ನನಗೆ ಬಿಜೆಪಿಯಿಂದ ನಿರಂತರ ಆಹ್ವಾನವಿದೆ : ಕೈ ಪ್ರಮುಖ ನಾಯಕ

Kannadaprabha News   | Asianet News
Published : Nov 26, 2020, 11:07 AM ISTUpdated : Nov 26, 2020, 11:31 AM IST
ನನಗೆ ಬಿಜೆಪಿಯಿಂದ ನಿರಂತರ ಆಹ್ವಾನವಿದೆ :   ಕೈ  ಪ್ರಮುಖ ನಾಯಕ

ಸಾರಾಂಶ

ಬಿಜೆಪಿಯಿಂದ ನನಗೆ ನಿರಂತರ ಆಹ್ವಾನವಿದೆ ಎಂದು ಕಾಂಗ್ರೆಸ್ ಮುಖಂಡರೋರ್ವರು ಹೇಳಿದ್ದಾರೆ. ಆದರೆ ನಾನು ಸದ್ಯಕ್ಕೆ ಪಕ್ಷ ಬಿಡುವುದಿಲ್ಲ ಎಂದಿದ್ದಾರೆ

ತುಮಕೂರು (ನ.26): ನಾನು ಯಾವದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ  ಹೋಗುವುದಿಲ್ಲ. ಆದರೆ ಬಿಜೆಪಿಯಿಂದ ನಿರಂತರ ಆಹ್ವಾನವಿದೆ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ. 

ಬಿಜೆಪಿ ಮುಖಂಡರ ಜೊತೆಗಿನ  ಭೇಟಿ ಸಂಬಂಧ ಪ್ರತಿಕ್ರಿಯಿಸಿದ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗಿದ್ದೆ ಎಂದು ಹೇಳಿದರು. 

ನಾನು ಭೇಟಿ ಮಾಡಲು ತೆರಳಿದ ಮುಖಂಡರು ಸಿಗದ ಕಾರಣ ಅಲ್ಲಿಯೇ ಪಕ್ಕದಲ್ಲಿದ್ದ ರಮೇಶ್ ಜಾರಕಿಹೊಳಿ ಮನೆಗೆ ತೆರಳಿದ್ದೆ ಎಂದರು. 

ಜೈಲಿಗೆ ಹೋದ ನಾಯಕನ ಉಚ್ಛಾಟನೆಗೆ ಡಿಕೆಶಿ ಹಿಂದೇಟು : ಅಖಂಡ ಮಾತಿಗೆ ಡೋಂಟ್ ಕೇರ್ ...

ಜಾರಕಿಹೊಳಿ ಮನೆಗೆ ಹೋಗಿ ಎಸ್‌ ಟಿ ಸಮುದಾಯಕ್ಕೆ ಶೆ.3 ರಿಂದ ಶೇ.7.5 ರಷ್ಟು ಮೀಸಲಾತಿ  ಹೆಚ್ಚಿಸುವ  ಬಗ್ಗೆ ಚರ್ಚಿಸಿದೆ. ಈ ವೇಳೆ ರಮೇಶ್ ಜಾರಕಿಹೊಳಿ ಮನೆಗೆ ರಾಜೂಗೌಡ, ಪ್ರತಾಪ್ ಗೌಡ, ಸಿ ಪಿ ಯೋಗೇಶ್ವರ್ ಇದ್ದರು ಎಂದು ಅವರು ತಿಳಿಸಿದರು. 

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್