ಕೋಮು ಗಲ​ಭೆಗೆ ಪ್ರಚೋ​ದನೆ ನೀಡಿ​ರುವ ಸಚಿವ ಈ​ಶ್ವ​ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ

By Web DeskFirst Published Sep 20, 2019, 1:16 PM IST
Highlights

ಮುಸ್ಲಿಂ ಸಮುದಾಯ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ| ತಾವು ಜನಪ್ರತಿನಿಧಿಯಾಗಿರಲು ಅನರ್ಹ ಎಂಬುದನ್ನು ಈಶ್ವರಪ್ಪ ಅವರು ಧೃಢಪಡಿಸಿದ್ದಾರೆ| ಶ್ರೀ ರಾಮ ಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾ​ಲಿಕ್‌ ವಿರುದ್ಧವೂ ಕರ್ಮಕ್ಕೆ ಮನವಿ| 

ರಾಮನಗರ:(ಸೆ.20) ಮುಸ್ಲಿಂ ಸಮುದಾಯ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಸ್‌ಡಿಪಿಐನ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೊಹಮದ್‌ ಫಾಜೀಲ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಇದೆ ವೇಳೆ ಮಾತನಾಡಿದ ಅವರು, ಮತಬ್ಯಾಂಕ್‌ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಅವಮಾನಿಸುವಂತಹ ಹೇಳಿಕೆ ನೀಡುವ ಮೂಲಕ ಸಚಿವ ಈಶ್ವರಪ್ಪ ಅವರು ಜನಪ್ರತಿನಿಧಿಯಾಗಲು ಅನರ್ಹರಾಗಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿರುವ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಮಾತನಾಡಲು ಈಶ್ವರಪ್ಪನವರಿಗೆ ನೈತಿಕವಾಗಿ ಹಕ್ಕಿಲ್ಲ ಎಂದು ಟೀಕಿ​ಸಿ​ದ್ದಾ​ರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು ಅಥವಾ ಯಾವುದೇ ಅಭ್ಯರ್ಥಿಯು ಯಾವುದೇ ಸಮುದಾಯದ ಮತಗಳನ್ನು ಪಡೆಯಬಹುದು. ಆದರೆ ಇದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಈಶ್ವರಪ್ಪ ಮುಸಲ್ಮಾನರ ಮತ ಪಡೆಯುವ ಶಾಸಕರು ಹಿಜಿಡಾಗಳು ಎಂಬ ಹೇಳಿಕೆ ನೀಡುವ ಮೂಲಕ ತನ್ನ ಮಾನಸಿಕತೆಯನ್ನು ಪ್ರದರ್ಶಿಸಿರುತ್ತಾರೆ. ಈ ಮೂಲಕ ತಾನು ಜನಪ್ರತಿನಿಧಿಯಾಗಿರಲು ಅನರ್ಹ ಎಂಬುದನ್ನು ಧೃಢಪಡಿಸಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. 

ಬೆಂಗ​ಳೂ​ರಿನ ಪುರಭವ​ನ​ದಲ್ಲಿ ಶ್ರೀ ರಾಮ ಸೇನೆ ಬೆಂಗ​ಳೂರು ನಗರ ಸಮಿತಿ ಆಯೋ​ಜಿ​ಸಿದ್ದ ನೂತನ ಪದಾ​ಧಿ​ಕಾ​ರಿ​ಗಳ ಅಧಿ​ಕಾರ ಸ್ವೀಕಾರ ಸಮಾ​ರಂಭ​ದಲ್ಲಿ ಕೋಮು ಗಲ​ಭೆಗೆ ಪ್ರಚೋ​ಧನೆ ನೀಡಿ​ರುವ ಸಚಿವ ಕೆ.ಎಸ್‌ .ಈ​ಶ್ವ​ರಪ್ಪ, ಶ್ರೀ ರಾಮ ಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾ​ಲಿಕ್‌ ಹಾಗೂ ಇತ​ರರ ಮೇಲೆ ದೂರು ದಾಖ​ಲಿ​ಸಿ​ಕೊಂಡು ಕಠಿಣ ಕಾನೂನು ಕ್ರಮ ಜರು​ಗಿ​ಸ​ಬೇ​ಕೆಂದು ಮೊಹ​ಮದ್‌ ಫಾಜೀಲ್‌ ಮನವಿ ಮಾಡಿ​ದ್ದಾರೆ.
 

click me!