ಜೆಡಿಎಸ್‌ಗೆ ಸಿಕ್ತು ಅಧಿಕಾರ : ಅವಿರೋಧ ಆಯ್ಕೆ

Kannadaprabha News   | Asianet News
Published : Sep 09, 2020, 11:17 AM IST
ಜೆಡಿಎಸ್‌ಗೆ ಸಿಕ್ತು ಅಧಿಕಾರ : ಅವಿರೋಧ ಆಯ್ಕೆ

ಸಾರಾಂಶ

ಹೆಚ್ಚು ಸದಸ್ಯ ಬಲ ಹೊಂದಿದ ಜೆಡಿಎಸ್‌ಗೆ ಅಧ್ಯಕ್ಷ ಪಟ್ಟ ಒಲಿದಿದೆ. ಮಂಡ್ಯದ ಜೆಡಿಎಸ್ ಮುಖಂಡ ಚೆಲುವರಾಯಸ್ವಾಮಿ ಬೆಂಬಲಿತ ಅಭ್ಯರ್ಥಿಗೆ ಅಧಿಕಾರ ದೊರಕಿದೆ. 

ನಾಗಮಂಗಲ (ಸೆ.09):  ತಾಲೂಕು ಪಂಚಾಯ್ತಿಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಬೆಂಬಲಿತ ನೆಲ್ಲಿಗೆರೆ ಕ್ಷೇತ್ರದ ಭಾರತಿ ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗಧಿಯಾಗಿತ್ತು. ಭಾರತಿ ಬಸವರಾಜು ಹೊರತು ಬೇರೆ ಯಾರು ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿಲ್ಲ. ಹಾಗಾಗಿ ಭಾರತಿ ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಪ್ರಕಟಿಸಿದರು

ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾದ ಪ್ರಭಾವಿ ಮುಖಂಡ ...

18 ಸದಸ್ಯ ಬಲ ಹೊಂದಿರುವ ನಾಗಮಂಗಲ ತಾಪಂ ನಲ್ಲಿ ಜೆಡಿಎಸ್‌ನ 16 ಮಂದಿ ಹಾಗೂ ಕಾಂಗ್ರೆಸ್‌ ಪಕ್ಷದ ಇಬ್ಬರು ಸದಸ್ಯರಿದ್ದು, ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದ 16 ಮಂದಿ ಸದಸ್ಯರ ಪೈಕಿ ಜೆಡಿಎಸ್‌ನ 12 ಮಂದಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿರೊಂದಿಗೆ ಗುರುತಿಸಿಕೊಂಡಿದ್ದು, ಇನ್ನುಳಿದಂತೆ ಅಧ್ಯಕ್ಷ ದಾಸೇಗೌಡ ಸೇರಿ ಆರು ಮಂದಿ ಸದಸ್ಯರು ಶಾಸಕ ಸುರೇಶ್‌ ಗೌಡರೊಂದಿಗೆ ಗುರುತಿಸಿಕೊಂಡಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!