ರೋಹಿಣಿ ಸಿಂಧೂರಿ ಜೊತೆಗೆ ಶಾಸಕರ ಗುದ್ದಾಟ : ಪತ್ರ ಬರೆದು ಟಾಂಗ್ ನೀಡದ್ರು ಡಿಸಿ

By Kannadaprabha NewsFirst Published Nov 26, 2020, 10:54 AM IST
Highlights

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕರ ನಡುವೆ   ವಾರ್ ಮುಂದುವರಿದಿದೆ. ಪತ್ರ  ಬರೆದು ಡಿಸಿ ಟಾಂಗ್ ನೀಡಿದ್ದಾರೆ.

 ಮೈಸೂರು (ನ.26): ಮೈಸೂರು ಜಿಲ್ಲಾಧಿಕಾರಿ ಡಿಸಿ ರೋಹಿಣಿ ಸಿಂಧೂರಿ ಶಾಸಕ ಮಂಜುನಾಥ್ ಗುದ್ದಾಟ ಮುಂದುವರಿದಿದೆ. 

ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಸಚಿವರಿಗೆ ನೇರವಾಗಿ ಮಂಜುನಾಥ್ ದೂರು ನೀಡಿದ್ದು, ಶಾಸಕ ಎಚ್ ಪಿ ಮಂಜುನಾಥ್ ಅವರ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಪತ್ರದ ಮೂಲಕ ಉತ್ತರ ನೀಡಿದ್ದಾರೆ. 

ಪತ್ರದ ಮೂಲಕ ಮಂಜುನಾಥ್‌ಗೆ ಟಾಂಗ್ ನೀಡಿದ್ದು ಕ್ಷೇತ್ರದ ಅಭಿವೃದ್ಧಿ ಕಾರ್ಯ ಕುರಿತ ಯಾವ ಪತ್ರಗಳು ತಮ್ಮಿಂದ ಬಂದಿಲ್ಲ. ನಿಮ್ಮ ವೈಯಕ್ತಿಕ ಹೆಸರಿನಲ್ಲಿ ಹಲವು ಅರ್ಜಿ ಗಳಿವೆ ಎಂದು ಹೇಳಿದ್ದಾರೆ. 

ಮೈಸೂರು ಡಿಸಿ ವರ್ಗಾವಣೆ ವಿವಾದ : ದಿನದಿನವೂ ಮುಂದುವರಿಯುತ್ತಲೇ ಇದೆ

ಹಲವು ಅರ್ಜಿಗಳು ಮೈಸೂರು ತಾಲೂಕಿನಲ್ಲಿ ಕೇರ್ಗಳಿ ಗ್ರಾಮದ ಹಲವು ಸರ್ವೆ ನಂಬರ್ ಗಳ ಭೂ ಪರಿವರ್ತನೆ ಅರ್ಜಿಗಳು. ಆ ಅರ್ಜಿಗಳ ವಿಲೇವಾರಿ ಕಾನೂನು ಪ್ರಕಾರ ಮಾಡುತ್ತೇವೆ ಎಂದು ರೋಹಿಣಿ ಹೇಳಿದರು.

ಗಜಪಯಣದಲ್ಲಿ ಯಾವುದೇ ಶಿಷ್ಟಚಾರ ಉಲ್ಲಂಘನೆ ಆಗಿಲ್ಲ. ದಸರಾ ಉನ್ನತ ಸಮಿತಿ ಸಭೆ ತೀರ್ಮಾನದಂತೆ ನಡೆದು ಕೊಳ್ಳಲಾಗಿದೆ.
ಹುಣಸೂರಿಗೆ ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದ್ದಾಗ ತಾವು ಅನಾರೋಗ್ಯದಿಂದ ಇದ್ದ ಕಾರಣ ನಿಮ್ಮ ಜೊತೆ ಚರ್ಚೆ ಸಾಧ್ಯವಾಗಿಲ್ಲ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. 

ಕೆಡಿಪಿ ಸಭೆಯಲ್ಲಿ ನೀವು ನೀಡಿರುವ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ. ಹೇಳಿಕೆ ನೀಡುವ ಮುನ್ನ ವಾಸ್ತವಾಂಶ ಗಮನಿಸಿ ಹೇಳಿಕೆ ನೀಡಿ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. 

click me!