ಬಿಜೆಪಿ ಶಾಸಕ ರಾಜೀನಾಮೆ ಬಾಂಬ್ : ಅಸಮಾಧಾನ

By Kannadaprabha NewsFirst Published Oct 12, 2020, 10:38 AM IST
Highlights

ಬಿಜೆಪಿ ಶಾಸಕರೋರ್ವರು ರಾಜೀನಾಮೆ ಬಾಂಬ್ ಸಿಡಿಸಿದ್ದು ಅಸಮಾಧಾನ ವ್ಯಕ್ತವಾಗಿದೆ. 

ಹೊಸದುರ್ಗ (ಅ.12):  ಶಾಸಕರ ಗೂಳಿಹಟ್ಟಿಶೇಖರ್‌ ಪದೇಪದೆ ರಾಜಿನಾಮೆ ಕೊಡುತ್ತೇನೆ ಎಂಬ ಹೇಳಿಕೆ ತಾಲೂಕಿನ ಮತದಾರರಿಗೆ, ಬಿಜೆಪಿ ಕಾರ್ಯಕರ್ತರಿಗೆ, ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುತ್ತದೆ ಎಂದು ರಾಜ್ಯ ಬಿಜೆಪಿ ರೈತಮೋರ್ಚಾ ಮಾಜಿ ಉಪಾಧ್ಯಕ್ಷ ಎಸ್‌. ಲಿಂಗಮೂರ್ತಿ ಹೇಳಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಶಾಸಕರ ಕಡೆಕಣನೆ ಮಾಡಿಲ್ಲ. ಹಾಗೆಯೇ ಯಾವುದೇ ಮಧ್ಯವರ್ತಿಗಳು ಸಂಚು ಮಾಡಿಲ್ಲ. ಇದು ಕಾನೂನಾತ್ಮಕವಾಗಿಯೇ ನಡೆದಿದೆ. ಈ ಬಗ್ಗೆ ಸುಖಾ ಸುಮ್ಮನೆ ಬೇಸರ ವ್ಯಕ್ತಪಡಿಸುವುದಾಗಲಿ, ರಾಜಿನಾಮೆ ನೀಡುವ ಮಾತುಗಳನ್ನಾಡುವುದಾಗಲೀ ಮಾಡುವುದರಿಂದ ವಿರೋಧ ಪಕ್ಷದವರಿಂದ ಅಪಹಾಸ್ಯಕ್ಕೆ ಒಳಗಾಗಬೇಕಾವುದು ಎಂದರು.

ಕುತೂಹಲದ ಕೇಂದ್ರವಾದ ಆರ್‌ ಆರ್ ನಗರ : ಫೈನಲ್ ಆಗಿಲ್ಲ ಬಿಜೆಪಿ ಅಭ್ಯರ್ಥಿ ...

ಕಳೆದ ಒಂದು ವರ್ಷದಲ್ಲಿ ತಾಲೂಕಿನಲ್ಲಿ ಶಾಸಕರು ಕೋಟ್ಯಂತರ ರು. ಅನುದಾನವನ್ನು ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯದ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಅಲ್ಲದೆ ಮುಖ್ಯಮಂತ್ರಿ ಚುನಾವಣೆ ವೇಳೆ ಮಾತು ಕೊಟ್ಟಂತೆ ಹೆಚ್ಚಿನ ಅನುದಾನವನ್ನು ಹೊಸದುರ್ಗ ತಾಲೂಕಿಗೆ ನೀಡುತ್ತಾ ಬರುತ್ತಿದ್ದಾರೆ. ಈ ಮಾತನ್ನು ಸ್ವತಃ ಶಾಸಕರೇ ಅನೇಕ ಬಾರಿ ಹೇಳಿದ್ದಾರೆ. ಹೀಗಿರುವಾಗ ಅನಾವಶ್ಯಕವಾಗಿ ಪದೇ ಪದೆ ಈ ರೀತಿ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸುವುದು ಶೋಭೆಯಲ್ಲ ಎಂದು ತಿಳಿಸಿದರು.

ತಾಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಲ್ಲದೆ ಸ್ಥಳೀಯ ಆಡಳಿತದಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನ ಪಡೆದು ಅಧಿಕಾರ ಪಡೆಯುವಲ್ಲಿ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರ ಪರಿಶ್ರಮವಿದೆ. ನಾನೂ ಕೂಡ ಶಾಸಕರ ಬೇಡಿಕೆಗಳನ್ನು ನಿರ್ಲಕ್ಷ್ಯ ವಹಿಸದೆ ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಶಾಸಕರು ರಾಜಿನಾಮೆ ನೀಡುವ ಮಾತು ಆಡಬಾರದು ಎಂದು ತಿಳಿಸಿದರು.

click me!