ಬೆಂಗಳೂರಿನ ಡಿಜೆ ಹಳ್ಳಿಯಲ್ಲಿನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಬಿಎಲ್ ಸಂತೋಷ್ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಆ.13) : ತನ್ನ ಪಕ್ಷದ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿಯ ಮನೆಯ ಮೇಲೆ ದಾಂಧಲೆ ನಡೆದಿದ್ದರೂ ಅದನ್ನು ತಕ್ಷಣವೇ ಖಂಡಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಈ ಸಂಬಂಧ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಸ್ಥಳೀಯ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಕಂದಾಯ ಸಚಿವ ಆರ್. ಅಶೋಕ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ತಮ್ಮ ಮನೆಯ ಮೇಲೆ ಯಾವ ರೀತಿ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಯಿತು ಎಂಬುದನ್ನು ವಿವರಿಸಿದ್ದಾರೆ.
undefined
ನಾವು ಅಣ್ಣ ತಮ್ಮಂದಿರಂತೆ ಎಂದ ಸಚಿವ ಸುಧಾಕರ್
ಘಟನೆ ನಡೆದ 14 ಗಂಟೆಗಳ ನಂತರ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಂಡು ಗಲಭೆಗೆ ನವೀನ್‌ರ ಫೇಸ್‌ಬುಕ್ ಪೋಸ್ಟ್ ಮತ್ತು ಕ್ರಮ ಕೈಗೊಳ್ಳಲು ಪೊಲೀಸರು ವಿಳಂಬ ಮಾಡಿದ್ದೇ ಕಾರಣ ಎಂದು ದೂರಿದೆ. ಕಾಂಗ್ರೆಸ್ ಪಕ್ಷ ಇಂತಹ ದೊಂಬಿಯನ್ನು ಬೆಂಬಲಿಸುತ್ತದೆಯೇ? ಅಲ್ಪಸಂಖ್ಯಾತ ಗುಂಪುಗಳಿಂದಾಗುವ ಹಿಂಸಾಚಾರವನ್ನು ಖಂಡಿಸಲು ಕಾಂಗ್ರೆಸ್ ಏಕೆ ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಬಿಎಲ್ ಸಂತೋಷ್‌ಗೆ ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಸಿದ್ದರಾಮಯ್ಯ
ಕನಿಷ್ಟಪಕ್ಷ ನಿಮ್ಮ ಪಕ್ಷದ ಶಾಸಕರೊಬ್ಬರ ಮನೆಗೆ ನುಗ್ಗಿ ದರೋಡೆ ಮಾಡಲಾಗಿದೆ ಎಂಬುದನ್ನಾದರೂ ಒಪ್ಪಿಕೊಳ್ಳಿ. ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಲಾಗಿದೆ. ಏಕೆ ಇಷ್ಟೊಂದು ತುಷ್ಟೀಕರಣ? ನಿಮ್ಮದೇ ಪಕ್ಷದ ಶಾಸಕರನ್ನು ಗುರಿ ಮಾಡಲಾಗಿದ್ದರೂ ಏಕೆ ಭಯ? ದಲಿತ ಶಾಸಕರೊಬ್ಬರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರೂ ಕೂಡ ಕಾಂಗ್ರೆಸ್ ಗಲಭೆ ಮಾಡುವ ಹಕ್ಕಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತಿದೆಯೇ? ಕಾಂಗ್ರೆಸ್ ಪಕ್ಷಕ್ಕೆ ತುಷ್ಠಿಕರಣ ಮಾತ್ರ ಅಧಿಕೃತ ಸಿದ್ಧಾಂತವಾಗಿದೆ ಎಂದು ಸಂತೋಷ್ ಟೀಕಿಸಿದ್ದಾರೆ.