ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ:ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

By Kannadaprabha News  |  First Published Aug 18, 2022, 5:04 PM IST

ರಾಜ್ಯದ ಬಹುಚರ್ಚಿತ ವಿಷಯವಾಗಿರುವ ಸಾವರ್ಕರ್ ಭಾವಚಿತ್ರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಕಳೆದ ಮೂರು ದಿನಗಳಿಂದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹೈಡ್ರಾಮ ಸೃಷ್ಟಿಯಾಗಿದೆ. ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ನಗರಸಭೆಗೆ ಪತ್ರ ಕಳುಹಿಸಿದ್ದಾರೆ.


ಉಡುಪಿ: ರಾಜ್ಯದ ಬಹುಚರ್ಚಿತ ವಿಷಯವಾಗಿರುವ ಸಾವರ್ಕರ್ ಭಾವಚಿತ್ರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಕಳೆದ ಮೂರು ದಿನಗಳಿಂದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹೈಡ್ರಾಮ ಸೃಷ್ಟಿಯಾಗಿದೆ. ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ನಗರಸಭೆಗೆ ಪತ್ರ ಕಳುಹಿಸಿದ್ದಾರೆ.

ಹಿಂದೂ ಮಹಾಸಭಾದ ಮುಖಂಡ ಪ್ರಮೋದ್ ಉಚ್ಚಿಲ ಮತ್ತು ಇಬ್ಬರು ಗೆಳೆಯರು ಉಡುಪಿ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಸಂದರ್ಭ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಒಳಗೊಂಡ ಕಟೌಟ್ ಹಾಕಿದ್ದರು. ಈ ಕಟೌಟ್ ಸಮಾಜದ ಶಾಂತಿಯನ್ನ ಕೆಡಿಸುತ್ತದೆ ಎಂದು ಪಿಎಫ್ಐ ಮತ್ತು ಎಸ್‌ಡಿಪಿಐ ಉಡುಪಿ ನಗರ ಠಾಣೆಗೆ ದೂರು ನೀಡಿತ್ತು. ಕಾಂಗ್ರೆಸ್‌ ನ ಕೆಲ ಜಿಲ್ಲಾ ನಾಯಕರು ಈ ಕಟೌಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಕಾಂಗ್ರೆಸ್ ನ ಹಿರಿಯ ನಾಯಕರು ತಟಸ್ಥ ಧೋರಣೆ ತೆಳೆದಿದ್ದರು.

Latest Videos

undefined

ಸಾವರ್ಕರ್‌ ಅಂದ್ರೆ, ತತ್ವ, ತರ್ಕ, ತ್ಯಾಗದ ರೂಪ.. ಅಟಲ್‌ ಹೇಳಿದ್ದ ಮಾತುಗಳಲ್ಲಿತ್ತು ಮಹಾನ್‌ ನಾಯಕನ ನೋವು!

ಬುಧವಾರ ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದರು. ಯುವಮೋರ್ಚಾದ ಕೆಲ ಕಾರ್ಯಕರ್ತರು ಬೆಳವಣಿಗೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ಮಾಡಿದ್ದರು. ಈ ನಡುವೆ ಯಶ್ ಪಾಲ್ ಸುವರ್ಣ ನಗರಸಭೆಗೆ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪ್ರತಿಮೆ ರಚಿಸಲು ಅನುಮತಿ ಕೋರಿ  ಪತ್ರ ಬರೆದಿದ್ದಾರೆ. ಈ ಮೂಲಕ ವಿವಾದ ಹೊಸತೊಂದು ಆಯಾಮ ಪಡೆದಿದೆ.

ಮನವಿ‌ ಪತ್ರದಲ್ಲಿ ಏನಿದೆ?

ಉಡುಪಿ ನಗರಸಭೆಯ ಅಜ್ಜರಕಾಡು ವ್ಯಾಪ್ತಿಯಲ್ಲಿ ಬ್ರಹ್ಮಗಿರಿ ವೃತ್ತದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪುತ್ಥಳಿ ನಿರ್ಮಿಸಿ ವೀರಸಾವರ್ಕರ್ ಅವರಿಗೆ ಸಮಸ್ತ ದೇಶಪ್ರೇಮಿಗಳ ಪರವಾಗಿ ಗೌರವ ಸಲ್ಲಿಸಲು ನಿರ್ಧರಿಸಿದ್ದೇವೆ.

ಕರಿನೀರ ಶಿಕ್ಷೆಯ ಕರಾಳತೆಯನ್ನು ಅನುಭವಿಸಿದ್ದ ದೇಶಭಕ್ತ ಸಾವರ್ಕರ್‌!

ಭಾರತ ಸ್ವಾತಂತ್ರ್ಯಗೊಂಡ 75 ವರ್ಷಗಳನ್ನು ಪೂರೈಸಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದ ವೀರ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅತ್ಯಂತ ಸಮಂಜಸ ಸಮಯ ಬಂದೊದಗಿದ್ದು ತಾವು ನಗರಸಭೆಯ ಮೂಲಕ ಈ ಪುತ್ಥಳಿ ಅಳವಡಿಸಲು ಅನುಮತಿ ನೀಡಿ ಸಹಕರಿಸಬೇಕಾಗಿ ವಿನಂತಿ. ಹೀಗಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಯಶ್ ಪಾಲ್ ಅವರಿಂದ ತಲುಪಿದ ಪತ್ರಕ್ಕೆ ಉಡುಪಿ ನಗರಸಭೆ ಸ್ವೀಕೃತಿಯನ್ನು ನೀಡಿದೆ.
 

click me!