ಬಿಜೆಪಿ -ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ ಮುಖಂಡರು : ಅಧಿಕಾರಕ್ಕೆ ಬರುವ ವಿಶ್ವಾಸ

By Kannadaprabha NewsFirst Published Sep 13, 2021, 3:37 PM IST
Highlights
  •  ರಾಜ್ಯ ಸೇರಿದಂತೆ ಕ್ಷೇತ್ರದಲ್ಲಿ ರಾಜಕೀಯ ದೃವೀಕರಣ ಆರಂಭ
  • ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ

ಬಂಗಾರಪೇಟೆ(ಸೆ.13):  ರಾಜ್ಯ ಸೇರಿದಂತೆ ಕ್ಷೇತ್ರದಲ್ಲಿ ರಾಜಕೀಯ ದೃವೀಕರಣ ಆರಂಭವಾಗಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದರು.

ಅವರು ತಾಲೂಕಿನ ಐನೋರಹೊಸಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ತೊರೆದು ನೂರಾರು ಮಂದಿ ಕಾಂಗ್ರೆಸ್‌ ಸೇರ್ಪಡೆ ಕಾರ‍್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿರುವುದು ಜನವಿರೋಧಿ, ಭ್ರಷ್ಟಸರ್ಕಾರವಾಗಿದ್ದು, ಇದರಿಂದಾಗಿ ಜನರು ಬದಲಾವಣೆಗಾಗಿ ಕಾಯುತ್ತಿದ್ದಾರೆ ಎಂದರು.

ಟೀಕೆಯಲ್ಲೇ ಕಾಲಹರಣ:  ಕ್ಷೇತ್ರದಲ್ಲಿ ಕಳೆದ 8ವರ್ಷಗಳಲ್ಲಿ ಕ್ಷೇತ್ರದಲ್ಲಿ ಬಹುತೇಕ ಸಮಸ್ಯೆಗಳನ್ನು ನೀಗಿಸಲಾಗಿದೆ. ಆದರೆ ಕೆಲವರು ಆಯ್ಕೆಯಾಗಿ 2 ವರ್ಷವಾದರೂ ಅಭಿವೃದ್ಧಿ ಮರೆತು ಬರೀ ಟೀಕೆಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಹೆಸರು ಹೇಳದೆ ಸಂಸದ ಎಸ್‌.ಮುನಿಸ್ವಾಮಿರನ್ನು ಟೀಕಿಸಿದರು. ನಾನು ಭ್ರಷ್ಟನೋ, ನಿಷ್ಠನೋ ಎಂಬುದು ಜನತಾ ನ್ಯಾಯಾಲಯ ತೀರ್ಮಾನ ಮಾಡಲಿ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ ಕ್ಷೇತ್ರದಲ್ಲಿ ಶಾಸಕರು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದ ಬೆರಗಾಗಿರುವ ಅನ್ಯ ಪಕ್ಷಗಳ ಕಾರ‍್ಯಕರ್ತರು ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ ಎಂಬುದಕ್ಕೆ ಸಾಕ್ಷಿ. ಜಿಪಂ ತಾಪಂ ಚುನಾವಣೆಯಲ್ಲಿ ಎರಡೂ ಸಂಸ್ಥೆಗಳು ಕೈವಶವಾಗುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್‌ ಆಡಳಿವಿದ್ದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಿನ ಬಿಜೆಪಿ ಪಕ್ಷದಿಂದಲ್ಲ ಎಂದು ಕಿಡಿಕಾರಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮಿತ್ರಶ್ರೀನಿವಾಸ್‌, ಭೂ ಬ್ಯಾಂಕಿನ ಅಧ್ಯಕ್ಷ ಎಚ್‌.ಕೆ.ನಾರಾಯಣಸ್ವಾಮಿ, ಮುಖಂಡರಾದ ದೇಶಿಹಳ್ಳಿ ವೆಂಕಟರಾಮ್‌, ಹೊಸೂರು ಕೃಷ್ಣಪ್ಪ, ನಂದಿನ ಪ್ರವೀಣ್‌, ಕೆ.ಸಿ.ಗೋಪಾಲ್‌, ಕಣಿಂಬೆಲೆ ಶ್ರೀನಿವಾಸ್‌,ರಾಮರೆಡ್ಡಿ ಮತ್ತಿತರರು ಇದ್ದರು.

click me!