ಸ್ವಾಮೀಜಿ ಆಶೀರ್ವಾದ ಪಡೆದು ತಮ್ಮ ಕೋರಿಕೆ ಮುಂದಿಟ್ಟ ಎಸ್‌ಎಂಕೆ

Kannadaprabha News   | Asianet News
Published : Sep 09, 2020, 11:28 AM IST
ಸ್ವಾಮೀಜಿ ಆಶೀರ್ವಾದ ಪಡೆದು ತಮ್ಮ ಕೋರಿಕೆ ಮುಂದಿಟ್ಟ ಎಸ್‌ಎಂಕೆ

ಸಾರಾಂಶ

ಸ್ವಾಮೀಜಿ ಆಶೀರ್ವಾದ ಪಡೆದ ಬಿಜೆಪಿ ಮುಖಂಡ ಎಸ್‌.ಎಂ ಕೃಷ್ಣ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಬೇಡಿಕೊಂಡರು. ಸಂಕಷ್ಟಗಳಿಂದ ವಿಮುಕ್ತಿಗಾಗಿ ಪ್ರಾರ್ಥಿಸಿದರು. 

 ಮದ್ದೂರು (ಸೆ.09):  ಪಟ್ಟಣದ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ   ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇವಾಲಯಕ್ಕೆ ಆಗಮಿಸಿದ ಮಾಜಿ ಸಿಎಂ ಎಸ್‌.ಎಂ. ಕೃಷ್ಣರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯದ ಅರ್ಚಕ ಪ್ರದೀಪ್‌ ಅಚಾರ್ಯ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಎಸ್‌.ಎಂ.ಕೃಷ್ಣ ಆಂಜನೇಯ ಸ್ವಾಮಿ ವಿಗ್ರಹದ ಬಳಿ ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ತಮ್ಮ ಕುಟುಂಬದವರ ಹೆಸರಿನಲ್ಲಿ ವಿಶೇಷ ಅರ್ಚನೆ ಯೊಂದಿಗೆ ( ಒಂದು ಕಾಲು ರುಪಾಯಿ ಹಿಡಿದು ಇಷ್ಟಾರ್ಥಗಳನ್ನು ಈಡೇರಿಸುವಂತೆ) ಪ್ರಾರ್ಥನೆ ಸಲ್ಲಿಸಿದರು.

ಬಳಿಕ ದೇವಾಲಯದ ದರ್ಬಾರ್‌ ಆವರಣದಲ್ಲಿರುವ ಸಭಾಂಗಣಕ್ಕೆ ಆಗಮಿಸಿ ಸೋಸಲೆ ವ್ಯಾಸರಾಜ ಮಠದ ಪೀಠಾಧ್ಯಕ್ಷರಾದ ಶ್ರೀ ವಿದ್ಯಾ ಶೇಷ ಶ್ರೀ ತೀರ್ಥಸ್ವಾಮಿಗಳಿಂದ ಆಶೀರ್ವಾದ ಪಡೆದರು. ಬಳಿಕ ಪೀಠಾಧ್ಯಕ್ಷರು ನಡೆಸಿಕೊಟ್ಟದರ್ಬಾರ್‌ ಕಾರ್ಯದಲ್ಲಿ ಭಾಗವಹಿಸಿದ ಎಸ್‌.ಎಂ. ಕೃಷ್ಣ ಮಾತನಾಡಿ, ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯ ಆಡಳಿತ ನಡೆಸಿದ ಚರಿತ್ರೆಯನ್ನು ಈಗಾಗಲೇ ಓದಿದ್ದು, ಸಾಕಷ್ಟುಕೇಳಿದ್ದು ವಿಜಯನಗರ ಸಾಮ್ರಾಜ್ಯದ ಕೃಷ್ಷದೇವರಾಯ ಆಳ್ವಿಕೆಯಲ್ಲಿ ಚಿನ್ನದ ನಾಣ್ಯಗಳನ್ನು ಶೇಖರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸ್ವರ್ಣ ಭೂಮಿಯಾಗಿದೆ. ವಿಜಯನಗರ ಅರಸು ನೀಡಿರುವ ಮಹಾನ್‌ ಕೊಡುಗೆಯಿಂದಾಗಿ ದೇಶ ಪುಳಕಿತವಾಗುತ್ತದೆ ಎಂದು ತಿಳಿಸಿದರು.

5 ಎಕರೆ ಜಾಗ ಕೋರಿ ಸಿಎಂ BSYಗೆ ಪತ್ರ ಬರೆದ ಎಸ್.ಎಂ.ಕೃಷ್ಣ

ಸಮಾಜ ಎದುರಿಸುತ್ತಿರುವ ಕೊರೋನಾ ಎಂಬ ಘೋರ ವಿಪತ್ತಿನಿಂದ ದೇಶ, ರಾಜ್ಯ, ಜನರು ಕಾಪಾಡಲು ಋುುಷಿ ಮುನಿಗಳಿಂದ ಸಾಧ್ಯ. ಭಯಾನಕ ರೋಗದಿಂದ ವಿಮುಕ್ತಿ ಗಳಿಸಲೆಂದು ತಮ್ಮಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಆಶೀರ್ವಚನ ನೀಡಿದ ಪೀಠಾಧ್ಯಕ್ಷರು ಮಾತನಾಡಿ, ಪ್ರತಿಯೊಬ್ಬರು ದೇವರಲ್ಲಿ ಪ್ರಾರ್ಥಿಸುವ ಮೂಲಕ ಕೊರೋನಾ ನಿಯಂತ್ರಣಕ್ಕೆ ತರಬೇಕು. ಧರ್ಮ ಜಗತ್ತಿನೆಡೆಗೆ ಕೊಂಡೊಯ್ಯಲು ರಕ್ಷಣೆ ಮಾಡಲು ಪೀಠದ ಹೊಣೆಯಾಗುತ್ತದೆ. ಇಂತಹ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಧರ್ಮವನ್ನು ರಕ್ಷಣೆ ಮಾಡುವ ಮೂಲಕ ಪ್ರತಿಯೊಬ್ಬರೂ ಕಂಕಣಬದ್ಧರಾಗಿರೋಣ ಎಂದು ತಿಳಿಸಿದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!