'ಅಂದು ನಾನು ಅಪಶಕುನ ಅಂದುಕೊಂಡಿದ್ರೆ ಆರು ಬಾರಿ ಶಾಸಕ ಆಗ್ತಿರಲಿಲ್ಲ'

By Kannadaprabha News  |  First Published Jan 21, 2021, 1:14 PM IST

1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ನನ್ನ ಸ್ವಂತ ಊರಿಂದ ಬರುವಾಗ ನಾಯಿ ಅಡ್ಡಬಂದು ಹಿಂಬಂದಿಯ ನಾಲ್ಕೈದು ಕಾರು ಡಿಕ್ಕಿ ಹೊಡೆದುಕೊಂಡಿದ್ದವು. ಅಂದು ನಾನು ಅಪಶಕುನ ಎಂದುಕೊಮಡಿದ್ದರೆ 6 ಬಾರಿ ಶಾಸಕ ಆಗುತ್ತಿರಲಿಲ್ಲ ಎಂದು ಬಿಜೆಪಿ ಶಾಸಕರೋರ್ವರು ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ. 


ಚಿತ್ರದುರ್ಗ (ಜ.21):  ಹಳ್ಳಿಗಾಡಿನ ಜನರಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಸಂಶೊಧನೆ ನಡೆಸಲು ಅನುಕೂಲ ಮಾಡಿಕೊಡುವ ಜತೆಗೆ ಇತರೆ ಭಾಷೆಗಳಿಗೂ ಪ್ರಾಧಾನ್ಯತೆ ನೀಡಬೇಕಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು. 

ನಗರದ ಹೋಟೆಲ್‌ ಮಯೂರ ದುರ್ಗದಲ್ಲಿ ಬುಧವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಪದವಿ ವಿದ್ಯಾರ್ಥಿಗಳು ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ರಾಜ್ಯಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ   ಸಾಮಾನ್ಯವಾಗಿ ರಾಜಕಾರಣಿಗಳು ಶಾಸಕರಾಗಲಿಲ್ಲ, ಮಂತ್ರಿಯಾಗಲಿಲ್ಲ ಎನ್ನುವ ಕಾರಣಕ್ಕೆ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಮಾಡಿಸುವುದು, ಉರುಳುಸೇವೆ ಮಾಡಿಸುವುದನ್ನು ಸಾಮಾನ್ಯವಾಗಿ ನೋಡುತ್ತಿದ್ದೇವೆ. ಆದರೆ, ನನಗೆ ಆ ರೀತಿ ಅಭ್ಯಾಸವಿಲ್ಲ ಎಂದರು.

Latest Videos

undefined

'ಸಿದ್ದು, ಡಿಕೆಶಿಗೆ ಈಗ ಉದ್ಯೋಗವಿಲ್ಲ, ಹೋರಾಟದ ನೆಪದಲ್ಲಿ ಕೆಲಸ ಹುಡುಕುತ್ತಿದ್ದಾರೆ' .

 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ನನ್ನ ಸ್ವಂತ ಊರಿಂದ ಬರುವಾಗ ನಾಯಿ ಅಡ್ಡಬಂದು ಹಿಂಬಂದಿಯ ನಾಲ್ಕೈದು ಕಾರು ಡಿಕ್ಕಿ ಹೊಡೆದುಕೊಂಡಿದ್ದವು. ಕೆಲವರು ಅಪಶಕುನ, ಪ್ರಮಾಣಪತ್ರ ಸಲ್ಲಿಸುವುದು ಬೇಡ ಎಂದರೂ ಇದ್ಯಾವುದಕ್ಕೆ ಅಂಜದೇ ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿ ಗೆಲುವು ಪಡೆದೆ ಅಂದೇ ಅಪಶಕುನವಾಯಿತು ಎಂದು ಹಿಂದೇಟು ಹಾಕಿದ್ದರೆ ಆರು ಬಾರಿ ಶಾಸಕನಾಗುತ್ತಿರಲಿಲ್ಲ ಎಂದು ಹೇಳಿದರು.

ಹಳ್ಳಿಗಾಡಿನ ಬಹುತೇಕ ಪಿಯು ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಕೊರೆತೆ ಕಾಡುತ್ತಿದೆ. ಹಳ್ಳಿಗಾಡಿನಲ್ಲಿ ಎಲ್ಲರಿಗಿಂತಲೂ ಪ್ರತಿಭಾವಂತರಿರುತ್ತಾರೆ. ಪ್ರತಿಭಾವಂತರಿಗೆ ಸರ್ಕಾರಗಳೇ ಸೌಲಭ್ಯಗಳನ್ನು ಕಲ್ಪಿಸದೆ ಇರುವುದರಿಂದ ವಿಜ್ಞಾನ ಕ್ಷೇತ್ರದಲ್ಲಿ ಹಿನ್ನೆಡೆಗೆ ಕಾರಣವಾಗಿದೆ. ಹೀಗಾಗಿ, ನನ್ನ ಕ್ಷೇತ್ರದ ವಿಜ್ಞಾನ ಕಾಲೇಜಿನ ಪ್ರಯೋಗಾಲಯಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಡಿಎಂಎಫ್‌ ಅನುದಾನದಲ್ಲಿ ರು.1 ಕೋಟಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

click me!