ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಾಣಕ್ಕೆ ಹೊರಟಿರುವುದು ಸೋನಿಯಾ ಮೆಚ್ಚುಗೆ ಪಡೆಯಲು ಎಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ಕನಕಪುರ [ಡಿ.28]: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಮೆಚ್ಚಿಸಿ ಕಾಂಗ್ರೆಸ್ ಅಧ್ಯಕ್ಷಗಿರಿ ಗಿಟ್ಟಿಸಿಕೊಳ್ಳಲು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು 114 ಅಡಿ ಎತ್ತರದ ಏಸುಕ್ರಿಸ್ತನ ಪ್ರತಿಮೆಯನ್ನು ನಿರ್ಮಿಸಲು ಹೊರಟಿದ್ದಾರೆ. ತಾಲೂಕನ್ನು ಮತ್ತೊಂದು ಲಂಡನ್ ಸಿಟಿ ಮಾಡಲು ಬಿಡುವುದಿಲ್ಲ ಎಂದು ಬಿಜಿಪಿ ಮುಖಂಡ ಬಿ.ನಾಗರಾಜು ಎಚ್ಚರಿಸಿದರು.
ನಗರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನರು ಮತ್ತು ರೈತರ ಹಿತ ಕಾಪಾಡುವುದನ್ನು ಬಿಟ್ಟು ಕಾಂಗ್ರೆಸ್ ಅಧ್ಯಕ್ಷೆ ಮನವೊಲಿಸಿಕೊಳ್ಳಲು, ಅಧಿಕಾರವನ್ನು ಪಡೆಯಲು ಉಡುಗೊರೆಯಾಗಿ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಕ್ರೈಸ್ತ ಕುಟುಂಬದಿಂದ ಪ್ರಾರಂಭವಾದ ಹಾರೋಬೆಲೆ ಗ್ರಾಮ ಮತಾಂತರಗೊಂಡಿರುವ 800 ಕುಟುಂಬಗಳಿಂದ ತುಂಬಿದೆ. ಇವರೆಲ್ಲಾ ಇಂಗ್ಲೆಂಡಿನಿಂದ ಬಂದವರಲ್ಲಿ ನಮ್ಮ ನಡುವೆ ಇದ್ದ ಜನರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಮತಾಂತರ ಮಾಡಿದ್ದಾರೆ ಎಂದರು.
ಮತಾಂತರಗೊಂಡ ಗ್ರಾಮಗಳು ಒಂದಕ್ಕೆ ಮೂರಾಗಿವೆ. ಕನಕಪುರದಲ್ಲಿ ಪೂರ್ವದಲ್ಲಿ ಒಂದೇ ಒಂದು ಚಚ್‌ರ್ ಇತ್ತು. ಇಂದು ಹತ್ತಾರು ಚಚ್‌ರ್‍ಗಳಾಗಿವೆ. ನಮಗೆ ಕಾಣದಂತೆ, ಗೊತ್ತಿಲ್ಲದಂತೆ ನಮ್ಮ ತಾಲೂಕಿನಲ್ಲಿ ನಿರಂತರವಾಗಿ ಮತಾಂತರ ಕಾರ್ಯ ನಡೆಯುತ್ತಿದೆ. ಶಿವಕುಮಾರ್ ಅವರು ಬಹಿರಂಗವಾಗಿಯೆ ಮತಾಂತರ ಕಾರ್ಯಕ್ಕೆ ಸಹಕಾರ ನೀಡಲು ಮುಂದಾಗಿದ್ದಾರೆ ಎಂದು ದೂರಿದರು.
