‘ಗೌಡರಿಗೆ ಸೋತು ಕೂತು ಅಭ್ಯಾಸವಿಲ್ಲ : ಮತ್ತೊಂದು ಚುನಾವಣೆ ಆಸೆ’

Published : Sep 20, 2019, 02:03 PM IST
‘ಗೌಡರಿಗೆ ಸೋತು ಕೂತು ಅಭ್ಯಾಸವಿಲ್ಲ : ಮತ್ತೊಂದು ಚುನಾವಣೆ  ಆಸೆ’

ಸಾರಾಂಶ

ದೇವೇಗೌಡರಿಗೆ ಸೋತು ಕೂತು ಅಭ್ಯಾಸವಿಲ್ಲ ಎಂದು ಸಚಿವ ಮಾದುಸ್ವಾಮಿ ಹೇಳಿದ್ದಾರೆ. 

ತುಮಕೂರು [ಸೆ.20]:  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಸೋತು ಕುಳಿತು ಅಭ್ಯಾಸವಿಲ್ಲ. ಹೀಗಾಗಿ ಆರು ತಿಂಗಳಿನಲ್ಲಿ ಸರ್ಕಾರ ಬೀಳುತ್ತದೆ ಎನ್ನುತ್ತಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಂಗ್ಯವಾಡಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗೌಡರಿಗೆ ಅದೊಂದು ಚಟ. ಮತ್ತೆ ಇನ್ನೊಂದು ಎಲೆಕ್ಷನ್‌ ಮಾಡಿಸುವ ಆಸೆ ಅವರಿಗಿದೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಹಾಸನ ಉಸ್ತುವಾರಿ ಸ್ಥಾನಕ್ಕೆ ಸಂಬಂಧಿಸಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನ ಕರ್ನಾಟಕ ರಾಜ್ಯದ ಒಳಗೇ ಇದೆ. ಹಾಸನವನ್ನು ಯಾರಿಗೂ ಬರೆದುಕೊಟ್ಟಿಲ್ಲ, ಅಷ್ಟಕ್ಕೂ ಅದೇನು ರೇವಣ್ಣನ ಸಾಮ್ರಾಜ್ಯವೇ ಅಥವಾ ತುಮಕೂರು ನನ್ನ ಸಾಮ್ರಾಜ್ಯವೇ ಎಂದು ಪ್ರಶ್ನಿಸಿದರು. ಹಾಸನ ನಿಭಾಯಿಸುವ ಶಕ್ತಿ ನನಗಿದೆ ಎಂದೇ ತುಮಕೂರಿನ ಜೊತೆಗೆ ಆ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ ಎಂದರು.

PREV
click me!

Recommended Stories

Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!