಾಮಿ ಅವರಿಗೆ ಪ್ರತಿಭಟನೆಗೆ ಅವಕಾಶ ನೀಡದೆ,ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಮುಂಜಾನೆ ಐದು ಗಂಟೆಯಿಂದಲೇ ಕ್ಲಾಕ್ ಟವರ್ ಏರಿಯಾದಲ್ಲಿ ನಾಕಾ ಬಂಧಿ ಹಾಕಿಕೊಂಡು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕ್ಲಾಕ್ ಟವರ್ ಗೆ ಬಣ್ಣ ಬಳಿಯುವ ಕೆಲಸ ಮಾಡಿದರು.
Tricolour hoisted today at the famous Clock Tower in Kolar.
Historic moment !
Jai Hind ! pic.twitter.com/j3vt8fxnGn
ನಂತರ ಟವರ್ ಮೇಲ್ಬಾಗದಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿದು ನಾಲ್ಕು ಗಂಟೆ ಸುಮಾರಿಗೆ ಹಲವು ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿ ಎಲ್ಲರೂ ಜೈ ಹಿಂದ್ ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಅಂಜುಮನ್ ಮುಖಂಡ ನಾವೂ ಕೂಡಾ ಈ ದೇಶಕ್ಕಾಗಿ ಹೋರಾಟ ಮಾಡಿದವರು, ನಾವು ಇದೇ ದೇಶದವರು ನಮಗೂ ದೇಶದ ಬಗ್ಗೆ ಅಪಾರ ಗೌರವವಿದೆ ಎಂದರು. ಇನ್ನು ಈ ವೇಳೆ ಮಾತನಾಡಿದ ಎಸ್ಪಿ ಹಾಗೂ ಡಿಸಿ ಇನ್ನೂ ಒಂದು ವಾರಗಳ ಕಾಲ ಕೋಲಾರ ನಗರದಲ್ಲಿ ನಿಷೇದಾಜ್ನೆ ಜಾರಿಯಲ್ಲಿರುತ್ತದೆ ಎಂದರು.
ಇನ್ನು ಮುಂಜಾನೆ ಐದು ಗಂಟೆಗೆ ಸುಮಾರು 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ ಪೀಲ್ಡಿಗಿಳಿದಿದ್ದ ಎಸ್ಪಿ ದೇವರಾಜ್ ಹಾಗೂ ಡಿಸಿ ವೆಂಕಟರಾಜಾ ಇಬ್ಬರೂ ಮುಂಜಾನೆ ಐದು ಗಂಟೆಯಿಂದ ಸಂಜೆ ನಾಲ್ಕು ಗಂಟೆ ಧ್ವಜಾರೋಹಣ ಮಾಡುವವರೆಗೂ ಸ್ಥಳದಲ್ಲೇ ಮೊಕ್ಕಾಂ ಹೂಡಿದರು, ಟವರ್ ಮೇಲಿನ ಅರ್ದಚಂದ್ರಾಕೃತಿ ತೆಗೆಯುವ ವಿಚಾರ, ಕೆಲವು ಜನರು ಗುಂಪು ಸೇರಿ ಗಲಾಟೆ ಮಾಡುವ ವಿಚಾರ ಸೇರಿದಂತೆ ಆಗಾಗ ತಗಾದೆ ಶುರುವಾಯಿತಾದರೂ ಎಲ್ಲವನ್ನೂ ನಿಭಾಯಿಸಿದರೂ, ಜೊತೆಗೆ ಎಲ್ಲಾ ಮುಗಿಯುವವರೆಗೂ ಮುಸ್ಲಿಂ ಮುಖಂಡರೂ ಕೂಡಾ ಸ್ಥಳ ಬಿಟ್ಟು ಕದಲದೆ ಕುಳಿತು ಧ್ವಜಾರೋಹಣ ಮಾಡವವರೆಗೂ ಅಲ್ಲೇ ಇದ್ದು ಧ್ವಜಾರೋಹಣ ಮಾಡಿ ಜೈಹಿಂದ್ ಘೋಷಣೆ ಕೂಗಿದರು.
ಇನ್ನು ಧ್ವಜಾರೋಗಹಣ ನಂತರ ಮಾತನಾಡಿದ ಸಂಸದ ಮುನಿಸ್ವಾಮಿ 74 ವರ್ಷಗಳ ಕನಸು ನನಸಾಗಿ, ಕ್ಲಾಕ್ ಟವರ್ ಮೇಲೆ ಭಾರತದ ಧ್ವಜ ಹಾರಿಸಬೇಕೆಂಬ ಕನಸು ಇಂದು ನನಸಾಗಿದೆ, ಕೆಲವು ರಾಜಕಾರಣಿಗಳ ಓಟ್ ಬ್ಯಾಂಕ್ ರಾಜಕಾರಣದಿಂದ ಅದು ಸಾದ್ಯ ವಾಗಿರಲಿಲ್ಲ,ಇಂದು ಎಲ್ಲರೂ ಹಿಂದೂಸ್ಥಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಇಂಥಾದೊಂದು ಕ್ಷಣಕ್ಕೆ ಸಹಕಾರ ಕೊಟ್ಟ ಎಲ್ಲಾ ಮುಸ್ಲಿಮರು ಹಾಗೂ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿದರು.
ಒಟ್ಟಾರೆ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬಹುದಿನಗಳ ಕನಸು ಕೊನೆಗೂ ನನಸಾಗಿದೆ, ಇದರಲ್ಲಿ ಬೇಡಿಕೆ ಇಟ್ಟವರು ಸಂಸದರಾದರೆ,ಕಾರ್ಯರೂಪಕ್ಕೆ ತರುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಶ್ರಮವಹಿಸಿದೆ,ಈ ತ್ರಿವರ್ಣ ಧ್ವಜ ಮೂಲಕ ವಾದರೂ ಹಲವು ವರ್ಷಗಳಿಂದಲೂ ಗೊಂದಲಮಯವಾಗಿದ್ದ ವಾತಾವರಣ ತಿಳಿಯಾಗಲೀ ಅನ್ನೋದೆ ಎಲ್ಲರ ಆಶಯ..