ಈ ಕಾರಣದಿಂದಲೇ ಬೇರೆ ಯಾವ ರಾಜ್ಯದಲ್ಲೂ ಮಾಡದ, ವಿಶ್ವದಲ್ಲೇ ಅತಿದೊಡ್ಡ ಏಸುಕ್ರಿಸ್ತನ ಪ್ರತಿಮೆಯನ್ನು ತಾಲೂಕಿನಲ್ಲಿ ನಿರ್ಮಾಣ ಮಾಡಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯನ್ನು ಮತಾಂತರ ಮಾಡಿ ಮತ್ತೊಂದು ಲಂಡನ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಏಸುಕ್ರಿಸ್ತ ಈ ತಾಲೂಕಿಗೆ, ಈ ಜಿಲ್ಲೆಗೆ, ಈ ರಾಜ್ಯಕ್ಕೆ, ಈ ರಾಷ್ಟಕ್ಕೆ ಯಾರು? ಏನು ಕೊಡುಗೆ ಕೊಟ್ಟಿದ್ದಾರೆ. ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯನವರು, ಕನಕಪುರ ತಾಲ್ಲೂಕಿಗೆ ಶಿಕ್ಷಣದ ಬೆಳಕು ನೀಡಿದ ಎಸ್.ಕರಿಯಪ್ಪನವರ ಮೂರ್ತಿಯನ್ನು ಏಕೆ ಶಿವಕುಮಾರ್ ಪ್ರತಿಷ್ಠಾಪಿಸಲಿಲ್ಲ. ಇವರು ಜೈಲಿಗೆ ಹೋದಾಗ ಇಡೀ ಒಕ್ಕಲಿಗ ಸಮುದಾಯವನ್ನು ಸೇರಿಸಿಕೊಂಡು ಇವರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದವರು ಒಕ್ಕಲಿಗ ಸಮುದಾಯದವರು, ಅಂದು ಈ ಕ್ರೈಸ್ತ ಸಮುದಾಯದವರು ಇವರ ಜತೆಗೆ ನಿಲ್ಲಲಿಲ್ಲ. ಒಕ್ಕಲಿಗ ಸಂಸ್ಥಾನದ ಆಶ್ರಯ ಪಡೆದಿರುವ ಇವರು ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಿ, ಅದನ್ನು ಮಾಡುವುದಿಲ್ಲ, ಏಕೆಂದರೆ ಅವರಾರಯರು ಇವರಿಗೆ ಕಾಂಗ್ರೆಸ್ ಟೋಪಿಯನ್ನು ಕೊಡಿಸುವುದಿಲ್ಲವಲ್ಲ ಎಂದು ಕಿಡಿಕಾರಿದರು.
ನೂರಾರು ವರ್ಷಗಳಿಂದ ಗೋಮಾಳ ಉಳಿಸಿಕೊಂಡು ಬಂದಿದ್ದ ಮುನೇಶ್ವರ ಬೆಟ್ಟದಲ್ಲಿ 335 ಎಕರೆ ಜಮೀನನ್ನು ಸುತ್ತಮುತ್ತಲ ಗ್ರಾಮಗಳ ರೈತರಿಗೆ ಸಾಗುವಳಿ ನೀಡದೆ ಮತಾಂತರಗೊಂಡಿರುವ 80 ಕ್ರೈಸ್ತ ಕುಟುಂಬಗಳಿಗೆ ಮಂಜೂರಾತಿ ಮಾಡಿದ್ದಾರೆ. 10 ಎಕರೆ ಭೂಮಿಯನ್ನು 114 ಅಡಿ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಕಪಾಲ ಬೆಟ್ಟಅಭಿವೃದ್ಧಿ ಸಮಿತಿಗೆ ನೀಡಿದ್ದಾರೆ ಎಂದು ದೂರಿದರು.
ಕ್ರೈಸ್ತ ಸಮುದಾಯದರವನ್ನು ಓಲೈಸುವ ಶಿವಕುಮಾರ್ ನಗರದಲ್ಲಿ ಲಕ್ಷಾಂತರ ಭಕ್ತಾದಿಗಳು ಪೂಜಿಸುತ್ತಿದ್ದ ಅಯ್ಯಪ್ಪಸ್ವಾಮಿ ದೇಗುಲವನ್ನು ವರ್ತಕರ ಮೇಲಿನ ಹಗೆಗೆ ಹೊಡೆದು ಹಾಕಿಸಿದರು. ತಾಲೂಕಿನ ಜನತೆ ಮೇಲೆ ಅಭಿಮಾನವಿದ್ದರೆ ಒಂದು ಎಕರೆ ಜಾಗ ಖರೀದಿಸಿ ಅಯ್ಯಪ್ಪ ದೇಗುಲ ನಿರ್ಮಿಸುತ್ತಿದ್ದರು. ಏಕೆ ಮಾಡಲಿಲ್ಲ ಇವರಿಗೆ ತಾಲೂಕಿನ ಜನತೆಯ ಹಿತಾಸಕ್ತಿ ಬೇಕಿಲ್ಲ, ಅವರ ಓಟು ಮಾತ್ರ ಬೇಕಿದೆ ಎಂದು ಜರಿದರು.
