ಮಕ್ಕಳ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಖತರ್ನಾಕ್ : ಕೊನೆಗೆ ಸಿಕ್ಕಿಬಿದ್ದ

By Kannadaprabha News  |  First Published Nov 5, 2020, 12:12 PM IST

ಮಕ್ಕಳ ಅಶ್ಲೀ ವಿಡಿಯೋಗಳನ್ನು ಸಂಗ್ರಹಿಸಿ ಕಳಿಸುತ್ತಿದ್ದ ಆರೊಪಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ. 


ಶಿವಮೊಗ್ಗ (ನ.05) : ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಮಕ್ಕಳ ಅಶ್ಲೀಲ ವೀಡಿಯೋ ಫಾರ್ವರ್ಡ್‌ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.ರಘು ಬಂಧಿತ ಆರೋಪಿ. ಸೈಬರ್‌ ಟಿಪ್‌ಲೈನ್‌ನಿಂದ ಬಂದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದೆ.

Tap to resize

Latest Videos

ಮಕ್ಕಳ ಅಶ್ಲೀಲ ವೀಡಿಯೋ ಅಥವಾ ಚಿತ್ರಗಳನ್ನು ಅಂತರ್ಜಾಲದ ಮೂಲಕ ಹುಡುಕುವುದು, ಶೇಖರಿಸುವುದು ಫಾರ್ವರ್ಡ್‌ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67 (ಆ) ಪ್ರಕಾರ ಅಪರಾಧ ಎಂದು ಎಸ್ಪಿ ಕೆ.ಎಂ.ಶಾಂತರಾಜು ಇದೇ ವೇಳೆ ತಿಳಿಸಿದ್ದಾರೆ.

click me!