ಲಾಕ್‌ಡೌನ್‌ನಿಂದ ಬಡವರಿಗೆ ಸಮಸ್ಯೆ ಎಂದ ಬಿಜೆಪಿ ಶಾಸಕ

By Kannadaprabha News  |  First Published Apr 28, 2021, 2:16 PM IST

ಏಪ್ರಿಲ್ 27 ರಿಂದ 14 ದಿನ ಜನತಾ ಕರ್ಫ್ಯೂ| ನಾನು ಲಾಕ್‌ಡೌನ್‌ ವಿರೋಧಿಯಲ್ಲ. ಆದರೆ, ಇದರಿಂದ ಬಡವರು, ಕೂಲಿಕಾರರ ಮೇಲಾಗುವ ಪರಿಣಾಮಗಳನ್ನು ಅರಿಯಬೇಕಿತ್ತು| ಸರ್ಕಾರ ಈ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು: ಸೋಮಶೇಖರ ರೆಡ್ಡಿ|  


ಬಳ್ಳಾರಿ(ಏ.28): ಜನತಾ ಕರ್ಫ್ಯೂ ಹಾಗೂ ಲಾಕ್‌ಡೌನ್‌ನಿಂದ ಬಡವರಿಗೆ ತೀವ್ರ ಸಮಸ್ಯೆಯಾಗಲಿದೆ. ರಾಜ್ಯ ಸರ್ಕಾರ ಲಾಕ್‌ಡೌನ್‌ ಮಾಡುವ ಮುಂಚೆ ಯೋಚನೆ ಮಾಡಬೇಕಿತ್ತು ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಲಾಕ್‌ಡೌನ್‌ ವಿರೋಧಿಯಲ್ಲ. ಆದರೆ, ಇದರಿಂದ ಬಡವರು, ಕೂಲಿಕಾರರ ಮೇಲಾಗುವ ಪರಿಣಾಮಗಳನ್ನು ಅರಿಯಬೇಕಿತ್ತು ಎಂದರಲ್ಲದೆ, ಸರ್ಕಾರ ಈ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು ಎಂದರು.

Tap to resize

Latest Videos

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ನಿನ್ನೆಯಿಂದ(ಏಪ್ರಿಲ್ 27 ರಿಂದ 14 ದಿನ ಕರ್ನಾಟಕವನ್ನು ಲಾಕ್​ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದರು. 
 

click me!