ರಾಮನಗರ ಯೇಸು ಪ್ರತಿಮೆ ರಾಜ್ಯಮಟ್ಟದ ಸುದ್ದಿಯಾಗಲು ಏನು ಕಾರಣ?..
ತಾಲೂಕಿನಲ್ಲಿ ಎಲ್ಲಾ ರಾಜಕೀಯ ವಿರೋಧಿಗಳನ್ನು ಮಟ್ಟಹಾಗಿ ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ಶಿವಕುಮಾರ್ ಸಹೋದರರು ತುಘಲಕ್ ರೀತಿ ದರ್ಬಾರ್ ನಡೆಸುತ್ತಿದ್ದಾರೆ. ಅಯ್ಯಪ್ಪ ದೇಗುಲ ಕೆಡವಿಸಿದ ಮೂರೇ ದಿನದಲ್ಲಿ ಜೈಲು ಸೇರಿದರು. ಇದೇ ರೀತಿ ಸೋನಿಯಾ ಮೇಡಂ ಮೆಚ್ಚಿಸಲು ಆಂಧ್ರದಲ್ಲಿ ತಿರುಪತಿ ದೇವಾಲಯವನ್ನೇ ಕ್ರಿಶ್ಚಿಯನ್ ಮಿಷನರಿ ಮಾಡಲು ಹೋದ ರಾಜಶೇಖರ ರೆಡ್ಡಿ ಬೂದಿಯಾದರು ಎಂದು ಎಚ್ಚರಿಸಿದರು.
ಹಿಂದೂ ಜಾಗರಣ ವೇದಿಕೆ ಸಂಚಾಲಕ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಸರ್ಕಾರ ಮಾಡದ ಕೆಲಸಗಳನ್ನು ಶ್ರೀ ಮಠಗಳು ಮಾಡುತ್ತಾ ಬಂದಿವೆ. ಮರಳೇಗವಿ ಮಠವು 10 ವರ್ಷದಿಂದ ಮಠವನ್ನು ಕಟ್ಟಿಸುತ್ತಿದೆ. ಶಿವಕುಮಾರ್ ಅದಕ್ಕೆ ಎಷ್ಟುಸಹಕಾರ ಕೊಟ್ಟಿದ್ದಾರೆ, ಇವರಿಗೆ ಚುನಾವಣೆಯಲ್ಲಿ ಮತ ನೀಡಲು, ರಾಜಕೀಯ ನಾಯಕನನ್ನಾಗಿ ಮಾಡಲು ಈ ತಾಲ್ಲೂಕಿನ ಜನಬೇಕು, ಮಠಗಳು ಬೇಕು, ಆದರೆ ಅವರ ಅಭಿವೃದ್ಧಿ ಮಾತ್ರ ಇವರಿಗೆ ಬೇಕಿಲ್ಲ ಎಂದು ದೂರಿದರು.
ನಾನು ತಪ್ಪು ಮಾಡಿದ್ರೆ ಈಗಲೂ ಜೈಲಿಗೆ ಹಾಕಲಿ...
ನಮ್ಮ ತಾಲ್ಲೂಕಿನಲ್ಲಿ ಯಾವುದೆ ಕಾರಣಕ್ಕೂ ಏಸು ಪ್ರತಿಮೆಯನ್ನು ಮಾಡಲು ಬಿಡುವುದಿಲ್ಲ. ಇದು ನಮ್ಮೊಬ್ಬರ ಹೋರಾಟವಲ್ಲ, ಇದಕ್ಕೆ ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಸಹಕಾರ ನೀಡಿ ಹೋರಾಟವನ್ನು ಬೆಂಬಲಿಸಲಿದ್ದಾರೆ. ಈ ಹೋರಾಟವನ್ನು ಹಳ್ಳಿಯಿಂದ ದಿಲ್ಲಿವರೆಗೂ ತೆಗೆದುಕೊಂಡು ಜನಾಂದೋಲನವನ್ನಾಗಿ ರೂಪಿಸುತ್ತೇವೆ ಎಂದು ತಿಳಿಸಿದರು.