ನಾವು ಅಣ್ಣ ತಮ್ಮಂದಿರಂತೆ ಎಂದ ಸಚಿವ ಸುಧಾಕರ್

Published : Aug 13, 2020, 07:37 AM IST
ನಾವು ಅಣ್ಣ ತಮ್ಮಂದಿರಂತೆ ಎಂದ ಸಚಿವ ಸುಧಾಕರ್

ಸಾರಾಂಶ

ಬೆಂಗಳೂರಿನ ಡಿಜೆ ಹಳ್ಳಿಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಇರೋಣ. ಇದಕ್ಕೆ ಧರ್ಮದ ಬಣ್ಣ ಹಚ್ಚುವುದು ಬೇಡ ಎಂದು ಹೇಳಿದ್ದಾರೆ.

ಬೆಂಗಳೂರು (ಆ.13): ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ನಡೆದಿರುವ ಘಟನೆ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಯಾವುದೇ ಧರ್ಮಕ್ಕೂ ಧಕ್ಕೆಯಾಗಬಾರದು. ನಾವೆಲ್ಲಾ ಅಣ್ಣ ತಮ್ಮಂದಿರಂತೆ ಇರೋಣ. ಎಲ್ಲರೂ ಶಾಂತಿ ಕಾಪಾಡಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದ್ದಾರೆ. 

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ‘ಡಿ.ಜೆ.ಹಳ್ಳಿ ಘಟನೆ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಧರ್ಮಕ್ಕೂ ಧಕ್ಕೆಯಾಗಬಾರದು. ನಾವೆಲ್ಲಾ ಅಣ್ಣ ತಮ್ಮಂದಿರಂತೆ ಇರೋಣ. 

ಕೆ.ಜಿ. ಹಳ್ಳಿ ಆರೋಪಿಗಳನ್ನ ಸುಮ್ನೆ ಬಿಡಲ್ಲ: ಸಚಿವ ಅಶೋಕ್‌ ಶಪಥ

ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಪೊಲೀಸ್‌ ಅಧಿಕಾರಿಗಳು ಗಲಾಟೆಯನ್ನು ಸಂಪೂರ್ಣ ನಿಯಂತ್ರಿಸಿದ್ದಾರೆ. ಶಾಂತಿಯಿಂದ ಇರಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!