
ಚಿಕ್ಕಮಗಳೂರು (ನ.04): ಚುನಾವಣೆಯ ಸಂದರ್ಭದಲ್ಲಿ ಇವಿಎಂ ಬಗ್ಗೆ ಸಂಶಯಪಡುವುದು ಕಾಂಗ್ರೆಸ್ ಪಕ್ಷದ ಹಳೆ ಕಾಯಿಲೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶಿರಾ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಹೇಳಿಕೆಗೆ ಕಿಡಿಕಾರಿದ್ದಾರೆ.
ಇಲ್ಲಿ ಮಾತನಾಡಿದ ಅವರು, ಸೋಲಿನ ಹತಾಶೆಯಿಂದ ಟಿ.ಬಿ.ಜಯಚಂದ್ರ ಚುನಾವಣೆಗೂ ಮುನ್ನ ಇವಿಎಂ ಬಗ್ಗೆ ಮಾತನಾಡಿದ್ದಾರೆ. ಇವಿಎಂಗೆ ಹೊರಗಿನಿಂದ ಯಾವುದೇ ಸಂಪರ್ಕ ಇರುವುದಿಲ್ಲ.
ಮುಂದೂಡಿಕೆಯಾಯ್ತು ಚುನಾವಣಾ ಫಲಿತಾಂಶದ ಡೇಟ್ : ವಿರುದ್ಧ ಅರ್ಜಿ
ಅವರು ಗೆದ್ದರೆ ಜನರ ಜನಾರ್ದನ ತೀರ್ಪು ಎಂದು ಹೇಳುತ್ತಾರೆ. ಸೋತರೆ, ಇವಿಎಂ ದೂರುತ್ತಾರೆ. ಈ ರೀತಿ ಸಂಶಯಪಡಲು ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಕೆ ಸ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಈ ಉಪಚುನಾವಣೆಯಲ್ಲಿ ಗೆಲ್ಲಲು ತಂತ್ರಗಾರಿಕೆ ಮಾಡಿದ್ದರು. ಅದು ಸ್ವಾಭಾವಿಕ. ಆ ಪ್ರಯತ್ನ ಯಶಸ್ವಿಯಾಗಿಲ್ಲ. ಆದ್ದರಿಂದ ಅವರು ಹತಾಶರಾಗಿದ್ದಾರೆ ಎಂದು ಟೀಕಿಸಿದರು.