ಶಿವಮೊಗ್ಗ: 'ಬಿಜೆಪಿ ದೇಶದ ಜನರ ಪ್ರೀತಿಯ ಪಕ್ಷ'

By Kannadaprabha News  |  First Published Sep 9, 2019, 10:11 AM IST

BJP ದೇಶದೆಲ್ಲೆಡೆ ಹರಡಿ ಬೃಹದಾಕಾರವಾಗಿ ಬೆಳೆದಿರುವ ರಾಷ್ಟ್ರೀಯ ಪಕ್ಷ. ಪಕ್ಷದ ತತ್ವ ಸಿದ್ಧಾಂತದೊಂದಿಗೆ ಜನಪರ ಕಾಳಜಿ ಹೊಂದಿರುವ ಕಾರಣ ಪಕ್ಷ ದೇಶದ ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್‌ ನಾಯ್ಕ್‌ ಹೇಳಿದರು. ಹೊಳೆ ಹೊನ್ನೂರಿನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.


ಶಿವಮೊಗ್ಗ(ಸೆ.09): ಭಾರತೀಯ ಜನತಾ ಪಾರ್ಟಿ ದೇಶದೆಲ್ಲೆಡೆ ಹರಡಿ ಬೃಹದಾಕಾರವಾಗಿ ಬೆಳೆದಿರುವ ರಾಷ್ಟ್ರೀಯ ಪಕ್ಷ. ಪಕ್ಷದ ತತ್ವ ಸಿದ್ಧಾಂತದೊಂದಿಗೆ ಜನಪರ ಕಾಳಜಿ ಹೊಂದಿರುವ ಕಾರಣ ಪಕ್ಷ ದೇಶದ ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್‌ ನಾಯ್ಕ್‌ ಹೇಳಿದರು.

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಅರಹತೊಳಲು ಕೈಮರದ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ರಾಜ್ಯದ ಜನತೆ ಅಭಿವೃದ್ಧಿ ಕಾರ್ಯಗಳನ್ನು ಎದುರು ನೋಡುತ್ತಿದ್ದಾರೆ.

Tap to resize

Latest Videos

ಲೋಕಲ್‌ ಅಧಿಕಾರಿಗಳು ಹೆಣದಂತಾಗಿದ್ದಾರೆ: ಕಾಗೋಡು ಗರಂ

ಮೋದಿ ಪ್ರಧಾನಿಯಾದ ನಂತರ ದೇಶಕ್ಕೆ ವಿಶ್ವ ಮಾನ್ಯತೆ ದೊರೆತಿದೆ. ದೇಶದಲ್ಲಿ ಸುಭದ್ರ ಆಡಳಿತ ಇರಬೇಕೆಂದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ಪಕ್ಷದ ಬೆಳವಣಿಗೆ ಹಿಂದೆ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವಿದೆ ಎಂದರು.

6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ : ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ

ಪಕ್ಷದ ಸಿದ್ಧಾಂತಕ್ಕೆ ಮತ್ತಷ್ಟುಜನರನ್ನು ಸೇಪರ್ಡೆಗೊಳಿಸುವುದಕ್ಕೆ ಇದು ಸಕಾಲ. ಕಾರ್ಯಕರ್ತರು ಇದನ್ನು ದುಪಯೋಗಪಡಿಸಿಕೊಳ್ಳಬೇಕು. ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಗ್ರಾಮಾಂತರ ಕ್ಷೇತ್ರವನ್ನು ಮತ್ತಷ್ಟುಬಲಪಡಿಸಬೇಕು. ಕಳೆದೆರಡು ಚುನಾವಣೆಗಳಲ್ಲಿ ಗ್ರಾಮಾಂತರ ಕ್ಷೇತ್ರ ಸಂಪೂರ್ಣವಾಗಿ ಬಿಜೆಪಿಮಯ ಆಗುತ್ತಿರುವುದಕ್ಕೆ ಸದಸ್ಯತ್ವ ಅಭಿಯಾನ ಮತ್ತಷ್ಟುಉತ್ಸಾಹ ತುಂಬಿದೆ. ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸದಸ್ಯರನ್ನು ಕುಟುಂಬ ಸದಸ್ಯರಂತೆ ಸ್ವಾಗತಿಸಿ ಸದಸ್ಯತ್ವ ಅಭಿಯಾನದಲ್ಲಿ ಗ್ರಾಮಾಂತರ ಕ್ಷೇತ್ರವನ್ನು ಜಿಲ್ಲೆಯಲ್ಲಿ ನಂ.01 ಸ್ಥಾನಕ್ಕೆ ತರಬೇಕು ಎಂದರು.

ಶಿವಮೊಗ್ಗ: ಹೊಸ ಟ್ರಾಫಿಕ್ ರೂಲ್ಸ್, ಎರಡು ದಿನದಲ್ಲಿ 84,800 ರು. ದಂಡ ವಸೂಲಿ..!

ಮಂಡಲ ಅಧ್ಯಕ್ಷ ಎಂ.ಎಸ್‌. ಚಂದ್ರಶೇಖರ್‌, ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ನಟರಾಜ್‌, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಶ್ರೀನಿವಾಸ್‌, ಪ್ರಮುಖರಾದ ಬಾಳೋಜಿ ಕೃಷ್ಣೋಜಿರಾವ್‌, ಕಲ್ಲಜ್ಜನಾಳ್‌ ಮಂಜಣ್ಣ, ರಾಜೇಶ್‌ ಪಾಟೀಲ್‌, ಎಂ. ರಾಜಶೇಖರ್‌, ದಿಗ್ಗೆನಹಳ್ಳಿ ವೀರೇಶಪ್ಪ, ರಾಮಚಂದ್ರ ರಾವ್‌ ಕದಂ, ವಾಮಣ್ಣ, ನಂಜುಂಡಸ್ವಾಮಿ, ಮಲ್ಲೇಶ್‌, ವೆಂಕಟೇಶ್‌, ಚಿದಾನಂದಮೂರ್ತಿ, ನಿರ್ಮಲಮ್ಮ, ನಂದೀಶ ಇತರಿದ್ದರು.

click me!